ಸೇನಾ ಹೆಲಿಕಾಪ್ಟರ್ ಪತನ | ಇಬ್ಬರ ಮೃತದೇಹ ಪತ್ತೆ
| ಕಾಸರಗೋಡು ಮೂಲದ ಸೇನಾ ಸಿಬ್ಬಂದಿ ಕೆ.ವಿ.ಅಶ್ವಿನ್ ಮತ್ಯು

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಫ್ಟರ್ ಒಂದು ಪತನಗೊಂಡಿದೆ.

ಘಟನೆಯಿಂದ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಪ್ರಯಾಣಿಕರ ಪೈಕಿ 2ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ದುರಂತದಲ್ಲಿ ಕೇರಳದ ಚೆರ್ವತ್ತೂರು ಕಾಟು ವಳಪ್ಪಿನ ಅಶೋಕನ್ ಕೆ ವಿ ಕೌಶಲ್ಯ ದಂಪತಿಯ ಪುತ್ರ ವಿ ಅಶ್ವಿನ್ ( 24) ಅವರೂ ಮೃತಪಟ್ಟಿರುವುದಾಗಿ ಸೇನಾಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.

ಅಶ್ವಿನ್ ಅವರು ನಾಲ್ಕು ವರ್ಷದ ಹಿಂದೆ, ಎಲೆಕ್ಟ್ರಿಕಲ್ ಅಂಡ್ ಮೆಕಾನಿಕಲ್ ವಿಭಾಗದ ಇಂಜಿನಿಯರ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.

ಹೆಲಿಕಾಪ್ಟರ್‌ನಲ್ಲಿ ಐದು ಮಂದಿ ಇದ್ದರು. ದೈನಂದಿನ ತಾಲೀಮು ನಿರತವಾಗಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ ಪತನವಾಯಿತು. ಘಟನಾ ಸ್ಥಳದಲ್ಲಿ ಇಬ್ಬರ ಶವಗಳು ಸಿಕ್ಕಿವೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಪತನವಾದ ಪ್ರದೇಶ ಪರ್ವತಗಳಿಂದ ಕೂಡಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ.

ರಾಜ್ಯದಲ್ಲಿ ಈ ತಿಂಗಳು ಸೇನೆಯ ಹೆಲಿಕಾಪ್ಟರ್‌ ಪತನಗೊಂಡ ಎರಡನೇ ಘಟನೆ ಇದಾಗಿದೆ. ಅಕ್ಟೋಬರ್ 5ರಂದು ತವಾಂಗ್‌ ಜಿಲ್ಲೆಯಲ್ಲಿ ಚೀತಾ ಹೆಲಿಕಾಪ್ಟರ್‌ ಪತನವಾಗಿ, ಒಬ್ಬ ಪೈಲಟ್ ಮೃತಪಟ್ಟಿದ್ದರು.

Leave A Reply

Your email address will not be published.