TVS Raider 125 : ಟಿಎಫ್‌ಟಿ ಸ್ಕ್ರೀನ್‌ನೊಂದಿಗೆ ಟಿವಿಎಸ್ ರೈಡರ್ 125 ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯ!!!

ಟಿವಿಎಸ್ ಮೋಟಾರ್ ಕಂಪನಿಯು ಜನತೆಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು ಟಿವಿಎಸ್ ಮೋಟಾರ್ ಕಂಪನಿಯಿಂದ ಹೊಸ ಮಾದರಿ ಬೈಕ್ ಒಂದನ್ನು ಲಾಂಚ್ ಮಾಡಲಿದೆ.

ವಿಶೇಷವಾಗಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಬೈಕಿನಲ್ಲಿ ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಜೊತೆಗೆ ಹಲವಾರು ಹೊಸ ಫೀಚರ್ಸ್ ನೀಡಲಾಗಿದೆ. ಹೊಸ ಬೈಕಿನಲ್ಲಿ ಕಂಪನಿಯಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೇರಿದಂತೆ ಇಕೋ ಮತ್ತು ಪವರ್ ಎನ್ನುವ ಎರಡು ಹೊಸ ರೈಡಿಂಗ್ ಮೋಡ್ ಗಳನ್ನು ಸಹ ನೀಡಲಾಗಿದ್ದು, ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದಿದ್ದಾರೆ.

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ 125 ಸಿಸಿ ಬೈಕ್ ಮಾದರಿಯಾದ ರೈಡರ್ 125 ಆವೃತ್ತಿಯಲ್ಲಿ ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ ಮಾಡಲಿದೆ. ಈ ಹೊಸ ಬೈಕ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 99,900 ಬೆಲೆ ಹೊಂದಿದೆ.

ಇದರಲ್ಲಿ ಮುಖ್ಯವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಯ್ಸ್ ಕಮಾಂಡ್, ಕಾಲ್ ಅಲರ್ಟ್, ಮೇಸೆಜ್ ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್, ಲೋ ಬ್ಯಾಟರಿ ಅಲರ್ಟ್, ಸರ್ವಿಸ್ ರಿಮೆಂಡರ್, ಗೇರ್ ಪೋಷಿಷನ್ ಇಂಡಿಕೇಟರ್, ಐಡಿಯಲ್ ಗೇರ್ ಶಿಫ್ಟ್, ಡಿಸ್ಟೆನ್ಸ್ ಟು ಎಂಟಿ ಮತ್ತು ಇಂಧನ ದಕ್ಷತೆ ಮಾಹಿತಿಯನ್ನು ನೀಡುತ್ತದೆ. ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ನಲ್ಲಿ ಬಳಕೆದಾರರಿಗೆ ಪೂರಕವಾದ ಹಲವಾರು ಮಾಹಿತಿಗಳು ಲಭ್ಯವಿರಲಿದೆ.

ಟಿವಿಎಸ್ ಕಂಪನಿಯು ರೈಡರ್ 125 ಬೈಕಿನಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಜೊತೆಗೆ ಡ್ರಮ್ ಮತ್ತು ಡಿಸ್ಕ್ ಎನ್ನುವ ಎರಡು ಆರಂಭಿಕ ಮಾದರಿಗಳನ್ನು ಸಹ ಮಾರಾಟ ಮಾಡುತ್ತಿದ್ದು, ಇದರಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಇತರೆ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಒಳಗೊಂಡಿದೆ.

ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 124.8 ಸಿಸಿ ಸಿಂಗಲ್ ಸಿಲಿಂಡರ್ ಸೋಕ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 11.2 ಬಿಎಚ್ ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ ಹೊಸ ಬೈಕಿನಲ್ಲಿ ಹೆಚ್ಚಿನ ಮಟ್ಟದ ಇಂಧನ ದಕ್ಷತೆಗಾಗಿ ಕಂಪನಿಯು ಇಂಟೆಲಿಗೋ ಸೈಲೆಂಟ್ ಎಂಜಿನ್ ಸ್ಮಾರ್ಟ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆ ವೇಳೆ ಹೆಚ್ಚಿನ ಮಟ್ಟದ ಇಂಧನ ಬಳಕೆಯನ್ನು ಕಡಿತಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ.

ಸುರಕ್ಷಾ ಸೌಲಭ್ಯಗಳು:
ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಕಂಪನಿಯು ಹಲವಾರು ಸುರಕ್ಷಾ ಫೀಚರ್ಸ್ ನೀಡುತ್ತಿದ್ದು, ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನಲ್ಲಿ 240 ಎಂಎಂ ಮುಂಭಾಗದ ಸಿಂಗಲ್ ಡಿಸ್ಕ್, 130 ಎಂಎಂ ಹಿಂಬದಿಯ ಡ್ರಮ್ ಬ್ರೇಕ್ ನೀಡುತ್ತದೆ.

ಈ ಎಲ್ಲಾ ವಿಶೇಷತೆಗಳೊಂದಿಗೆ 125 ಸಿಸಿ ಬೈಕ್ ಮಾದರಿಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೈಡರ್ ಬೈಕ್ ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಬೈಕ್ ಮಾದರಿಯು ಬ್ಲ್ಯಾಕ್ ಮತ್ತು ಯೆಲ್ಲೊ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಶೀಘ್ರದಲ್ಲಿ ಈ ಬೈಕನ್ನು ತರಿಸಿಕೊಳ್ಳಲು ಪ್ರೊಸಿಜರ್ ಮುಂದುವರಿಯುತ್ತಿದೆ.

Leave A Reply

Your email address will not be published.