ನಟ ಚೇತನ್ ವಿರುದ್ಧ ಕಾರ್ಣಿಕದ ಪಂಜುರ್ಲಿ ದೈವಕ್ಕೆ ದೂರು ಸಲ್ಲಿಕೆ | ಪಂಜುರ್ಲಿ ತೀರ್ಪಿನತ್ತ ಎಲ್ಲರ ಚಿತ್ತ !!

ಕರಾವಳಿಯ ನಂಬಿಕೆಯ ಭೂತಾರಾಧನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ (Actor Chetan) ವಿರುದ್ಧ ಇದೀಗ ಪಂಜುರ್ಲಿ (Panjurli) ದೈವಕ್ಕೆ ದೂರು ಹೋಗುತ್ತಿದೆ.

ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮಾತನಾಡಿ, ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದವರು ಹೇಳಿದ್ದಾರೆ.

‘ಸಿನಿಮಾದ ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು : ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು ಎಂದವರು ಕೋಪಗೊಂಡರು ‘

‘ ಕರಾವಳಿಯಾದ್ಯಂತ ಪರವರು ಪಂಪದರು, ನಲಿಕೆಯವರು ಭೂತವನ್ನು ಕಟ್ಟಿಕೊಂಡು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ನಮ್ಮನ್ನು ಹಿಂದೂ ಸಂಸ್ಕೃತಿ ಅಲ್ಲ ಅಂದ ನಟ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ. ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕರಾವಳಿ ಜಿಲ್ಲೆಯಾದ್ಯಂತ ಏನಾದರೂ ತಪ್ಪು ಘಟನೆಗಳು ನಡೆದಲ್ಲಿ, ಮೋಸ ಕಂಡು ಬಂದಲ್ಲಿ ದೈವದ ಮುಂದೆ ದೂರನ್ನು ಇಟ್ಟು ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಮತ್ತು ಸತ್ಯ ಪ್ರಮಾಣ ಮಾಡಲು ಹೊರಡುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಅಲ್ಲಿ ನಂಬಿದವರಿಗೆ ಹಿಂಬು ಕೊಡಲು ಹತ್ತಾರು ದೇವರುಗಳಿವೆ. ಪಂಜರ್ಲಿ, ಗುಳಿಗ, ರಕ್ತೇಶ್ವರಿ, ಕೊರಗಜ್ಜ, ಹಿಪ್ಪದ ಅಜ್ಜ ಇತ್ಯಾದಿ ಕಾರ್ನಿಕ ದೇವರುಗಳು ಕಷ್ಟಕಾಲದಲ್ಲಿ ಕರಾವಳಿಯ ಜನರ ರಕ್ಷಣೆಗೆ ಭಾವಿಸುತ್ತಾರೆ ಎನ್ನುವುದು ಪ್ರತೀತಿ.ಇದೀಗ ಚೇತನ್ ವಿರುದ್ಧದ ದೂರಿನ ಫೈಲ್ ಪಂಜುರ್ಲಿ ದೈವದ ಮುಂದೆ ಹೋಗುತ್ತಿದೆ. ಪಂಜುರ್ಲಿ ದೈವ ಏನು ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Leave A Reply

Your email address will not be published.