ಕಿರುತೆರೆ ನಟಿ ದಿವ್ಯಾ ಶ್ರೀಧರ್ ಗಂಡನ ಇನ್ನೊಂದು ಮುಖ ಬಯಲು | ತೃತೀಯ ಲಿಂಗಿ ಜೊತೆ ನಟನ ಮದುವೆ ನಡೆದಿತ್ತೇ?

ದಿನಂಪ್ರತಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ವರದಿಯಾಗುತ್ತಲೆ ಇರುತ್ತವೆ. ಸಾಮಾನ್ಯ ಮಹಿಳೆಯರು ಮಾತ್ರವಲ್ಲದೇ ನಟಿಯರ ಮೇಲೂ ಹಲ್ಲೆ ನಡೆಸಿ ವಿಕೃತ ಮೆರೆಯುವ ಪ್ರಸಂಗಗಳು ಕೂಡ ನಡೆಯುತ್ತಿದ್ದು, ಈ ಸಾಲಿಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಕೂಡ ಸೇರ್ಪಡೆಯಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ಖ್ಯಾತ ಕಿರುತೆರೆ ನಟ ಅರ್ನವ್​ನನ್ನು ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಪೊಲೀಸರು ಶೂಟಿಂಗ್​ ನಡೆಯುತ್ತಿದ್ದ ಸ್ಥಳದಲ್ಲೇ ಬಂಧಿಸಿದ ಘಟನೆ ನಡೆದಿತ್ತು.


Ad Widget

ಕನ್ನಡದ ಜನಪ್ರಿಯ ಧಾರಾವಾಹಿ ಆಕಾಶ ದೀಪದ ಮುಖೇನ ತೆರೆ ಮೇಲೆ ಕಾಣಿಸಿಕೊಂಡು ದಿವ್ಯಾ ಶ್ರೀಧರ್ ಸಾಕಷ್ಟು ಹೆಸರು ಗಳಿಸಿದ್ದಾರೆ. ಇದರ ಜೊತೆಗೆ ತಮಿಳು ಧಾರಾವಾಹಿಯಲ್ಲಿ ನಟಿಸಿದ್ದು, ಈ ಧಾರಾವಾಹಿ ಮಾಡುವಾಗ ನಟ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಮೇಲೆ ಲವ್ ಆಗಿ ದಿವ್ಯಾ ಹಾಗೂ ಅರ್ನವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Ad Widget

Ad Widget

Ad Widget

ಇದೀಗ ಪತಿ ಅರ್ನವ್ ವಿರುದ್ಧ ಆರೋಪಗಳ ಸುರಿಮಳೆ ಗೈದು , ತನ್ನ ಗಂಡನಿಗೆ ಅನೈತಿಕ ಸಂಬಂಧವಿದ್ದು, ಹೀಗಾಗಿ ತನ್ನನ್ನು ದೂರ ಇಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡಿದ್ದಾರೆ.

2017ರಲ್ಲಿ ಇಬ್ಬರೂ ಜೊತೆಯಾಗಿ ಒಂದೇ ಸೀರಿಯಲ್​ ನಲ್ಲಿ ನಟಿಸಿ, ಪ್ರೀತಿಸಿ ಮದುವೆಯಾದ ಪ್ರಣಯ ಜೋಡಿಗಳು 2 ವರ್ಷದ ಹಿಂದೆ ಮನೆ ಕೂಡ ಖರೀದಿ ಮಾಡಿದ್ದಾರೆ. ಕೋರೋನಾ ಲಾಕ್ ಡೌನ್ ಆದಾಗಲೂ ಏನು ಕಷ್ಟ ಬಂದರೂ ಕೂಡ ಎಲ್ಲವನ್ನೂ ಸಹಿಸಿದ್ದೇನೆ .

ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ದಿವ್ಯಾ ಮಗುವಿಗೆ ಹಂಬಲಿಸಿದರೆ ಅರ್ನವ್ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯ ಮಾಡಿದ್ದಾರೆ ಎಂದು ದಿವ್ಯಾ ದೂರು ನೀಡಿದ್ದು, ಇದರ ಜೊತೆಗೆ ಹೆಸರಿನ ವಿಷಯದಲ್ಲಿ ಸಹ ಗೊಂದಲ ಸೃಷ್ಟಿಸಿದ್ದು, ದಿವ್ಯರವರಿಗೆ ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್​ ಎಂದು ಹೇಳಿಕೊಂಡಿದ್ದು, ಅಸಲಿ ಹೆಸರು ಅಮ್ಜದ್​ ಖಖಾನ್ ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಈ ವಿಚಾರದ ಕುರಿತು ಅನುಮಾನದ ಹುತ್ತ ಬೆಳೆಯತೊಡಗಿದೆ.

ಗಂಡನಿಗೆ ಬೇರೆ ನಟಿಯರ ಜೊತೆ ವಿವಾಹೇತರ ಸಂಬಂಧವಿದ್ದು, ನನಗೆ ಸಾಕಷ್ಟು ಕಿರುಕುಳ ನೀಡಿ, ಹಲ್ಲೆ ಮಾಡಿರುವ ಕುರಿತು ಗರ್ಭಿಣಿ ಪತ್ನಿ ದಿವ್ಯಾ ಶ್ರೀಧರ್​ ನೀಡಿರುವ ದೂರಿನ ಆಧಾರದ ಮೇಲೆ ಪೋಲೀಸರು ಆರೋಪಿ ಅರ್ನವ್​ನನ್ನು ಬಂಧಿಸಿದ್ದಾರೆ.

ಈ ವಿಚಾರದ ಕುರಿತಾದ ವಿಚಾರಣೆ ಹಂತದ ನಡುವೆ ಅರ್ನವ್​ನ ಮತ್ತೊಂದು ವಂಚನೆ ಬಹಿರಂಗ ವಾಗಿದ್ದು, ಮಲೇಷಿಯಾ ಮೂಲದ ತೃತೀಯಲಿಂಗಿಯೊಬ್ಬರು ದಿವ್ಯಾಳ ವಕೀಲರಿಗೆ ಆಡಿಯೋ ಫೈಲ್​ ಒಂದನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

10 ವರ್ಷಗಳ ಹಿಂದೆಯೆ ಅರ್ನವ್​ ತೃತೀಯಲಿಂಗಿಯೊಬ್ಬರನ್ನು ಮದುವೆ ಆಗಿದ್ದಾರೆ. ಅಲ್ಲದೆ, ಬೇರೆ ಹುಡುಗಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಇವರಿಗೂ ಕೂಡ ಮೋಸ ಮಾಡಿದ್ದಾರೆ ಎಂದು ತಾನು ಕಳುಹಿಸಿಕೊಟ್ಟಿರುವ ಆಡಿಯೋದಲ್ಲಿ ತೃತೀಯಲಿಂಗಿ ಆರೋಪಿಸಿದ್ದು, ಇದಕ್ಕೆ ಇಂಬು ಕೊಡುವಂತಹ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅರ್ನವ್​ ಜೊತೆ ಮದುವೆಯಾಗಿದ್ದ ತೃತೀಯಲಿಂಗಿ, ನನ್ನ ಮೇಲೆ ಮಾಲ್‌ನಲ್ಲಿ ಅರ್ನವ್​ ಹಲ್ಲೆ ನಡೆಸಿದ್ದ ಮತ್ತು ದಿವ್ಯಾ ಆತನ ವಿರುದ್ಧ ಮಾಡಿದ ಎಲ್ಲಾ ಆರೋಪಗಳು ಕೂಡ ನಿಜವೆಂದು ಹೇಳಿಕೊಂಡಿದ್ದು, ಇದೀಗ ದಿವ್ಯಾ ಮತ್ತು ಅರ್ನವ್ ವಿವಾದಕ್ಕೆ ಈ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಿರುತೆರೆ ಉದ್ಯಮವನ್ನು ಮತ್ತಷ್ಟು ದಂಗುಬಡಿಸಿದಲ್ಲದೆ, ಅರ್ನವ್ ನ ರಂಗಿನಾಟಗಳು ಕೊನೆಗೊಳ್ಳುವ ಕಾಲ ಸಮೀಪಿಸಿದಂತೆ ತೋರುತ್ತಿದೆ.

ಸದ್ಯ ಅರ್ನವ್​ನನ್ನು ಪುಳಲ್​ ಜೈಲಿನಲ್ಲಿ ಇರಿಸಲಾಗಿದ್ದು, ದಿವ್ಯಾ, ಆಕೆಯ ಬಾಯ್​ಫ್ರೆಂಡ್​ ಜೊತೆ ಸೇರಿ ನನ್ನ ಮಗುವನ್ನು ಗರ್ಭಪಾತ ಮಾಡಿಸಲು ಪ್ಲಾನ್​ ಮಾಡಿದ್ದಾರೆ ಎಂದು ದಿವ್ಯಾ ವಿರುದ್ಧವೇ ಅರ್ನವ್ ತಿರುಗುಬಾಣ ಬಿಟ್ಟರೂ ಕೂಡ ದಿವ್ಯಾ ಬಿಡುಗಡೆ ಮಾಡಿದ ಆಡಿಯೋವು ಅರ್ನವ್ ಅಪರಾಧಿ ಎಂಬುದನ್ನೂ ನಿರೂಪಿಸುವಂತಿದೆ.

error: Content is protected !!
Scroll to Top
%d bloggers like this: