ನಂಬಲಸಾಧ್ಯ | ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ | ಅಷ್ಟಕ್ಕೂ ಯಾಕೆ ಈ ಕೋಣ ಇಷ್ಟು ದುಬಾರಿ?

ಉತ್ತರ ಪ್ರದೇಶದಲ್ಲಿ ಜಾತ್ರೆ ಅಂದರೆ ಅವರದ್ದೇ ಆದ ಸಂಸ್ಕೃತಿಯ ಸೊಗಡು, ಕೆಲವೊಂದು ಆಚಾರಗಳು ನೋಡಲು ಕಣ್ಣು ತುಂಬುತ್ತವೆ. ಹಾಗೆಯೇ ಮೀರತ್ ನಲ್ಲಿ ಅಖಿಲ ಭಾರತ ಕಿಸಾನ್ ಮೇಳದಲ್ಲಿ ಒಂದು ಕೋಣವು ಎಲ್ಲರ ಗಮನ ಸೆಳೆದಿದೆ.

ಹೌದು ಜಾತ್ರೆಯ ಮೊದಲ ದಿನವೇ ಕೋಣವೊಂದು ಜನರ ಗಮನ ಸೆಳೆದಿದೆ. ಪದ್ಮಶ್ರೀ ಪುರಸ್ಕೃತ ಹರ್ಯಾಣದ ರೈತ ನರೇಂದ್ರ ಸಿಂಗ್ ಅವರು ತಮ್ಮ ಕೋಣದ ಜೊತೆ ಈ ಜಾತ್ರೆಗೆ ಆಗಮಿಸಿದ್ದರು.

ಮುರ್ರಾ ಜಾತಿಗೆ ಸೇರಿದ ಈ ಕೋಣ ದಿನಕ್ಕೆ 26 ಲೀಟರ್ ಹಾಲು ಸೇವಿಸುತ್ತದೆಯಂತೆ. ಈ ಕೋಣದ ತೂಕ ಬರೋಬ್ಬರಿ 15 ಕ್ವಿಂಟಾಲ್ ಇದೆಯಂತೆ.

ರೈತ ನರೇಂದ್ರ ಸಿಂಗ್ ಪ್ರಕಾರ ಈ ಕೋಣದ ನಿರ್ವಹಣೆ ವೆಚ್ಚವೂ ಸಾಕಷ್ಟು ದುಬಾರಿಯಂತೆ. 4 ವರ್ಷ 6 ತಿಂಗಳ ಈ ಕೋಣದ ಬೆಲೆ ಕೋಟ್ಯಂತರ ರೂ ಇದೆ. ನಿತ್ಯ 1000 ರೂ. ಖರ್ಚಾಗುತ್ತದಂತೆ. ಈ ಕೋಣಕ್ಕೆ ಆಹಾರವಾಗಿ 30 ಕೆಜಿ ಒಣ ಹಸಿರು ಮೇವು, 7 ಕೆಜಿ ಗೋಧಿ ಮತ್ತು 50 ಗ್ರಾಂ ಖನಿಜ ಮಿಶ್ರಣದ ಆಹಾರ ನೀಡಲಾಗುತ್ತದೆ. ಈ ಕೋಣದ ವೀರ್ಯವು ಉತ್ತಮ ಪ್ರಮಾಣದ ಆದಾಯ ಗಳಿಸುತ್ತದಂತೆ. ಗೋಲು ಕೋಣದ ತಂದೆಯನ್ನು ಹರಿಯಾಣ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಲಾಗಿದೆ. ಮುರ್ರಾ ಎಮ್ಮೆಯ ತಳಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.

ನರೇಂದ್ರ ಸಿಂಗ್ ಪ್ರಕಾರ ಈ ಎಮ್ಮೆಯ ಅಜ್ಜ ಇತ್ತೀಚೆಗಷ್ಟೇ ಸಾವನ್ನಪ್ಪಿತ್ತಂತೆ. ಹೀಗಾಗಿ ಅದರ ನೆನಪಿಗಾಗಿ ಈ ಗೋಲು ಕೋಣವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ರೈತ ನಿರ್ಧರಿಸಿದ್ದಾರಂತೆ.

ಖರೀದಿದಾರರು ಈ ಕೋಣದ ಬೆಲೆಯನ್ನು 10 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಆದರೆ ಇದನ್ನು ಮಾರಾಟ ಮಾಡಲು ರೈತ ನರೇಂದ್ರ ಸಿಂಗ್ ಒಪ್ಪಲಿಲ್ಲ.

ಇಷ್ಟು ದುಬಾರಿ ಬೆಲೆಯ ಕೋಣದ ಬಗ್ಗೆ ಜನರು ಯೋಚಿಸಲೂ ಸಹ ಸಾಧ್ಯವಿಲ್ಲ. ಈ ಕೋಣದ ಆಳೆತ್ತರವನ್ನು ಕಂಡು ಜಾತ್ರೆಯಲ್ಲಿ ಸಾಕಷ್ಟು ಮಂದಿ ರೋಮಾಂಚನಗೊಂಡಿರುತ್ತಾರೆ.

Leave A Reply

Your email address will not be published.