Business Idea : ಅಮೂಲ್ ಫ್ರಾಂಚೈಸಿ ಪಡೆದುಕೊಂಡು‌ ಈ ರೀತಿ ದುಡ್ಡು ಮಾಡಿ!!!

ಅಮುಲ್’ ಎಂಬ ( Amul ) ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (Gujarat Cooperative Milk Marketing Federation – GCMMF) ಪೂರ್ಣ ಕೆನೆ ಹಾಲು ಮತ್ತು ಎಮ್ಮೆ ಹಾಲು ಹೀಗೆ ನಾನಾ ವಿಭಿನ್ನ ಆಹಾರ ಉತ್ಪನ್ನಗಳ ಮೂಲಕ ಜನರ ಮನೆ ಮಾತಾಗಿದೆ.

ಅದರಲ್ಲೂ ಕೂಡ ಅಮೂಲ್ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಸ್ವಂತ ಉದ್ದಿಮೆ ಆರಂಭಿಸಲು ಚಿಂತನೆ ನಡೆಸುತ್ತಿರುವವರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದ್ದು, ಅಮೂಲ್ ಜೊತೆ ಕೈ ಜೋಡಿಸಿ ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಇದಕ್ಕೆ ಅಮೂಲ್ ಫ್ರಾಂಚೈಸಿ ಖರೀದಿ ಮಾಡುವುದು ಅವಶ್ಯಕ.

ಸಾಮಾನ್ಯವಾಗಿ ವ್ಯಾಪಾರ (Business) ಆರಂಭಿಸಿದ ಮೇಲೆ ಆದಾಯ ಗಳಿಕೆಗೆ ಸಮಯ ಹಿಡಿಯುವುದು ಸಾಮಾನ್ಯ. ಆದರೆ, ಅಮೂಲ್ (Amul ) ಫ್ರಾಂಚೈಸಿ ಖರೀದಿಸಿದರೆ ಮೊದಲ ದಿನದಿಂದಲೇ ನೀವು ಗಳಿಕೆ ಶುರು ಮಾಡಬಹುದಾಗಿದ್ದು, ಸಣ್ಣ ಹೂಡಿಕೆಗಳಲ್ಲಿ ಪ್ರತಿ ತಿಂಗಳು ನಿಯಮಿತ ಗಳಿಕೆಯನ್ನು ಮಾಡಬಹುದಾಗಿದೆ.

ಅಮುಲ್‌ನ ಫ್ರಾಂಚೈಸಿ (Franchise ) ಯನ್ನು ತೆಗೆದುಕೊಳ್ಳುವುದು ಲಾಭದಾಯಕ ವ್ಯವಹಾರವಾಗಿದ್ದು, ನಷ್ಟದ ಪಾಲು ಅತಿ ಕಡಿಮೆ ಎನ್ನಬಹುದು.

2 ಲಕ್ಷ ಹೂಡಿಕೆ (Investment) ಮಾಡಿ ವ್ಯಾಪಾರ ಆರಂಭಿಸಬಹುದು. ಅಮೂಲ್ ಯಾವುದೇ ರಾಯಲ್ಟಿ ಅಥವಾ ಲಾಭ ಹಂಚಿಕೆ ಇಲ್ಲದೆ ಫ್ರಾಂಚೈಸಿಗಳನ್ನು ನೀಡುವುದರಿಂದ ಅಮೂಲ್ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಹೆಚ್ಚಿನ ಶುಲ್ಕವಿಲ್ಲದೆ ಇರುವುದರಿಂದ ಆರಾಮವಾಗಿ, 2 ಲಕ್ಷದಿಂದ 6 ಲಕ್ಷ ರೂಪಾಯಿ ಖರ್ಚು ಮಾಡಿ ವ್ಯಾಪಾರವನ್ನು ಆರಂಭಿಸಬಹುದಾಗಿದೆ.

ಅಮೂಲ್ ಫ್ರಾಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದ್ದು, ಏಷ್ಟು ಜಾಣ್ಮೆಯಿಂದ ಮಾರಾಟ ಮಾಡುವ ಜೊತೆಗೆ ಲಾಭ ಗಳಿಕೆಗೆ ಮಾರಾಟ ಮಾಡಲು ಯೋಜಿಸುವ ಸ್ಥಳ ಕೂಡ ಮುಖ್ಯ ಪಾತ್ರ ವಹಿಸುತ್ತದೆ.


ಅಮೂಲ್ ಔಟ್ಲೆಟ್ ಅನ್ನು ತೆಗೆದುಕೊಂಡಾಗ, ಕಂಪನಿಯು ಅಮೂಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (MRP) ಮೇಲೆ ಕಮಿಷನ್ ಪಾವತಿಸುತ್ತದೆ. ಇದರಲ್ಲಿ ಒಂದು ಹಾಲಿನ ಪೌಚ್ ಮೇಲೆ ಶೇಕಡಾ 2.5ರಷ್ಟು, ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 10 ಮತ್ತು ಐಸ್ ಕ್ರೀಂ ಮೇಲೆ ಶೇಕಡಾ 20ರಷ್ಟು ಕಮಿಷನ್ ಲಭ್ಯವಾಗುತ್ತದೆ.

ಅಮೂಲ್ ಎರಡು ರೀತಿಯ ಫ್ರಾಂಚೈಸಿಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಒಂದು ಅಮೂಲ್ ಔಟ್ಲೆಟ್ . ಅಮೂಲ್ ರೈಲ್ವೇ ಪಾರ್ಲರ್ ಅಥವಾ ಅಮೂಲ್ ಕಿಯೋಸ್ಕ್ ಫ್ರಾಂಚೈಸಿ. ಎರಡನೆಯದಾಗಿ ಅಮೂಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ.


ಅಮೂಲ್ ಔಟ್ಲೆಟ್ ಫ್ರಾಂಚೈಸಿ ಖರೀದಿ ಮಾಡಿದರೆ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಮೂಲ್ ಐಸ್ ಕ್ರೀಂ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುವುದಾದರೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.

ಇದಕ್ಕೆ ಪೂರಕವಾಗಿ ಅಮೂಲ್ ನಿಮ್ಮಿಂದ ಬ್ರ್ಯಾಂಡ್ ಭದ್ರತೆಯನ್ನು ಪಡೆಯುತ್ತದೆ. ಇದಕ್ಕಾಗಿ ನೀವು 25 ರಿಂದ 50 ಸಾವಿರ ರೂಪಾಯಿಗಳನ್ನು ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆಯಾಗಿ ಪಾವತಿಸಬೇಕಾಗುತ್ತದೆ.
ಅಮೂಲ್ ಔಟ್ಲೆಟ್ ತೆಗೆದುಕೊಂಡರೆ 150 ಚದರ ಅಡಿ ಜಾಗದ ಅವಶ್ಯಕತೆಯಿರುತ್ತದೆ.

ಅಮೂಲ್ ಐಸ್ ಕ್ರೀಮ್ ಪಾರ್ಲರ್‌ನ ಫ್ರಾಂಚೈಸಿ ತೆಗೆದುಕೊಂಡರೆ ಕನಿಷ್ಠ 300 ಚದರ ಅಡಿ ಜಾಗ ಹೊಂದಿರಬೇಕಾಗುತ್ತದೆ.


ಅಮೂಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ನ ಫ್ರಾಂಚೈಸಿ ತೆಗೆದುಕೊಂಡಲ್ಲಿ, ಪಾಕವಿಧಾನ ಆಧಾರಿತ ಐಸ್ ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್‌ವಿಚ್, ಹಾಟ್ ಚಾಕೊಲೇಟ್ ಪಾನೀಯಗಳ ಮೇಲೆ ಶೇಕಡಾ 50 ರಷ್ಟು ಕಮಿಷನ್ ಲಭ್ಯವಾಗುತ್ತದೆ.

ಕಂಪನಿಯು ಪೂರ್ವ ಪ್ಯಾಕ್ ಮಾಡಿದ ಐಸ್ ಕ್ರೀಮ್ ಮೇಲೆ ಶೇಕಡಾ 20ರಷ್ಟು ಮತ್ತು ಅಮೂಲ್ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ಕಮಿಷನ್ ನೀಡುತ್ತದೆ.

ಅಮೂಲ್ ಜೊತೆ ಕೈಜೋಡಿಸಲು ಬಯಸುವವರು ಅಮೂಲ್ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ನೀವು retail@amul.coop ಗೆ ಮೇಲ್ ಮಾಡಬೇಕಾಗುತ್ತದೆ. http://amul.com/m/amul ಲಿಂಕ್‌ಗೆ ಭೇಟಿ ನೀಡುವ ಮೂಲಕ ಅಮೂಲ್ ಪಾರ್ಲರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.


ಜನರು ಅಮುಲ್ ಅನ್ನು ರುಚಿ ಮತ್ತು ಗುಣಮಟ್ಟದಿಂದಾಗಿ ಬ್ರಾಂಡ್ ಆಗಿ ಮೆಚ್ಚಿಕೊಂಡಿರುವುದರಿಂದ ಐಸ್ ಕ್ರೀಮ್ ಪಾರ್ಲರ್ ಪ್ರಾರಂಭಿಸಲು, ಹವಾನಿಯಂತ್ರಣಗಳು ಮತ್ತು ಉತ್ತಮ ಒಳಾಂಗಣವನ್ನು ಹೊಂದಿರುವ ಪ್ರೀಮಿಯಂ ಸ್ಥಳದಲ್ಲಿ ಕನಿಷ್ಠ ಮೂರು ನೂರು ಚದರ ಅಡಿ ವಿಸ್ತೀರ್ಣದಲ್ಲಿ ಆರಂಭಿಸಬಹುದಾಗಿದೆ.

ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವ ಜೊತೆಗೆ ಮಾರ್ಕೆಟಿಂಗ್ ಮಾಡಬೇಕಾದ ಅವಶ್ಯಕತೆ ಕೂಡಾ ಇಲ್ಲಿ ಬರುವುದಿಲ್ಲ.ಕೇವಲ ಒಂದು ಸಣ್ಣ ಹೂಡಿಕೆಯಲ್ಲಿ ಫ್ರಾಂಚೈಸೆನ ಉಪಯೋಗ ಪಡೆಯುವುದರಿಂದ ಉತ್ತಮ
ಲಾಭವನ್ನು ಗಳಿಸಬಹುದಾಗಿದೆ.

1 Comment
  1. sklep internetowy says

    Wow, wonderful weblog structure! How lengthy have you ever been running a blog
    for? you made blogging glance easy. The overall look of your site is magnificent, let alone the content!
    You can see similar here dobry sklep

Leave A Reply

Your email address will not be published.