Koragajja : ಮತ್ತೆ ನಡೆಯಿತು ಕೊರಗಜ್ಜ ದೈವದ ಕಾರ್ಣಿಕ ಶಕ್ತಿ | ಕರಿಗಂಧ ಹಾಕಿದ ಕೂಡಲೇ ಮಗುವಿನ ಆರೋಗ್ಯದಲ್ಲಿ ನಡೆಯಿತು ಪವಾಡ !!!

ತುಳುನಾಡಿನ ಜನರಿಗೆ ಕೊರಗಜ್ಜ ಎನ್ನುವ ಹೆಸರೇ ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಅನೇಕ ಉದಾಹರಣೆಗಳು ನಡೆದಿದೆ, ನಡೆಯುತ್ತಲೇ ಇದೆ. ಅದರಲ್ಲೂ ಎಷ್ಟೇ ಬೆಳೆಬಾಳುವ ವಸ್ತುಗಳು ಕಳೆದು ಹೋದರೂ ದಿಕ್ಕೇ ತೋಚದ ಲಕ್ಷಾಂತರ ಜನ ಮೊದಲು ಕರೆಯುವುದೇ ಆ ದೈವದ ಹೆಸರು. ಅದಕ್ಕೆ ಉದಾಹರಣೆ ಎಂಬಂತೆ ಈಗ ಇನ್ನೊಂದು ಪವಾಡ ನಡೆದಿದೆ.

ತುಳುನಾಡಿನ ಬಹುಜನರ ನಂಬುಗೆಯ ಕೊರಗಜ್ಜ ದೈವ ಮತ್ತೆ ಪವಾಡ ಮೆರೆದಿದೆ. ವೈದ್ಯರೇ ಮಗು ಬದುಕುವ ಭರವಸೆಯನ್ನು ನೀಡದೇ ಇದ್ದ ಸಂದರ್ಭದಲ್ಲಿ, ಕೊನೆಗೆ ಏನೂ ದಿಕ್ಕು ತೋಚದೆ ಇದ್ದಾಗ, ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ ಹಚ್ಚಿದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

ಹೌದು, ಸಾಗರ ಮೂಲದ ನಾಗಶ್ರೀ ಎಂಬುವವರ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗು ವಿಪರೀತ ಜ್ವರದಿಂದ ನರಳುತ್ತಿತ್ತು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು ಅಳು ನಿಲ್ಲಿಸುತ್ತಿರಲ್ಲಿಲ್ಲ. ಹೀಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮಗುವಿಗೆ ಪಿಡ್ಸ್ ಇರುವುದಾಗಿ ಹೇಳಿದ್ದರಿಂದ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ ಹಿನ್ನಲೆಯಲ್ಲಿ ಕೆಎಂಸಿಗೆ ದಾಖಲಿಸಲಾಗಿತ್ತು.

ಐಸಿಯುನಲ್ಲಿದ್ದ ಮಗುವಿನ ಆರೋಗ್ಯ ಚಿಂತಾಜನಕವಾಗಿತ್ತು. ಅಷ್ಟೇ ಅಲ್ಲ ಪದೇ ಪದೇ ಮಗುವಿನ ಹೃದಯ ಸ್ತಬ್ಧವಾಗುತ್ತಿರುವುದರ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದರು ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವ ಬಗ್ಗೆ ವೈದ್ಯರು ಭರವಸೆ ನೀಡಿರಲಿಲ್ಲ.

ಪಾಪ ಹೆತ್ತವರು ಮಗುವಿನ ಪರಿಸ್ಥಿತಿ ಕಂಡು ಮನೆಮಂದಿ ಕಂಗಾಲಾಗಿ ಹೋಗಿದ್ದರು. ಅಷ್ಟರಲ್ಲಿ ಅಸ್ಪತ್ರೆ ಬಳಿಯಿದ್ದ ಓರ್ವ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಎಲ್ಲಾ ಒಳ್ಳೆಯದಾಗುತ್ತೆ ಎಂದು ಹೇಳಿದ ಕಾರಣ, ಮಗುವಿನ ಹೆತ್ತವರು ಇಂದ್ರಾಳಿ, ಎಂಜಿಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದು ವಾಪಾಸ್ ಆಸ್ಪತ್ರೆಗೆ ಬರುತ್ತಾರೆ.

ಕೊರಗಜ್ಜನ ಆ ಕರಿಗಂಧವನ್ನು ಮಗುವಿನ ಹಣೆ ಇಡುತ್ತಿದ್ದಂತೆಯೇ, ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಆರೋಗ್ಯ ದಿಢೀರಾಗಿ ಚೇತರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ತಕ್ಷಣವೇ ವೈದರು ಕೂಡ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವ ಮೂಲಕ ಮಗು ಆರೋಗ್ಯವಾಗಿ ಹೆತ್ತಮ್ಮಳ ಕೈಯಿಗೆ ಸೇರಿದೆ.

ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಪುಟ್ಟ ಕಂದ ಮತ್ತೆ ಮಂದಹಾಸ ಬೀರುತ್ತಾ, ಕಿಲಕಿಲ ನಗುತ್ತಿರುವುದನ್ನು ಕಂಡು ಪೋಷಕರ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ. ಇದಕ್ಕೆಲ್ಲ ಕಾರಣ ನಂಬಿದ ಕೊರಗಜ್ಜ ಎನ್ನುವುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಆಸ್ಪತ್ರೆಯಿಂದ ನೇರವಾಗಿ ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಮಗುವನ್ನು ಕೊರಗಜ್ಜ ಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದುಕೊಂಡು, ಬದುಕಿರುವವರೆಗೂ ಈ ಮಗು ಕೊರಗಜ್ಜನ ಪ್ರಸಾದ ಎಂದೇ ನಂಬಿ ಬದುಕುತ್ತೇವೆ ಎಂದು ಹೇಳುತ್ತಾ ಆನಂದಭಾಷ್ಪದೊಂದಿಗೆ ತಮ್ಮೂರಿಗೆ ತೆರಳಿದ್ದಾರೆ.

ಇಂದ್ರಾಳಿ ಬಳಿಯಿರುವ ಕ್ಷೇತ್ರದಲ್ಲಿ ಇಂತಹ ಹತ್ತಾರು ಪವಾಡಗಳು ನಡೆಯುತ್ತಿರುತ್ತಿದ್ದು ಕೊರಗಜ್ಜನ ಪವಾಡಕ್ಕೆ ಭಕ್ತರು ಮಾರು ಹೋಗಿದ್ದಾರೆ.

Leave A Reply

Your email address will not be published.