ವೊಡಾಫೋನ್ ಬಂಪರ್ ಆಫರ್ ಗೆ ಫಿದಾ ಜನ | ದಂಗಾಗಿ ಹೋದ ಜಿಯೋ ಏರ್ಟೆಲ್ | ಏನಿದು ಆಫರ್

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು ತರುತ್ತಲೇ ಇದೆ.

ಹಾಗೆಯೇ ವಿ ಟೆಲಿಕಾಂನ 82 ರೂ. ಬೆಲೆಯ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಜನರಿಗೆ ಇನ್ನೊಂದು ಆಫರ್ ನೀಡಿದ್ದಾರೆ. ಇದರಿಂದಾಗಿ ವಿಯ ಈ ಯೋಜನೆಗೆ ಬಳಕೆದಾರರು ಫುಲ್ ಖುಷಿಯಾಗಿದ್ದಾರೆ ಮತ್ತು ಬೇಡಿಕೆ ಹೆಚ್ಚಾಗಿದೆ. ಆದರೆ ಈ ಯೋಜನೆಯಿಂದ ದೇಶದ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ಟೆಲ್ ಗೆ ವೊಡಾಫೋನ್ ಐಡಿಯಾ ದೊಡ್ಡ ಹೊಡೆತ ನೀಡುತ್ತಿದೆ.

ವಿ SonyLIV ಜೊತೆಗೆ ಪಾಲುದಾರಿಕೆ ಹೊಂದಿದೆ ಮತ್ತು SonyLIV ಪ್ರೀಮಿಯಂ ಪ್ರಯೋಜನಗಳೊಂದಿಗೆ ಬರುವ ಹೊಸ ರೂ 82 ಯೋಜನೆಯನ್ನು ಪ್ರಾರಂಭಿಸಿದೆ ಎಂದು ಕಂಪನಿ ಹೇಳಿದೆ.

ಪ್ರೀಮಿಯಂ ಕಾರ್ಯಕ್ರಮಗಳೊಂದಿಗೆ ವಿಶೇಷ ಯೋಜನೆಗಳನ್ನು ನೀಡಲು ಸೋನಿಲೈವ್ ಜೊತೆ ವಿ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ದೊರೆತಿದೆ.

ಅಲ್ಲದೆ ಈ ಯೋಜನೆಯಿಂದ ವಿ ಬಳಕೆದಾರರಿಗೆ ಬಿಂಜ್- ಯೋಗ್ಯ ಕಾರ್ಯಕ್ರಮ ಮತ್ತು ಹೆಚ್ಚುವರಿ ಡೇಟಾ ಪ್ರಯೋಜನಗಳ ಜಗತ್ತನ್ನು ಒಟ್ಟಿಗೆ ತರುತ್ತದೆ. ಗ್ರಾಹಕರಿಗೆ ವಿಶಿಷ್ಟವಾದ ಬಂಡಲ್ ಆಯ್ಕೆಯನ್ನು ರಚಿಸುವ ಮೂಲಕ, ಸೋನಿಲೈವ್ ಸಹಯೋಗದೊಂದಿಗೆ ವಿ ಬಳಕೆದಾರರಿಗೆ ಹೆಚ್ಚುವರಿ ಡೇಟಾ ಪ್ರಯೋಜನಗಳ ಜೊತೆಗೆ ಸೋನಿ ಲೈವ್ ಪ್ರೀಮಿಯಂನ ಚಂದಾದಾರಿಕೆಯನ್ನು ನೀಡುವ ಹೊಸ ಪ್ರಿಪೇಯ್ಡ್ ಪ್ಯಾಕ್ ಇದಾಗಿದೆ.

ಈ ಪ್ಲಾನ್ ನಲ್ಲಿ ಲಭ್ಯವಾಗುವ ಸೋನಿಲೈವ್ ಚಂದಾದಾರಿಕೆ ಪ್ರಯೋಜನ ಕೇವಲ ಮೊಬೈಲ್ ಡಿವೈಸ್ ಗಳಿಗೆ ಮಾತ್ರ ಸೀಮಿತವಾಗಿದೆ. ಅಂದರೆ ನೀವು ನಿಮ್ಮ ಟಿವಿಯಲ್ಲಿ ಸೋನಿಲೈವ್ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಈ ಪ್ಲಾನ್ ನಲ್ಲಿ 14 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುವ 4GB ಡೇಟಾ ಪ್ರಯೋಜನ ಸಿಗಲಿದೆ.

ವೊಡಾಫೋನ್ ಐಡಿಯಾದ151 ರೂ. ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಒಟ್ಟು 8GB ಡೇಟಾ ನೀಡುತ್ತದೆ. ಈ ಯೋಜನೆ 30 ದಿನಗಳ ಮಾನ್ಯತೆ ಹೊಂದಿದೆ. ಆದರೆ, ಈ ಪ್ಲಾನ್‌ ಯಾವುದೇ ಸೇವಾ ಮಾನ್ಯತೆಯನ್ನು ಹೊಂದಿಲ್ಲ ಮಾಹಿತಿ ನೀಡಿರುತ್ತಾರೆ.

Leave A Reply