ಹೆಲ್ಮೆಟ್ ರದ್ದುಗೊಳಿಸಿ ಎಂದು ಹೋರಾಟ ಮಾಡಿದ ವಕೀಲ, ಕೊನೆಗೆ ಸತ್ತದ್ದು ಅದೇ ಹೆಲ್ಮೆಟ್ ಹಾಕದ ಕಾರಣಕ್ಕೆ !!!

ಸಂಚಾರಿ ನಿಯಮಗಳನ್ನು ಪಾಲಿಸಲು ಸರ್ಕಾರಗಳು ನಿಯಮಾವಳಿ ರೂಪಿಸಿದರೂ ಕ್ಯಾರೇ ಎನ್ನದೆ ರೂಲ್ಸ್ ಇರುವುದೇ ಬ್ರೇಕ್ ಮಾಡೋದಕ್ಕೆ ಎಂಬಂತೆ ವರ್ತಿಸಿ ಅಪಾಯಕ್ಕೆ ಸಿಲುಕುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.


Ad Widget

Ad Widget

Ad Widget

Ad Widget
Ad Widget

Ad Widget

ಇದಕ್ಕೆ ಸಾಕ್ಷಿ ಎಂಬಂತೆ, ಅಕ್ಟೋಬರ್ 26ರಂದು ಫ್ಲೋರಿಡಾದಲ್ಲಿ ಮೋಟಾರು ಸೈಕಲ್ ಸವಾರರು ಹೆಲ್ಮೆಟ್ ಧರಿಸಬೇಕೆಂಬ ರಾಜ್ಯದ ಕಾನೂನುಗಳ ವಿರುದ್ಧ ಭಾವೋದ್ರೇಕದಿಂದ ವಕೀಲರು ಹೋರಾಡಿದ ಘಟನೆಯ ಬೆನ್ನಲ್ಲೇ, ಅದೇ ಹೆಲ್ಮೆಟಿನ ಕಾರಣದಿಂದ ಜೀವವನ್ನೇ ಕಳೆದುಕೊಂಡ ಘಟನೆ ವರದಿಯಾಗಿದೆ.


Ad Widget

ಕಳೆದ ಆಗಸ್ಟ್‌ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಸ್ಮಾರಕ ಸೇವೆಗೆ ರಾನ್ ಸ್ಮಿತ್ ತೆರಳುತ್ತಿದ್ದ ಫ್ಲೋರಿಡಾದ 66 ವರ್ಷದ ರಾನ್ ಸ್ಮಿತ್ ಮೋಟಾರ್ ಸೈಕಲ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಈ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕಳೆದ 2000 ರಲ್ಲಿ ರಾಜ್ಯದ ಹೆಲ್ಮೆಟ್ ಅಗತ್ಯವನ್ನು ರದ್ದುಗೊಳಿಸಲು ಸಹಾಯ ಮಾಡಿದ ಪ್ರಕರಣಗಳಲ್ಲಿ ಫ್ಲೋರಿಡಾದ ಮೋಟಾರ್‌ಸೈಕಲ್ ನಿಯಮಗಳನ್ನು ಉಲ್ಲಂಘಿಸಿದ ಕ್ಲೈಂಟ್‌ಗಳನ್ನು ಪ್ರತಿನಿಧಿಸಿದ ಸ್ಮಿತ್, ಎಗೇನ್ಸ್ಟ್ ಟಾಲಿಟೇರಿಯನ್ ಎನಾಕ್ಟ್‌ಮೆಂಟ್‌ಗಳ ಸದಸ್ಯರಾಗಿದ್ದರು.

ತಮ್ಮ ಎದುರಿನ ವಾಹನ ದಟ್ಟಣೆ ಮಧ್ಯೆ ಎದುರಿಗಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ರಾನ್ ಸ್ಮಿತ್ ಜೋರಾಗಿ ಬ್ರೇಕ್ ಹಾಕಿದ್ದಾರೆ.

ಇದರಿಂದ ಸ್ಥಳದಲ್ಲಿ ಬಿದ್ದ 66 ವರ್ಷದ ರಾನ್ ಸ್ಮಿತ್ ಹಾಗೂ 62 ವರ್ಷದ ಅವರ ಗೆಳತಿ ಬ್ರೆಂಡಾ ಜೀನನ್ ವೋಲ್ಪೆ ಕೂಡ ಸ್ಥಳದಲ್ಲಿ ಮೃತಪಟ್ಟಿದ್ದು, ಈ ಸಂದರ್ಭದಲ್ಲಿ ಇಬ್ಬರೂ ಕೂಡ ಹೆಲ್ಮೆಟ್ ಧರಿಸರಿರಲಿಲ್ಲ.

ಪ್ರತಿಯೊಬ್ಬರೂ ತಮ್ಮದೇ ಆದ ಆಯ್ಕೆಯನ್ನು ಹೊಂದಿರಬೇಕು ಎಂಬ ಅಭಿಪ್ರಾಯ ಹೊಂದಿದ್ದ ವಕೀಲ ತನ್ನ ಸಣ್ಣ ಬೇಜವಾಬ್ದಾರಿ ನಡೆಯಿಂದ ಸಾವಿನ ದವಡೆಗೆ ಸಿಲುಕುವಂತಾಗಿದ್ದು ವಿಪರ್ಯಾಸ.

error: Content is protected !!
Scroll to Top
%d bloggers like this: