BIG NEWS | ಓಲಾ ಉಬರ್ ಮೇಲೆ ಸರ್ಕಾರದ ಮೂಗುದಾರ, ದುಪ್ಪಟ್ಟು ಹಣ ವಸೂಲಿಗೆ ಬೀಳಲಿದೆ ಕಡಿವಾಣ

ಕರ್ನಾಟಕ ಸರ್ಕಾರವು ಓಲಾ ಮತ್ತು ಉಬರ್ ಕಂಪೆನಿಗಳಿಗೆ ಮೂಗುದಾರ ಹಾಕಲು ಪ್ರಯತ್ನ ಮಾಡಿದೆ. ಪೀಕ್ ಟೈಮ್ ಸೇರಿದಂತೆ ಹಲವಾರು ನೆಪಗಳಲ್ಲಿ ಗ್ರಾಹಕರಿಂದ ಮತ್ತು ಚಾಲಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರವು ಮುಂದಾಗಿದೆ. ಇದು ಜನಸಾಮಾನ್ಯರು ಸಂತಸ ಪಡುವ ವಿಚಾರವಾಗಿದೆ.

ಸ್ವಲ್ಪವೇ ಸಮಯದಲ್ಲಿ ಅಂದರೆ ಇನ್ನೊಂದು ವಾರದಲ್ಲಿ ಹೊಸ ದರ ಪ್ರಕಟಗೊಳ್ಳಬಹುದು. ಈ ಹೊಸ ದರ ಜಿ.ಎಸ್​.ಟಿ ಯನ್ನು ಒಳಗೊಂಡಿರುತ್ತದೆ. ಮತ್ತು ದರ 35 ರಿಂದ 40 ರೂಪಾಯಿಗೆ ಇಳಿಕೆಯಾಗಿದೆ. ಈ ಹಿಂದೆ ರಾಜ್ಯ ಸರ್ಕಾರವು ಎರಡೂ ಅಗ್ರಿಗೇಟರ್​ ಆ್ಯಪ್ ಕಂಪನಿಗಳಾದ ಓಲಾ,ಉಬರ್ ಗೆ ಹೊಸ ದರ ನಿಗದಿಪಡಿಸಲು 15 ದಿನಗಳ ಗಡುವು ನೀಡಿತ್ತು. ಈ ಗಡುವು ಮುಕ್ತಾಯವಾಗಿರುವುದರಿಂದ ಇದೀಗ ಸರ್ಕಾರವೇ ಹೊಸ ದರ ನಿಗದಿಪಡಿಸಲು ಮುಂದಾಗಿದೆ.

ಸಾರಿಗೆ ಇಲಾಖೆ 2 ಕಿ.ಮೀಗೆ ₹ 30 ದರವನ್ನು ನಿಗದಿಪಡಿಸಿದೆ.
ಓಲಾ,ಊಬರ್ ಕಂಪನಿಗಳು ಮಿನಿಮಮ್ ದರವನ್ನು ₹ 100 ವಸೂಲಿ ಮಾಡುತ್ತಿತ್ತು. ಇದೀಗ ಮುಂದಿನ ವಾರದಿಂದಲೇ ಹೊಸ ದರ ಪ್ರಕಟ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ.

ಈ ನಿಯಮವನ್ನು ಉಲ್ಲಂಘಿಸಿ, ಜನರಿಂದ ದುಬಾರಿ ಹಣ ವಸೂಲಿ ಮಾಡಿದರೆ ಆಟೊ ಚಾಲಕರಿಗೆ ಬಿಸಿ ತಗುಲುವುದು ಖಚಿತ. ಕೊನೆಗೂ ಜನಸಾಮಾನ್ಯರು ಕಡಿಮೆ ದರದ ನಿರೀಕ್ಷಯಲ್ಲಿ ನಿಟ್ಟುಸಿರು ಬಿಡುವಂತಾಯಿತು.

Leave A Reply

Your email address will not be published.