Scholarship : ನಿಮ್ಮ ಕುಟುಂಬದ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದರಿಂದ ನಿಮಗೆ ವರ್ಷಕ್ಕೆ 75 ಸಾವಿರ ಸ್ಕಾಲರ್ ಶಿಪ್ ದೊರೆಯುತ್ತೆ!!!

ದೇಶದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಒಂದು ಹೊಸ ಸುದ್ದಿ ನೀಡಿದೆ. ಅರ್ಹತೆ ಇದ್ದು ಸ್ಪರ್ಧೆಗಳಲ್ಲಿ ಮುಂದುವರೆಯಲು ಆರ್ಥಿಕ ಕಾರಣದಿಂದ ಸಾಧ್ಯವಿಲ್ಲದವರಿಗೆ ಈ ಧನಸಹಾಯ ನೀಡಲಿದ್ದಾರೆ.
ಹೌದು ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಕ್ರೀಡಾಪಟುಗಳಿಗೆ ಸಹಾಯವಾಗಲೆಂದು ಧನ ಸಹಾಯ ಮಾಡುತ್ತಿದೆ.

ಹಲವಾರು ಕ್ರೀಡಾಪಟುಗಳು ಹಣದ ಕೊರತೆಯಿಂದ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಅಂತವರಿಗಾಗಿ ಕೋಲ್ಗೇಟ್ ತರಬೇತಿ ಕಾರ್ಯಕ್ರಮ ಮತ್ತು ಧನಸಹಾಯ ಮಾಡುತ್ತದೆ.

3 ವರ್ಷಗಳವರೆಗೆ ವರ್ಷಕ್ಕೆ ರೂ.75,000 ಆರ್ಥಿಕ ನೆರವಿನೊಂದಿಗೆ ಕ್ರೀಡಾಪಟುಗಳಿಗೆ ಗುರಿ ತಲುಪಲು ಸ್ಕಾಲರ್‌ಶಿಪ್ ಬೆಂಬಲವಾಗಿರುತ್ತದೆ.

ಈ ಸ್ಕಾಲರ್ ಶಿಪ್ ಪಡೆಯಬೇಕಾದರೆ ಕೆಲವು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
ಸ್ಕಾಲರ್ ಶಿಪ್ ಅರ್ಹತೆಗಳು :

  • ಚೆಸ್, ಬಾಕ್ಸಿಂಗ್, ಅಥ್ಲೆಟಿಕ್ಸ್, ಈಜು, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಮಾರ್ಷಲ್ ಆರ್ಟ್ಸ್, ಪವರ್ಲಿಫ್ಟಿಂಗ್, ಓಟ ಇತ್ಯಾದಿಗಳಂತಹ ವೈಯಕ್ತಿಕ ಕ್ರೀಡೆಗಳನ್ನು ಆಡುವವರಾಗಿರಬೇಕು.
  • ಕಳೆದ 3 ವರ್ಷಗಳಲ್ಲಿ ರಾಜ್ಯ ಅಥವಾ ರಾಷ್ಟ್ರ ಮಟ್ಟವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿರಬೇಕು.
  • ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ ಅಥವಾ ರಾಜ್ಯ ಶ್ರೇಯಾಂಕದಲ್ಲಿ ಅಗ್ರ 100 ರೊಳಗೆ ಸ್ಥಾನ ಪಡೆದಿರಬೇಕು.
  • 31 ಆಗಸ್ಟ್ 2022 ಕ್ಕೆ 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು.
  • ಕ್ರೀಡಾ ತರಬೇತುದಾರ ಅಥವಾ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆ/ಫೆಡರೇಶನ್/ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರಬೇಕು. ಸ್ಕಾಲರ್ ಶಿಪ್ ನ ಪ್ರಯೋಜನಗಳು:
    3 ವರ್ಷಗಳವರೆಗೆ ವರ್ಷಕ್ಕೆ ರೂ.75,000 ಆರ್ಥಿಕ ಬೆಂಬಲ ನೀಡುತ್ತದೆ.

ಕೋಲ್ಗೇಟ್ KIS ಪ್ರೋಗ್ರಾಂನಿಂದ ಮಾರ್ಗದರ್ಶನ ನೀಡುತ್ತದೆ.

ಅಗತ್ಯ ದಾಖಲೆಗಳು:
• ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

• ID ಪುರಾವೆ – ಆಧಾರ್ ಕಾರ್ಡ್/ಚಾಲನಾ ಪರವಾನಗಿ/ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು.

• ಆದಾಯ ಪುರಾವೆ – ಆದಾಯ ಪ್ರಮಾಣಪತ್ರ / BPL ಪ್ರಮಾಣಪತ್ರ / ಆಹಾರ ಭದ್ರತಾ ಪ್ರಮಾಣಪತ್ರ / ಸಮರ್ಥ ಸರ್ಕಾರಿ ಪ್ರಾಧಿಕಾರದಿಂದ ನೀಡಲಾದ ಯಾವುದೇ ಇತರಆದಾಯ ಪ್ರಮಾಣಪತ್ರ.

• ವಯಸ್ಸಿನ ಪುರಾವೆ ಅಥವಾ 10 ನೇ ತರಗತಿ ಅಂಕಪಟ್ಟಿ

• ಇತ್ತೀಚಿನ ಕಾರ್ಯಕ್ಷಮತೆಯ ಸ್ಕ್ಯಾನ್ ಮಾಡಿದ ಪ್ರತಿ — ಸಾಧನೆಯ ಪ್ರಮಾಣಪತ್ರ

•ಕ್ರೀಡಾ ತರಬೇತುದಾರರೊಂದಿಗಿನ ಸಂಬಂಧದ ಪುರಾವೆ ಅಥವಾ ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆ/ಫೆಡರೇಶನ್/ಅಕಾಡೆಮಿಗೆ ಸಂಬಂಧ.

ಈ ಸ್ಕಾಲರ್ ಶಿಪ್​ಗೆ ಸಂಬಂಧಿಸಿದ ಸಂಪೂರ್ಣ ಹಕ್ಕು ಮತ್ತು ಬದಲಾವಣೆಯ ನಿಯಮಗಳನ್ನು ಹೊಂದಿದೆ. ಉದ್ದೇಶ ಪೂರ್ವಕವಾಗಿ ಅಥವಾ ಯಾವುದಾದರು ತಪ್ಪಿ ತಿಳಿಯದೆ ಮಾಡಿದ್ದು ಕಂಡುಬಂದಲ್ಲಿ ಅಂತಹ ಅರ್ಜಿಗಳನ್ನು ತೆಗೆದುಹಾಕಿ ಧನ ಸಹಾಯ ಸಿಗದಂತೆ ಮಾಡಲಾಗುತ್ತದೆ. ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿ ಅಥವಾ ವ್ಯಕ್ತಿ ಯಾವುದೇ ನೋಂದಣಿ ಅಥವಾ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸ್ಕಾಲರ್‌ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿ ಕೋಲ್ಗೇಟ್ ಉತ್ಪನ್ನಗಳ ಖರೀದಿಸಬೇಕೆಂಬ ಕಡ್ಡಾಯವಿಲ್ಲ.

ಮುಂದಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಅಧಿಕೃತ ವೆಬ್​ಸೈಟ್​​ನಲ್ಲಿ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅಪ್ಲೋಡ್ ಮಾಡಬೇಕು. ಮೇಲಿನ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ವರ್ಷಕ್ಕೆ 75 ಸಾವಿರ ಆರ್ಥಿಕ ನೆರವು ಪಡೆಯಬಹುದು. ಸತತ ಮೂರು ವರ್ಷಗಳ ಕಾಲ ಈ ಧನ ಸಹಾಯ ಪಡೆಯಬಹುದು.

ಇನ್ನು ಹಲವು ಸಮಸ್ಯೆಗಳು ಉದಾಹರಣೆಗೆ ಇಂಟರ್ನೆಟ್, ಟೆಲಿಕಾಂ, SMS ಮತ್ತು/ಅಥವಾ ಇ-ಮೇಲ್ ಸೇವಾ ಪೂರೈಕೆದಾರರಿಂದ ವೈಫಲ್ಯ ಅಥವಾ ವಿಳಂಬದ ಕಾರಣದಿಂದಾಗಿ ಯಾವುದೇ ಸಂವಹನದಲ್ಲಿ ಕೊರತೆ ಅಥವಾ ಲೋಪಉಂಟಾದರೆ ಅದಕ್ಕೆ ಕೋಲ್ಗೇಟ್ ಜವಾಬ್ದಾರಿಯಾಗಿರುವುದಿಲ್ಲ.

Leave A Reply

Your email address will not be published.