ಮಂಗಳೂರು – ಮುಂಬಯಿ ವಿಶೇಷ ರೈಲು ಸೇವೆ ಆರಂಭ

ಮಂಗಳೂರು: ಮಂಗಳೂರು ಜಂಕ್ಷನ್‌ ಮತ್ತು ಮುಂಬಯಿ ಲೋಕಮಾನ್ಯ ತಿಲಕ್‌ ನಿಲ್ದಾಣದ ನಡುವೆ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ.

ನಂ. 01185 ಲೋಕಮಾನ್ಯ ತಿಲಕ್‌ ಮುಂಬಯಿ-ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ವಿಶೇಷ ರೈಲು ಲೋಕಮಾನ್ಯ ತಿಲಕ್‌ನಿಂದ ಅ. 21 ಮತ್ತು 28 ಹಾಗೂ ನ. 4 ಮತ್ತು 11ರಂದು (ಶುಕ್ರವಾರ) ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ.

ನಂ. 01186 ಮಂಗಳೂರು ಜಂಕ್ಷನ್‌- ಲೋಕಮಾನ್ಯ ತಿಲಕ್‌ ಸಾಪ್ತಾಹಿಕ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಅ. 22 ಮತ್ತು 29 ಹಾಗೂ ನ. 5 ಮತ್ತು 12ರಂದು (ಶನಿವಾರ) ಸಂಜೆ 6.45ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.25ಕ್ಕೆ ಲೋಕಮಾನ್ಯ ತಿಲಕ್‌ ನಿಲ್ದಾಣ ತಲುಪಲಿದೆ.

ಥಾಣೆ, ಪನ್ವೇಲ್‌, ರೋಹ, ಖೇಡ್‌, ಚಿಪ್ಳೂಣ್‌, ಸಂಗಮೇಶ್ವರ ರೋಡ್‌, ರತ್ನಾಗಿರಿ, ಕಂಕಾವಿ, ಸಿಂಧೂದುರ್ಗ, ಸಾವಂತ್ವಾಡಿ ರೋಡ್‌, ಥಿವಿಮ್‌, ಕರ್ಮಾಲಿ, ಮಡಗಾಂವ್‌, ಕಾರವಾರ, ಗೋಕರ್ಣ, ಕುಮಟಾ,ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ಗ‌ಳಲ್ಲಿ ನಿಲುಗಡೆ ಇದೆ.

ಎಸಿ-2 ಟೈರ್‌ ಕೋಚ್‌ -1, ಎಸಿ-3 ಟೈರ್‌ ಕೋಚ್‌ 3, ಸ್ಲೀಪರ್ ಕ್ಲಾಸ್‌ 8, ಸೆಕೆಂಡ್‌ ಕ್ಲಾಸ್‌ ಸಿಟ್ಟಿಂಗ್‌ 3, ಸೆಕೆಂಡ್‌ ಕ್ಲಾಸ್‌ (ಅಂಗವಿಕಲ ಸ್ನೇಹಿ), ಲಗೇಜ್‌/ಬ್ರೇಕ್‌ ವ್ಯಾನ್‌ ಕೋಚ್‌ 2 ಸಂಯೋಜನೆ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

Leave A Reply

Your email address will not be published.