ಭೇಷ್ ಹೆಣ್ಣೇ | ಬ್ಯಾಂಕ್ ದರೋಡೆ ಮಾಡಲು ಬಂದ ವ್ಯಕ್ತಿ ಜೊತೆ ಬರಿಗೈಯಲ್ಲೇ ಕಾದಾಡಿದ ಮಹಿಳಾ ಬ್ಯಾಂಕ್ ಅಧಿಕಾರಿ!!!

ಕಳ್ಳತನ ಮಾಡಲು ಕಳ್ಳರು ನಾನಾ ರೀತಿಯ ತಂತ್ರಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗಿಸಿ ಜನರನ್ನು ಯಾಮಾರಿಸಿ ಹಣ ಲೂಟಿ ಮಾಡುವ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.

ಅದರಲ್ಲೂ ಕೂಡ ವಿಶೇಷವಾಗಿ ಬ್ಯಾಂಕ್, ಒಡವೆ ಅಂಗಡಿಗಳು ಇಲ್ಲವೇ ದೊಡ್ಡ ಮಾಲ್ಗಳನ್ನು ಕೇಂದ್ರೀಕರಿಸಿ ದರೋಡೆ ಮಾಡುವುದು ವಾಡಿಕೆ. ಇಂತಹ ಸಂದರ್ಭದಲ್ಲಿ ತಮ್ಮ ಮೇಲೆ ದರೋಡೆ ನಡೆದಾಗ ಹೆಚ್ಚಿನವರು ಜೀವ ಭಯದಿಂದ ಓಡಿ ಹೋಗುವ ಪ್ರಸಂಗಗಳೇ ಹೆಚ್ಚು. ಆದರೆ, ಇದಕ್ಕೆ ತದ್ವರುದ್ಧವಾದ ಪ್ರಕರಣವೊಂದು ಮುಂದೆಲೆಗೆ ಬಂದಿದೆ.

ಶನಿವಾರ ಸಂಜೆ ರಾಜಸ್ತಾನದ ಅಬೋಹರ್ ಸಮೀಪದ ಶ್ರೀಗಂಗಾನಗರದ ಮೀರಾ ಮಾರ್ಗದಲ್ಲಿರುವ ಮರುಧರ ಗ್ರಾಮೀಣ ಬ್ಯಾಂಕ್‌ನ ಬ್ಯಾಂಕ್ ಮ್ಯಾನೇಜರ್ ಪೂನಂ ಗುಪ್ತಾ ಎಂಬ ಮಹಿಳಾ ಅಧಿಕಾರಿಯೊಬ್ಬರು ಕೈನಲ್ಲಿ ಚೂರಿ ಹಿಡಿದುಕೊಂಡು ಬ್ಯಾಂಕ್ ದರೋಡೆ ನಡೆಸಲು ಬಂದ ವ್ಯಕ್ತಿಯೊಂದಿಗೆ  ಧೈರ್ಯದಿಂದ ಹೋರಾಡಿದ ಘಟನೆ ನಡೆದಿದೆ.

ಕಳ್ಳ ನನ್ನು 29 ವರ್ಷದ ಲವಿಶ್ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳನ್ನು ಹೆದರಿಸಲು ಚಾಕು ಹಿಡಿದು ಆವರಣವನ್ನು ಪ್ರವೇಶಿಸಿದ್ದಾನೆ. ಆದರು ಕೂಡ ಗುಪ್ತಾ ಅವರು ಧೈರ್ಯದಿಂದ ತನ್ನ ಕೈಗಳಿಂದ ಪುರುಷ ದರೋಡೆಕೋರನ ವಿರುದ್ಧ ಹೋರಾಡಲು ಮುಂದಾಳತ್ವವನ್ನು ವಹಿಸಿದ್ದಾರೆ.

ಲಾವಿಶ್ ನೌಕರರಿಗೆ ಬ್ಯಾಗ್‌ಗೆ ನಗದು ತುಂಬುವಂತೆ ಬೆದರಿಕೆ ಹಾಕಿದ್ದು, ಆಗ ಅವನ ಜೇಬಿನಿಂದ ಇಕ್ಕಳವು ಜಾರಿಬಿದ್ದಿದೆ. ಅದನ್ನು ಗುಪ್ತಾ ಎತ್ತಿಕೊಂಡು ಅವನೊಂದಿಗೆ ಕಾದಾಡಿದ ಘಟನೆ ನಡೆದಿದೆ.

ಅನೇಕ ಮಂದಿ ನೌಕರರ ನಡುವೆ ಮಹಿಳಾ ಅಧಿಕಾರಿಯೊಬ್ಬರು ಕಳ್ಳನ ಸೆರೆ ಹಿಡಿಯಲು ನಡೆಸಿದ ಪ್ರಯತ್ನ ಶ್ಲಾಘನೀಯವಾದದ್ದು. ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ದರೋಡೆಕೋರನ ನಡುವಿನ ಎನ್ಕೌಂಟರ್ ಅನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೀರಾ ಚೌಕ್ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ವಿಲಾಸ್ ಬಿಷ್ಣೋಯ್ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

Leave A Reply

Your email address will not be published.