PFI ನಂತರ ಈಗ ಇನ್ನೊಂದು ಕಾರ್ಯಾಚರಣೆಗಿಳಿದ NIA !!!

ಇತ್ತೀಚಿನ ದಿನಗಳಲ್ಲಿ ದೇಶ ವಿರೋಧಿ ಚಟವಟಿಕೆಗಳಲ್ಲಿ ತೊಡಗಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದ್ದು, ಭಯೋತ್ಪಾದಕರ , ಉಗ್ರ ಸಂಘಟನೆಗಳ ಹೆಡೆ ಮುರಿಕಟ್ಟಲು ಎನ್ಐಎ ಮುಂದಾಗಿದೆ.

ಭಯೋತ್ಪಾದಕರು, ಗ್ಯಾಂಗ್​ಸ್ಟರ್​​ಗಳು ಮತ್ತು ಮಾದಕ ವಸ್ತು ಸಾಗಣೆದಾರರ ನಡುವೆ ಸಂಪರ್ಕ ಏರ್ಪಡುತ್ತಿರುವ ಆರೋಪದಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ಪ್ರಾರಂಭಿಸಿದೆ.

ಉಗ್ರರು, ಮಾದಕ ವಸ್ತುಗಳ ಕಳ್ಳ ಸಾಗಣೆದಾರರು ಮತ್ತು ದೇಶದೊಳಗಿನ ಗ್ಯಾಂಗ್​ಸ್ಟಾರ್​​ಗಳು ಪರಸ್ಪರ ಸಹಕರಿಸಿ ಕೆಲಸದಲ್ಲಿ ತೊಡಗಿರುವ ಆರೋಪದ ತನಿಖೆಯ ಒಂದು ಭಾಗವಾಗಿ ರಾಷ್ಟ್ರೀಯ ತನಿಖಾ ದಳ ಇಂದು (ಅ.18) ಪಂಜಾಬ್​, ಹರ್ಯಾಣ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಶೋಧಕಾರ್ಯ ನಡೆಸಿದೆ.ಪ್ರಮುಖ ಗ್ಯಾಂಗ್​ಸ್ಟರ್​ಗಳ ನಿವಾಸಗಳು ಸೇರಿ ಸುಮಾರು 50 ಸ್ಥಳಗಳಲ್ಲಿ ಇಂದು ಎನ್​ಐಎ ರೇಡ್​ ನಡೆಸಿದೆ.

ದೇಶದ-ವಿದೇಶಗಳಲ್ಲಿರುವ ಕೆಲವು ಅತ್ಯಂತ ಅಪಾಯಕಾರಿ ಗ್ಯಾಂಗ್​​ಗಳ ಪ್ರಮುಖ ನಾಯಕರು, ಅವರ ಸಹಚರರು ಭಾರತದಲ್ಲಿ ಉಗ್ರ ಮತ್ತು ಕ್ರಿಮಿನಲ್​ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಕೇಸ್​ ದೆಹಲಿ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿತ್ತು.

ಆ ಸಂಬಂಧ ದೃಢವಾದ ಮಾಹಿತಿಯ ಜೊತೆಗೆ ಇದಕ್ಕೆ ಇಂಬು ಕೊಡುವಂತಹ ಪೂರಕ ಸಾಕ್ಷಿಗಳೂ ದೊರೆತ ಹಿನ್ನೆಲೆಯಲ್ಲಿ ಈ ಪ್ರಕರಣ​ ದೆಹಲಿ ಪೊಲೀಸರಿಂದ ಎನ್​ಐಎಗೆ ಹಸ್ತಾಂತರಗೊಂಡಿತ್ತು. ಅದರ ಮೊದಲ ಹಂತವಾಗಿ ಸೆ.12ರಂದು ಎನ್​ಐಎ ಪಂಜಾಬ್​, ಹರ್ಯಾಣ, ರಾಜಸ್ಥಾನ ಮತ್ತು ದೆಹಲಿಗಳಲ್ಲಿ ರೇಡ್​ ಮಾಡಿದೆ.

ಇದರ ಜೊತೆಗೆ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹಂತಕರ ವಿರುದ್ಧವೂ ಹೆಚ್ಚಿನ ತನಿಖೆ ಪ್ರಾರಂಭವಾಗಿದೆ.

ಭಾರತವನ್ನು ತಮ್ಮ ಭಯೋತ್ಪಾದನಾ ಚಟುವಟಿಕೆಗೆ ತಂಗುದಾಣವಾಗಿ ಮಾಡಿಕೊಂಡು ಇಲ್ಲಿನ ಕೆಲ ಜನರ ನೆರವಿನಿಂದ ಗುಪ್ತ ಮಾಹಿತಿಗಳನ್ನು ಪಡೆದು ಉಳಿದವರನ್ನು ಕೂಡ ದೇಶ ವಿರೋಧಿ ಬಣಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಯು ಕೂಡ ಸರಾಗವಾಗಿ ನಡೆಯುತ್ತಿದೆ.

ಈಗ ನಡೆಸಿದ ರೇಡ್ ನಲ್ಲಿ ಇಂದಿನ ರೇಡ್​​ನಲ್ಲಿ ಆರು ಪಿಸ್ತೂಲ್​​ಗಳು, ಒಂದು ರಿವಾಲ್ವರ್​, ಶಾಟ್​ಗನ್​, ಮಾದಕ ವಸ್ತುಗಳು, ನಗದು, ಡಿಜಿಟಲ್​ ಉಪಕರಣಗಳು, ಬೇನಾಮಿ ಆಸ್ತಿ ಇರುವ ಬಗ್ಗೆ ಕಾಗದಪತ್ರಗಳು, ಬೆದರಿಕೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಎನ್​ಐಎ ಮಾಹಿತಿ ನೀಡಿದೆ.

ಭಾರತದಿಂದ ಓಡಿ ಹೋಗಿರುವ ದೇಶ ವಿರೋಧಿ ಬಣ ಪಾಕಿಸ್ತಾನ, ಕೆನಡಾ, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ದೊಡ್ಡ ದೊಡ್ಡ ಗ್ಯಾಂಗ್​ಸ್ಟರ್​​ಗಳು, ಇಲ್ಲಿರುವವರ ಜತೆ ಸೇರಿ ಕ್ರಿಮಿನಲ್​, ಉಗ್ರ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್​ಐಎ ಮಾಹಿತಿ ನೀಡಿದೆ.

Leave A Reply

Your email address will not be published.