ಸಾಮಾನ್ಯ ಕಾರುಗಳಲ್ಲಿಯೂ ಇನ್ಮುಂದೆ ಆರು ಏರ್ ಬ್ಯಾಗ್ : ನಿತಿನ್ ಗಡ್ಕರಿ

ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಎಷ್ಟೇ ಮುಂಜಾಗೃತ ವಹಿಸಿದರು ಸಹ ಒಂದಲ್ಲ ಒಂದು ರೀತಿಯಲ್ಲಿ ಅಪಘಾತವಾಗಿ ಮರಣ ಸಂಭವಿಸುತ್ತಿದೆ. ಆದ್ದರಿಂದ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಪ್ರಕಾರ “ರಸ್ತೆ ಸುರಕ್ಷತೆಯು ಒಂದು ದೊಡ್ಡ ಕಾಳಜಿಯಾಗಿದೆ. ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಆಟೋಮೊಬೈಲ್ ಉದ್ಯಮದಲ್ಲಿ ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ಸಾಮಾನ್ಯ ಮಾದರಿ ಕಾರುಗಳಲ್ಲಿ ನಾವು 6 ಏರ್‌ಬ್ಯಾಗ್‌ಗಳನ್ನು ಅಲವಡಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ.

ನಾವು ಭಾರತದಲ್ಲಿ ಎರಡು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು ಜನಸಂಖ್ಯೆಯ ಬೆಳವಣಿಗೆ ಮತ್ತು ಇನ್ನೊಂದು ಆಟೋಮೊಬೈಲ್ ಬೆಳವಣಿಗೆ” ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಜೊತೆಗೆ ವಾಹನಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಪ್ರಕ್ರಿಯೆ ಈಗಾಗಲೇ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವರು ಈ ಹಿಂದೆಯೂ ಹೇಳಿದ್ದರು.

ವರದಿ ಆಧಾರದ ಪ್ರಕಾರ ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವಾಗಿದ್ದರೂ ಇನ್ನೂ ಸಾಕಷ್ಟು ಕೆಲಸಗಳಿವೆ. ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳಿಂದ 1,50,000 ಸಾವುಗಳು ಸಂಭವಿಸುತ್ತಿವೆ. ಇದರಲ್ಲಿ ಶೇಕಡಾ 65 ರಷ್ಟು ಸಾವುಗಳು 18-34 ವಯೋಮಾನದವರಾಗಿದ್ದಾರೆ ಎಂದು ರಸ್ತೆ ಅಪಘಾತಗಳ ಕುರಿತು ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.