Netflix : ನೆಟ್ ಫ್ಲಿಕ್ಸ್ ಪಾಸ್ ವರ್ಡ್ ಹಂಚಿದರೆ ಬೀಳಲಿದೆ ಭಾರೀ ಶುಲ್ಕ!!!

ಟೈಮ್ ಪಾಸ್ ಮಾಡೋಕೆ ಪ್ರಸ್ತುತ ಹಲವಾರು ಆ್ಯಪ್ ಗಳು ಇವೆ. ಜನರು ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಮನೋರಂಜನೆ ಸಲುವಾಗಿ ಕೆಲವು ಆ್ಯಪ್ ಉಪಯೋಗಿಸುವುದು ಸಹಜವಾಗಿದೆ.
ತಾ ಮುಂದು ತಾ ಮುಂದು ಅಂತ ಓಡುವ ಪ್ರಪಂಚದಲ್ಲಿ ಮನೋರಂಜನೆಗೂ ಹೆಚ್ಚಿನ ಬೇಡಿಕೆ ಇದೆ.

ಹೌದು ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರಂ ಆಗಿರುವ ನೆಟ್‌ಫ್ಲಿಕ್ಸ್ ಚಂದಾದಾರರು ಒಂದು ಮಾಹಿತಿ ತಿಳಿದುಕೊಳ್ಳಬೇಕು.

ಅಂತ್ಯತ ಬೇಡಿಕೆ ಮತ್ತು ಮನೋರಂಜನೆ ನೀಡಬಲ್ಲ ನೆಟ್‌ಫ್ಲಿಕ್ಸ್ ಚಂದಾದಾರರು ತಮ್ಮ ಪಾಸ್‌ವರ್ಡ್‌ ಅನ್ನು ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ಉಚಿತವಾಗಿ ವೆಬ್‌ ಸೀರಿಸ್‌, ಸಿನಿಮಾ ವೀಕ್ಷಿಸುತ್ತಿದ್ದರು.

ಆದರೆ ಇನ್ನು ಮುಂದೆ ಆ ರೀತಿ ಪಾಸ್ ವರ್ಡ್ ಹಂಚಿಕೊಳ್ಳಲು ಸಾಧ್ಯ ಇಲ್ಲ. ಬದಲಾಗಿ ಇತರರಿಗೆ ಪಾಸ್‌ವರ್ಡ್‌ ಹಂಚಿಕೊಳ್ಳುವ ಗ್ರಾಹಕರಿಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಯೋಚಿಸಿದೆ.

2023ರಿಂದ ಈ ಹೊಸ ಶುಲ್ಕ ಪ್ಲಾನ್‌ಗಳು ಜಾರಿಗೆ ಬರಲಿದೆ. ಅಲ್ಲದೇ ಮನೆಯವರು ಅಥವಾ ಸ್ನೇಹಿತರಿಗೆ ಸುಲಭವಾಗಿ ನೆಟ್‌ಫ್ಲಿಕ್ಸ್ ಖಾತೆ ಲಭ್ಯವಾಗುವ ದೃಷ್ಟಿಯಲ್ಲಿ ಹೆಚ್ಚುವರಿ ಸದಸ್ಯರಿಗೆ ಖಾತೆ ತೆರೆಯಲು ಗ್ರಾಹಕರಿಗೆ ಕಂಪನಿ ಅವಕಾಶ ನೀಡುತ್ತಿದೆ.

ಆದರೆ ಈ ಹೊಸ ನಿಯಮಕ್ಕೆ ಹೆಚ್ಚುವರಿಯಾಗಿ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ನೆಟ್‌ಫ್ಲಿಕ್ಸ್ ಸ್ಪಷ್ಟ ಪಡಿಸಿಲ್ಲ.

Leave A Reply

Your email address will not be published.