BCCI ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ ಖಚಿತ | ಈ ಪ್ರತಿಷ್ಠಿತ ಸ್ಥಾನಕ್ಕೇರಿದ ಕರ್ನಾಟಕದ 2ನೇ ಆಟಗಾರ ಎಂಬ ಹೆಗ್ಗಳಿಕೆಯಲ್ಲಿ ಬಿನ್ನಿ !

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರೊಬ್ಬರು ಬಂದು ಕೂರುವ ಕಾಲ ಇನ್ನೇನು ಕ್ಷಣಗಣನೆಯಲ್ಲಿದೆ. ಸೌರವ್ ಗಂಗೂಲಿ ಅವರಿಂದ ತೆರವಾಗಲಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ರೋಜರ್ ಬಿನ್ನಿ ಇಂದು ನಡೆಯಲಿರುವ ಸಭೆಯಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಈ ಮೂಲಕ ಎಂ. ಚಿನ್ನಸ್ವಾಮಿ ನಂತರ ಈ ಸ್ಥಾನಕ್ಕೆ ಏರಿದ ಕರ್ನಾಟಕದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ರೋಜರ್ ಬಿನ್ನಿಯವರದ್ದಾಗಲಿದೆ.

ರೋಜರ್ ಬಿನ್ನಿ ಅವರು, ಇವತ್ತಿನಿಂದ ಸರಿ ಸುಮಾರು 3 ದಶಕಗಳ ಹಿಂದೆ, ಅಂದರೆ 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರನಾಗಿದ್ದ ವ್ಯಕ್ತಿ. ರೋಜರ್ ಬಿನ್ನಿ ಇಂದು ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 36ನೇ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಆಶ್ಚರ್ಯ ಎಂದರೆ ಅವರ ಎದುರಾಳಿಯಾಗಿ ಯಾರೂ ಕಣದಲ್ಲಿ ಇಲ್ಲದ ಕಾರಣ ಅವರೂ ಸೇರಿದಂತೆ ಇತರ ಎಲ್ಲಾ ಪದಾಧಿಕಾರಿಗಳು ಸಹ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ಅಲ್ಲದೆ, ಈ ಆಯ್ಕೆ ಬಳಿಕ ಸಭೆ ನಡೆಸಲಿರುವ ನೂತನ ಪದಾಧಿಕಾರಿಗಳು ಸಭೆ ನಡೆಸಲಿದ್ದಾರೆ. ಮುಂಬರುವ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಅಥವಾ ಹಾಲಿ ಅಧ್ಯಕ್ಷ ಗ್ರೇಗ್ ಬಾರ್ ಕೈ ಅವರನ್ನೇ ಎರಡನೇ ಅವಧಿಗೆ ಮುಂದುವರೆಸಲು ಬೆಂಬಲಿಸಬೇಕಾ ಎಂಬುದರ ಕುರಿತು ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.