ಡಿಜಿಟಲ್ ಬ್ಯಾಂಕಿಂಗ್ ಘಟಕದ ಮೂಲಕ ನೀವು ಯಾವ್ಯಾವ ವ್ಯವಹಾರ ಮಾಡಲು ಸಾಧ್ಯ?

ಈಗಾಗಲೇ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆಯಲ್ಲಿದ್ದು ಜನರು ಇದರ ಸದುಪಯೋಗಗಳನ್ನು ಪಡೆಯಬಹುದು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವ ವ್ಯವಹಾರ ಮಾಡಬಹುದು ಜೊತೆಗೆ ಏನೇನು ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ ಎಂದು ಜನರಿಗೆ ತಿಳಿದಿರುವುದಿಲ್ಲ. ಈ ಬಗೆಗಿನ ವರದಿಯನ್ನು ಹಣಕಾಸು ಸಚಿವರು ವರದಿ ಮೂಲಕ ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದ್ದಾರೆ. ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಆರಂಭಿಸುವ ಯೋಜನೆ ಹಮ್ಮಿಕೊಂಡಿತ್ತು.

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದ್ದಾರೆ.
ಡಿಬಿಯು ಸೇವೆಯನ್ನು ಎಸ್​ಬಿಐ (SBI), ಕೆನರಾ (Canara), ಇಂಡಿಯನ್​ ಬ್ಯಾಂಕ್ (Indian Bank), ಪಿಎನ್​ಬಿ ಬ್ಯಾಂಕ್​ (PNB Bank) ಸೇರಿದಂತೆ ದೇಶದ ಪ್ರಮುಖ ಬ್ಯಾಂಕ್​ಗಳು ಒದಗಿಸುತ್ತಿವೆ.

ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕರೂರ್, ನಾಗಾಲ್ಯಾಂಡ್​ನ ಕೊಹಿಮಾ, ಪುದುಚೇರಿಗಳಲ್ಲಿ ಐಸಿಐಸಿಐ ಬ್ಯಾಂಕ್ (ICICI Bank) ಡಿಬಿಯುಗಳನ್ನು ತೆರೆದಿದ್ದರೆ.

ಡಿಜಿಟಲ್ ಬ್ಯಾಂಕಿಂಗ್ ಘಟಕ ಅಥವಾ ಡಿಬಿಯು ಮೂಲಕ ಗ್ರಾಹಕರು ಮಾಡಬಹುದಾದ ವ್ಯವಹಾರಗಳು:

ಐಸಿಐಸಿಐ ಬ್ಯಾಂಕ್ ಡಿಬಿಯು:
ಐಸಿಐಸಿಐ ಬ್ಯಾಂಕ್ ಪ್ರಕಟಣೆ ಪ್ರಕಾರ, ಡಿಬಿಯುನಲ್ಲಿ ಎರಡು ಆಯ್ಕೆಗಳಿವೆ. ಅವುಗಳೆಂದರೆ, ಸೆಲ್ಫ್ ಸರ್ವೀಸ್ ಝೋನ್ ಮತ್ತು ಡಿಜಿಟಲ್ ಅಸಿಸ್ಟೆನ್ಸ್ ಝೋನ್.

ಸೆಲ್ಫ್ ಸರ್ವೀಸ್ ಝೋನ್​ನಲ್ಲಿ ಎಟಿಎಂ, ಕ್ಯಾಶ್ ಡೆಪಾಸಿಟ್ ಮಷಿನ್, ಮಲ್ಟಿ ಫಂಕ್ಷನಲ್ ಕಿಯೋಸ್ಕ್​ಗಳು ಇರಲಿದ್ದು ಪಾಸ್​ಬುಕ್ ಪ್ರಿಂಟ್ ಮಾಡುವುದು, ಚೆಕ್ ಡೆಪಾಸಿಟ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ಸೆಲ್ಫ್ ಸರ್ವೀಸ್ ಝೋನ್​ನಲ್ಲಿ ಗ್ರಾಹಕರ ಜತೆ ಸಂವಹನಕ್ಕೆಂದು ಚಾಟ್​ಬಾಟ್ ಇರಲಿದ್ದು ದಿನದ 24 ಗಂಟೆಯೂ ಸೇವೆ ಲಭ್ಯವಿರಲಿದೆ.
ಡಿಜಿ ಬ್ರ್ಯಾಂಚ್ ಕಿಯೋಸ್ಕ್ ಕೂಡ ಇರಲಿದ್ದು, ಮೊಬೈಲ್​ ಬ್ಯಾಂಕಿಂಗ್ ಆ್ಯಪ್​ಗಳಲ್ಲಿ ಲಭ್ಯವಿರುವ ಎಲ್ಲ ಸೇವೆಗಳೂ ಇದರಲ್ಲಿ ದೊರೆಯಲಿವೆ ಎಂದು ಐಸಿಐಸಿಐ ಬ್ಯಾಂಕ್ ಮಾಹಿತಿ ನೀಡಿದೆ.

ಉಳಿತಾಯ ಖಾತೆ, ಕರೆಂಟ್ ಅಕೌಂಟ್ ತೆರೆಯುವುದು, ಗೃಹ ಸಾಲ, ಆಟೊ ಸಾಲ, ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಈ ಸೇವೆ ಉಪಯೋಗಕ್ಕೆ ಬರಲಿದೆ.
ಡಿಜಿಟಲ್ ಅಸಿಸ್ಟೆನ್ಸ್ ಝೋನ್​ನಲ್ಲಿ ಬ್ರ್ಯಾಂಚ್ ಅಧಿಕಾರಿಗಳಿರಲಿದ್ದು, ಹಣಕಾಸು ಮತ್ತು ಹಣಕಾಸೇತರ ವ್ಯವಹಾರಗಳಲ್ಲಿ ಗ್ರಾಹಕರಿಗೆ ನೆರವಾಗಲಿದ್ದಾರೆ.

ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಕೆಗೆ ಗ್ರಾಹಕರಿಗೆ ಅಧಿಕಾರಿಗಳು ನೆರವಾಗಲಿದ್ದಾರೆ.ಈ ಮೇಲೆ ಹೇಳಿರುವ ಎಲ್ಲ ಸೇವೆಗಳೂ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ದೊರೆಯಲಿವೆ.

ಐಸಿಐಸಿಐ ಬ್ಯಾಂಕ್​ನ ಡಿಜಿಟಲ್ ಅಸಿಸ್ಟೆನ್ಸ್ ಝೋನ್ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30ರಿಂದ ಸಂಜೆ 3 ಗಂಟೆವರೆಗೆ ಲಭ್ಯವಿರಲಿದೆ. ಹಾಗೂ ಅದೇ ರೀತಿ ಮೊದಲ, ಮೂರನೇ ಹಾಗೂ ಐದನೇ ಶನಿವಾರಗಳಂದು ಕೂಡ ಸೇವೆ ಲಭ್ಯವಿರಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಡಿಬಿಯುನಲ್ಲಿ ದೊರೆಯುವ ಸೇವೆಗಳು:
ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಹರಿದ್ವಾರ, ಚಂಡೀಗಢ, ಫರೀದಾಬಾದ್ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ 24 ಜಿಲ್ಲೆಗಳಲ್ಲಿ ಡಿಬಿಯುಗಳನ್ನು ಆರಂಭಿಸಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಡಿಬಿಯುನಲ್ಲಿ ಕೂಡ ಸೆಲ್ಫ್ ಸರ್ವೀಸ್ ಝೋನ್ ಹಾಗೂ ಅಸಿಸ್ಟೆಡ್ ಝೋನ್ ಇರಲಿದೆ.

ಸ್ಥಿರ ಹಾಗೂ ಆರ್​ಡಿ ಠೇವಣಿ ತೆರೆಯುವುದು

ಗ್ರಾಹಕರಿಗೆ ಡಿಜಿಟಲ್ ಕಿಟ್: ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಟ್ರಾನ್ಸಿಟ್ ಸಿಸ್ಟಂ ಕಾರ್ಡ್

ಉದ್ಯಮಿಗಳಿಗೆ ಡಿಜಿಟಲ್ ಕಿಟ್: ಯುಪಿಐ ಕ್ಯುಆರ್ ಕೋಡ್, ಭೀಮ್ ಆಧಾರ್, ಪಿಒಎಸ್​ ದೊರೆಯುವುದು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯದ ಯೋಜನೆಗಳ ಅನ್ವಯ ದೊರೆಯುವ ಸಾಲಗಳು ಲಭ್ಯ ಇದೆ.

ಆನ್‌ಲೈನ್ ಅರ್ಜಿ ಸಲ್ಲಿಸುವಿಕೆಯಿಂದ ತೊಡಗಿ ವಿತರಣೆಯವರೆಗೆ ಅಂತಹ ಸಾಲಗಳ ಡಿಜಿಟಲ್ ಪ್ರಕ್ರಿಯೆಗೆ ನೆರವು ನೀಡುತ್ತದೆ.

ಕ್ಯಾಷ್ ಡೆಪಾಟಿಸ್ ಮಷಿನ್​ಗಳ ಮೂಲಕ ನಗದು ಪಡೆಯುವಿಕೆ ಮತ್ತು ಠೇವಣಿ ಇಡುವುದಕ್ಕೆ ವ್ಯವಸ್ಥೆ ಇರುತ್ತದೆ.

ಪಾಸ್​ಬುಕ್ ಪ್ರಿಂಟಿಂಗ್ ಮತ್ತು ಸ್ಟೇಟ್​ಮೆಂಟ್ ಜನರೇಟ್ ಮಾಡಲು ಸಾಧ್ಯ.

ಪ್ರಧಾನಮಂತ್ರಿ ಜೀವನಜ್ಯೋತಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಬರುವ 15 ವಿಮಾ ಸೇವೆಗಳು ದೊರೆಯುತ್ತದೆ.

ಕೆವೈಸಿ ಅಪ್​ಡೇಟ್ / ವೈಯಕ್ತಿಕ ವಿವರಗಳು ಇತ್ಯಾದಿಗಳ ಅಪ್​ಡೇಟ್ ಮಾಡಿಕೊಳ್ಳಬಹುದು.

ಫಂಡ್ ಟ್ರಾನ್ಸ್​ಫರ್ (ನೆಫ್ಟ್/ ಐಎಂಪಿಎಸ್) ಮಾಡಬಹುದು.

ಅಕೌಂಟ್ ಓಪನಿಂಗ್ ಕಿಯೋಸ್ಕ್ / ಕಿಯೋಸ್ಕ್ ವಿತ್ ಇ-ಕೆವೈಸಿ ಸಾಧ್ಯ ಇದೆ.

ಅಟಲ್ ಪಿಂಚಣಿ ಯೋಜನೆ ಸೌಲಭ್ಯ ಇದೆ.

ಈ ಎಲ್ಲಾ ಪ್ರಯೋಜನಗಳ ಸಂಕ್ಷಿಪ್ತ ವರದಿಯೊಂದಿಗೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತಂದಿರುತ್ತಾರೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಇದರಿಂದಾಗಿ ದೇಶವು ಪ್ರಗತಿ ಹೊಂದಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಚಾಲನೆ ನೀಡಿದರು.

Leave A Reply

Your email address will not be published.