ಸುದೀಪ್​ ಇಲ್ಲದ ವಾರಾಂತ್ಯ! ಹೇಗೆ ಎಲಿಮಿನೇಷನ್​ ಮಾಡ್ತಾರೆ ಬಿಗ್​ ಬಾಸ್​?

ಬಿಗ್ ಬಾಸ್ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ ಇರುವ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಬಿಗ್ ಬಾಸ್ ಸೀಸನ್ ನಲ್ಲಿ ಸುದೀಪ್ ನಿರೂಪಣೆ ನೋಡೋಕೆ ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ ಇಂತ ಸಮಯದಲ್ಲಿ ಟಿ ಆರ್​ ಪಿ ಸಖತ್ತಾಗಿ ಓಡ್ತಾ ಇರುತ್ತೆ. ಆದ್ರೆ ಈ ವೀಕೆಂಡ್ ಕಿಚ್ಚ ಸುದೀಪ್ ಬಂದಿಲ್ಲ. ಪುನೀತ್ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಲು ಈ ವೀಕೆಂಡ್ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಟ್ಟಿಲ್ಲ.
ಈ ವಾರ ಮನೆಯಿಂದ ಆಚೆ ಹೋಗಲು ನೇಹಾ ಗೌಡ, ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಗುರೂಜಿ, ಮಯೂರಿ, ಸಾನ್ಯಾ ಐಯ್ಯರ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಸೂದೀಪ್​ ಬರದೇ ಇರುವ ಕಾರಣದಿಂದಾಗಿ ವಿಭಿನ್ನ ಟಾಸ್ಕ್ ಗಳ ಮೂಲಕ ಒಬ್ಬ ಅಭ್ಯರ್ಥಿಯನ್ನು ಎಲಿಮೆನೇಟ್ ಮಾಡಲಾಗುತ್ತೆ.


Ad Widget

ಮಯೂರಿ ಅವರು ಟಾಸ್ಕ್ ಆಡುತ್ತಿದ್ದಾರೆ. ಕಳೆದ ಬಾರಿ ಮಯೂರಿ ಅವರು ಹೋಗ್ತಾರೆ ಎಂದು ಹೇಳಲಾಗ್ತಿತ್ತು, ಆದ್ರೆ ಸೇವ್ ಆಗಿದ್ರು. ಈ ಬಾರಿ ಸೇವ್ ಆಗ್ತಾರಾ ನೋಡಬೇಕು. ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ಸಾನ್ಯಾ ಐಯ್ಯರ್, ಸೇಬು ಕಟ್ ಮಾಡುತ್ತಿದ್ದಾರೆ. ಯಾರು ಸೇಬು ರೆಡ್ ಆಗಿರುತ್ತೋ ಅವರು ಮುಂದಿನ ಟಾಸ್ಕ್ ಆಡಬೇಕು. ಗ್ರೀನ್ ಬಂದವರು ಸೇವ್ ಆಗ್ತಾರೆ. ಎಲ್ಲಾ ಟಾಸ್ಕ್ ಗಳು ಮುಗಿದಿದ್ದು, ಯಾರು ಔಟ್ ಆಗ್ತಾರೆ ಎಂದು ಎಲ್ಲರೂ ಆತಂಕಗೊಂಡಿದ್ದಾರೆ. ಟೆನ್ಶನ್ ನಲ್ಲಿ ಕೂತಿರುವ ಮಯೂರಿ, ದಿವ್ಯಾ, ನೇಹಾ ಗೌಡ. ಈ ಬಾರಿ ಮನೆಯಿಂದ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಲು ಬೈಕ್ ಬರುತ್ತೆ. ಇಬ್ಬರು 2 ಬೈಕ್ ಗಳಲ್ಲಿ ಹೋಗಬೇಕು. ಯಾರ ಬೈಕ್ ವಾಪಸ್ ಬರುತ್ತೋ ಅವರು ಸೇವ್ ಆಗ್ತಾರೆ. ಇನ್ನೊಬ್ಬರು ಎಲಿಮಿನೇಟ್ ಆಗ್ತಾರೆ.

ಸೃಜನಾತ್ಮಕವಾಗಿ ಬಿಗ್​ ಬಾಸ್​ ಗೇಮ್​ಗಳನ್ನು ಆಡಿಸುತ್ತಿರುವ ಹಿನ್ನಲೆಯಲ್ಲಿ ಎಲಿಮಿನೇಷನ್​ ಮಾಡುವ ವಿಧಾನವನ್ನೂ ಕೂಡ ಭಿನ್ನವಾಗಿದೆ. ಟಾಸ್ಕ್​ಗಳ ಮೂಲಕ ಯಾರು ಸೇಫ್​ ಮತ್ತು ಯಾರು ಎಲಿಮಿನೇಷನ್​ ಆಗ್ತಾರೆ ಎಂಬುದು ಕಾದು ನೋಡಬೇಕಾಗಿದೆ.

error: Content is protected !!
Scroll to Top
%d bloggers like this: