ಮಹಿಳೆಯರು ಕೋರ್ಟಿನಲ್ಲಿ ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ – ಗಮನ ನಿಮ್ಮ ಕೂದಲಿನತ್ತ ಹೋಗಿ, ಕಲಾಪಕ್ಕೆ ಅಡ್ಡಿ ಆಗುತ್ತೆ ಎಂದ ಕೋರ್ಟು !

ಮಹಿಳಾ ವಕೀಲರು ನ್ಯಾಯಾಲಯದಲ್ಲಿ (Open Court) ನಲ್ಲಿ ತಮ್ಮ ತಲೆಕೂದಲನ್ನು ಸರಿಮಾಡಿಕೊಳ್ಳುವಂತೆ ಇಲ್ಲ, ಹರವಿಕೊಂಡ ಕೂದಲನ್ನು ನೀವಿಕೊಳ್ಳುವ ಹಾಗಿಲ್ಲ. ಯಾಕೆಂದರೆ ಮಹಿಳಾ ವಕೀಲರು ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳುವುದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ. ಹೀಗೆಂದು ಒಂದು ವಿಚಿತ್ರ ಪ್ರಕಟಣೆಯೊಂದನ್ನು ಜಿಲ್ಲಾ ನ್ಯಾಯಾಲಯ (District Court) ಹೊರಡಿಸಿತ್ತು. ಇದೀಗ ಅದರ ಆರ್ಡರ್ ಕಾಪಿ ವೈರಲ್ ಆಗಿದೆ.

ಪುಣೆ ಜಿಲ್ಲಾ ನ್ಯಾಯಾಲಯ (Pune District Court)ಇಲ್ಲಿನ ಮಹಿಳಾ ವಕೀಲರು (Women Advocates) ಓಪನ್ ಕೋರ್ಟ್‌ನಲ್ಲಿ ಪದೇಪದೆ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದು ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಅದು ಗಮನ ಬೇರೆಡೆಗೆ ಸೆಳೆದು ಅಡ್ಡಿ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು.

ಪ್ರಕಟಣೆ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ `ವಾವ್, ಈಗ ಇಲ್ಲಿ ನೋಡಿ, ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ’ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ. ಈಗ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆದಿದೆ.

https://twitter.com/IJaising/status/1584217952114483200/photo/1?ref_src=twsrc%5Etfw%7Ctwcamp%5Etweetembed%7Ctwterm%5E1584217952114483200%7Ctwgr%5E6d5a34b190a289cbfc23b38f703cde6bb6953358%7Ctwcon%5Es1_&ref_url=https%3A%2F%2Fd-2806642903332738490.ampproject.net%2F2210010655000%2Fframe.html

ನ್ಯಾಯಾಲಯದ ಘನತೆಯನ್ನು ಮತ್ತು ಗಾಂಭೀರ್ಯವನ್ನು ಕಾಪಾಡಲು ಮಾತ್ರ ನೋಟಿಸ್ ನೀಡಲಾಗಿದೆಯೇ ಹೊರತು ಯಾರನ್ನೂ ನೋಯಿಸಲು ಮಾಡಿಲ್ಲ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದ ನ್ಯಾಯಾಲಯವು ಈಗ ಆ ವಿಲಕ್ಷಣ ನೋಟಿಸ್ ಹಿಂಪಡೆದಿರುವುದಾಗಿ ಎಂದು ಕೋರ್ಟ್ ಹೇಳಿದೆ.

Leave A Reply

Your email address will not be published.