ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ | ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ ಬಾಲಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು ಯಾವ ರೀತಿ ಗೊತ್ತೇ?

ರಾಜ್ಯದ ಗಮನ ಸೆಳೆದಿದ್ದ ಬಾಲಕಿ ಭಾರ್ಗವಿ ನಾಪತ್ತೆ ಪ್ರಕರಣವು ನಿನ್ನೆಗೆ ಸುಖಾಂತ್ಯ ಕಂಡಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಈ ಹುಡುಗಿ ನಾಪತ್ತೆಯಾಗಿದ್ದು ಈ ಬಾಲಕಿಯ ಪತ್ತೆಗಾಗಿ ಇನ್ನಿಲ್ಲದ ಪ್ರಯತ್ನ ಪಡಲಾಗಿದ್ದು, ಕೊನೆಗೂ ಬಾಲಕಿ ಪತ್ತೆಯಾಗಿದ್ದಾಳೆ. ಮಂಗಳೂರಿಗೆ ತೆರಳಿ, ಅಲ್ಲಿಂದ ಗೋವಾಗೆ ಹೋಗಿದ್ದ ಬಾಲಕಿಯನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಗೋವಾ ಪೊಲೀಸರ ನೆರವಿನಿಂದ ಪತ್ತೆ ಹಚ್ಚಿದ್ದಾರೆ. ಮಗಳ ಪತ್ತೆಯಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಆದರೆ, ಆಕೆ ನಾಪತ್ತೆಯಾದಾಗಿದ್ದನಿಂದ ಮೊಬೈಲ್ಡ್ ಸ್ವಿಚ್ಡ್ ಆಫ್ ಇತ್ತು. ಆದರೂ ಮೊಬೈಲ್ ಸ್ವಿಚ್ಡ್ ಆಫ್ ಇದ್ದರೂ ಬಾಲಕಿಯನ್ನು ಪತ್ತೆಹಚ್ಚಿದ್ದು ಗಮನ ಸೆಳೆದಿದೆ.

ಅಕ್ಟೋಬರ್ 1 9 ರಂದು ಬಾಲಕಿ ನಾಪತ್ತೆಯಾಗಿದ್ದಳು. ಒಂಬತ್ತನೇ ತರಗತಿ ಓದುತ್ತಿರುವ ಭಾರ್ಗವಿಯು ಮಿಡ್‌ಟರ್ಮ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಸೂಸೈಡ್ ನೋಟ್ ಬರೆದಿಟ್ಟು ಮನೆ ತೊರೆದಿದ್ದಳು. ಇದರಿಂದ ಆತಂಕಕ್ಕೀಡಾದ ಪೋಷಕರು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೊಗಳನ್ನು ಶೇರ್ ಮಾಡಲಾಗಿತ್ತು. ಆಕೆ ಮಂಗಳೂರಿನಲ್ಲಿ ತಿರುಗಾಡಿದ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಾಗಿದ್ದವು. ಹೀಗಿದ್ದರೂ, ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆದ ಕಾರಣ ಪೊಲೀಸರಿಗೆ ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿತ್ತು. ಆದರೂ, ತಂತ್ರಜ್ಞಾನದ ನೆರವಿನಿಂದ ಆಕೆಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋವಾಗೆ ತೆರಳಿದ್ದ ಬಾಲಕಿಯ ಪತ್ತೆಗೆ ಜಿಮೇಲ್ ಅಕೌಂಟ್ ನೆರವಿಗೆ ಬಂದಿದೆ. ಭಾರ್ಗವಿ ಹಾಗೂ ಆಕೆಯ ತಾಯಿಯು ಒಂದೇ ಜಿಮೇಲ್ ಅಕೌಂಟ್ ಬಳಸುತ್ತಿದ್ದ ಕಾರಣ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಜಿಪಿಎಸ್ ಟ್ರ್ಯಾಕ್ ಮಾಡುವ ಮೂಲಕ ಪತ್ತೆಹಚ್ಚಿದ್ದಾರೆ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಬಾಲಕಿಯು ಗೋವಾದಲ್ಲಿರುವುದು ತಿಳಿದಿದೆ. ಆಗ ಪೊಲೀಸರು ಈ ಬಗ್ಗೆ ಗೋವಾ ಪೊಲೀಸರನ್ನು ಸಂಪರ್ಕಿಸಿ, ಅವರಿಗೆ ಭಾರ್ಗವಿಯ ಫೋಟೊ ಕಳುಹಿಸಿ, ಕೊನೆಗೆ ಅವರ ನೆರವಿನಿಂದ ಪತ್ತೆ ಹಚ್ಚಿದ್ದಾರೆ.

ಬಾಲಕಿಯ ಕುರಿತು ಮಾಹಿತಿ ಲಭ್ಯವಾಗುತ್ತಲೇ ಮಹಾಲಕ್ಷ್ಮೀ ಪೊಲೀಸರು ಗೋವಾಗೆ ತೆರಳಿದ್ದಾರೆ. ಪೋಷಕರು ಕೂಡ ವಿಮಾನ ಹತ್ತಿ ಗೋವಾಗೆ ಹೊರಟಿದ್ದಾರೆ. ಗುರುವಾರ (ಅ.20) ಮಧ್ಯಾಹ್ನ ಬಾಲಕಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವಿವರ :

ಮಕ್ಕಳ ಮನಸ್ಸು ಎಷ್ಟು ಮೃದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಪೋಷಕರು ಬೈಯ್ಯುತ್ತಾರೆ ಎಂಬ ಕಾರಣದಿಂದ ಹೆದರಿ ಬಾಲಕಿ ಭಾರ್ಗವಿ ಮನೆ ಬಿಟ್ಟು ಹೋಗಿರುವ ಘಟನೆ ನಂದಿನಿ‌ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. 9ನೇ ತರಗತಿ ವಿದ್ಯಾರ್ಥಿನಿ ಭಾರ್ಗವಿ ಮನೆ ತೊರೆದವಳು. ಈಕೆ ಗೊರಗುಂಟೆಪಾಳ್ಯದ ಮನೆಯಿಂದ ಟ್ಯೂಷನ್ ಗೆ ಅಂತಾ ತೆರಳಿ ನಂತರ ಮೊದಲೇ ಪ್ಲ್ಯಾನ್ ಮಾಡಿಕೊಂಡ ಹಾಗೇ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ.

ಅನಂತರ ಅಲ್ಲಿಂದ ಬಸ್ ಹತ್ತಿದ ಬಾಲಕಿ ಮಂಗಳೂರು ಬಸ್ ಹತ್ತಿ ಹೋಗಿರೋದು ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಕಿ ಪತ್ತೆಗೆ ಮಂಗಳೂರಿನಲ್ಲಿ ನಾಲ್ಕು ತಂಡ ತಲಾಶ್ ನಡೆಸಿದ್ದು, ಬಾಲಕಿ ನಾಪತ್ತೆ ಪ್ರಕರಣ ಈಗ ಸುಖಾಂತ್ಯ ಕಂಡಿದೆ.

Leave A Reply

Your email address will not be published.