iQoo Neo 7 : ಫಾಸ್ಟ್ ಚಾರ್ಜಿಂಗ್ ಹೊಂದಿದ ಐಕ್ಯೂ ನಿಯೋ 7 ಸ್ಮಾರ್ಟ್ ಫೋನ್ ಮಾರುಕಟ್ಟೆಗೆ | ಇದರ ಬೆಲೆ ಎಷ್ಟು?

ದಿನಂಪ್ರತಿ ಹೊಸ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಜನರ ಮನ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಕ್ಯಾಮೆರಾ, ಬ್ಯಾಟರಿ ಫೀಚರ್ಸ್​ಗಳ ಮೂಲಕ ವಿಶೇಷತೆಯಿಂದ ಕೂಡಿರುತ್ತವೆ.

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್​ನೊಂದಿಗೆ ಮತ್ತೆ ಬಂದಿದೆ

.ಈ ವರ್ಷದ ಆರಂಭದಲ್ಲಿ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ರಿಲೀಸ್ ಮಾಡಿದೆ.

ಇದು ಕೂಡ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯಂತ ವೇಗದ ಚಾರ್ಜರ್​​ನಿಂದ ಕೂಡಿದೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ತಿಂಗಳು ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.

ಐಕ್ಯೂ ನಿಯೋ 7 ಸ್ಮಾರ್ಟ್​ಫೋನ್ ಒಟ್ಟು ನಾಲ್ಕು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದ್ದು, ಇದರ 8GB of RAM ಹಾಗೂ 128GB ಆಂತರಿಕ ಸಂಗ್ರಹಣೆಯ ವೇರಿಯಂಟ್‌ಗೆ ಚೀನಾದಲ್ಲಿ CNY 2699 ಇದೆ, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 30,900ರೂ. ಎಂದು ಅಂದಾಜಿಸಲಾಗಿದೆ.

8GB + 256GB ವೇರಿಯಂಟ್‌ಗೆ CNY 2999 (ಭಾರತದಲ್ಲಿ ಸುಮಾರು 34,300ರೂ.), 12GB + 256GB ವೇರಿಯಂಟ್‌ಗೆ CNY 3299 (ಭಾರತದಲ್ಲಿ ಸುಮಾರು 37,700ರೂ.), 12GB +512GB ಸ್ಟೋರೇಜ್ ವೇರಿಯಂಟ್‌ಗೆ CNY 3599 ಭಾರತದಲ್ಲಿ ಸುಮಾರು 41,200ರೂ. ನಿಗದಿ ಮಾಡಲಾಗಿದೆ.

ಐಕ್ಯೂ ನಿಯೋ 7 ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಇದೆ.

16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ನಲ್ಲಿ ಕಾರ್ಯನಿರ್ವಹಿಸಲಿದೆ.

ಹಾಗೆಯೇ ಪ್ರಮುಖ SoC 6nm ಪ್ರಕ್ರಿಯೆಯನ್ನು ಆಧರಿಸಿದ್ದು, 3.05GHz ನ ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್​ನಲ್ಲಿ ರನ್‌ ಆಗಲಿದೆ. ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರು ಈ ಹೊಸ ವೈಶಿಷ್ಟ್ಯದ ಪ್ರಯೋಜನ ಪಡೆಯಬಹುದು.

1 Comment
  1. Tristan says

    Wow, superb blog layout! How long have you ever been blogging
    for? you make running a blog look easy. The entire look
    of your website is great, let alone the content material! You can see similar
    here ecommerce

Leave A Reply

Your email address will not be published.