ಪೊಲೀಸ್ ವೆಬ್ಸೈಟ್ ವಿಳಾಸದಲ್ಲಿ ಬದಲಾವಣೆ | ಹೊಸ ಅಡ್ರೆಸ್ ಹೀಗಿದೆ…

ರಾಜಧಾನಿ ಬೆಂಗಳೂರು ನಗರ ಪೊಲೀಸ್ ವೆಬ್​ಸೈಟ್ ನಲ್ಲಿ ಅಧಿಕಾರಿಗಳು ಮಹತ್ವ ನಿರ್ಧಾರ ಕೈಗೊಂಡಿರುವ ಮಾಹಿತಿ ಹೊರಡಿಸಿರುತ್ತಾರೆ. ಪೋಲೀಸ್ ವೆಬ್‌ಸೈಟ್‌ಗಳ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹೌದು ಪ್ರಸ್ತುತ ರಾಜಧಾನಿ ಬೆಂಗಳೂರು ನಗರ ಪೊಲೀಸ್ ವೆಬ್​ಸೈಟ್​ ವಿಳಾಸದಲ್ಲಿ ಆಗಿರುವ ಬದಲಾವಣೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪೊಲೀಸ್ ಗಣಕ ವಿಭಾಗದ ಇ-ಮೇಲ್ ಸಂದೇಶದಲ್ಲಿ ತಿಳಿಸಿರುವಂತೆ ರಾಜ್ಯ ಪೊಲೀಸ್‌ನ ಎಲ್ಲಾ ಜಿಲ್ಲೆಗಳ ವೆಬ್‌ಸೈಟ್‌ಗಳ ಸುರಕ್ಷತಾ ದೃಷ್ಟಿಯಿಂದ ಇ-ಆಡಳಿತ ಕೇಂದ್ರದ ಜಾಲತಾಣ ವಿಭಾಗದವರು ಅಭಿವೃದ್ಧಿಪಡಿಸಿರುವ ಮಾನದಂಡಗಳನ್ನೊಳಗೊಂಡ ಹೊಸ ವೆಬ್​ಸೈಟ್​ ಬದಲಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೀಗಾಗಿ ಇಲ್ಲಿಯವರೆಗೂ ಬೆಂಗಳೂರು ನಗರ ಪೊಲೀಸ್ ವೆಬ್‌ಸೈಟ್ ವಿಳಾಸ http://www.bcp.gov.in ಎಂದು ಉಪಯೋಗಿಸಲಾಗುತ್ತಿತ್ತು. ಇನ್ನು ಮುಂದೆ ಅದು http://www.bcp.karnataka.gov.in ಎಂದು ಇರಲಿದೆ ಎಂದು ಮಾಹಿತಿ ನೀಡಲಾಗಿದೆ.

Leave A Reply

Your email address will not be published.