Good News | ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, 50% ವರೆಗೆ ಸಬ್ಸಿಡಿ

ಈಗ ಕೃಷಿಯೂ ಕೂಡಾ ತಂತ್ರಜ್ಞಾನವನ್ನು ಅವಲಂಬಿಸಿಕೊಂಡಿದೆ. ಬಿತ್ತನೆ ನೀರಾವರಿ ಬೇಸಾಯ ಕಟಾವು ಕಳೆ ನಿಯಂತ್ರಣ ಎಲ್ಲಾ ಕಡೆಯೂ ಉಪಕರಣಗಳು ಮನುಷ್ಯನನ್ನು ಬದಿಗೆ ಸರಿಸಿ ಚಕ ಚಕ್ ಆಗಿ ಕೆಲಸ ನಿರ್ವಹಿಸುತ್ತಿವೆ. ನಿಧಾನವಾಗಿ ಭಾರತದಲ್ಲಿಯೂ ಕೂಡ ಕೃಷಿಯು ಒಂದು ಉದ್ಯಮದ ಸ್ವರೂಪವಾಗಿ ಬದಲಾಗುತ್ತಿದೆ.

ಈಗ ಪ್ರಗತಿಪರ ದೊಡ್ಡ ರೈತರು ಕೃಷಿಯಲ್ಲಿ ಡ್ರೋನ್‌ಗಳ ಸಹಾಯ ಪಡೆಯುತ್ತಿದ್ದಾರೆ. ಇದು ಬೆಳೆ ಬೆಳೆಯುವಲ್ಲಿ ಸಾಕಷ್ಟು ಸಮಯವನ್ನು ಕಡಿಮೆ ಮಾಡುವುದರ ಜತೆಗೆ ವ್ಯಯವಾಗುವ ಹಣವನ್ನು ಮತ್ತು ಮುಖ್ಯವಾಗಿ ಮಾನವ ಕಾರ್ಯಗಳಲ್ಲಿ ನಡೆಯುವ ತಪ್ಪುಗಳನ್ನು ಕಡಿಮೆ ಮಾಡುತ್ತದೆ. ಆದರೆ ಎಲ್ಲಾ ರೈತರಿಗೆ ಡ್ರೋನ್ ಖರೀದಿಸುವುದು ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರದಿಂದ ಡ್ರೋನ್‌ಗಳಿಗೆ ಸಹಾಯಧನ ಲಭ್ಯವಿದೆ. ರೈತರು ಬಯಸಿದರೆ, ಅವರು ಡ್ರೋನ್‌ಗಳನ್ನು  ಶೇಕಡಾ 40 ರಿಂದ 50 ರಷ್ಟು ಸಬ್ಸಿಡಿ ಅಡಿಯಲ್ಲಿ ಈಗ ಪಡೆಯಬಹುದಾಗಿದೆ.

ಕೃಷಿ ವಿಶ್ವವಿದ್ಯಾನಿಲಯಗಳಿಗೆ ಮತ್ತು ಕೃಷಿ ತರಬೇತಿ ಸಂಸ್ಥೆಗಳಿಗೆ ಡ್ರೋನ್ ಖರೀದಿಗೆ ಅಂತ ಗರಿಷ್ಠ 10 ಲಕ್ಷ ಅಂದರೆ ಶೇಕಡಾ 100 ರಷ್ಟು ಅನುದಾನ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಕೃಷಿ ಉತ್ಪಾದನಾ ಕಂಪನಿಗಳು ಡ್ರೋನ್‌ಗಳನ್ನು ಖರೀದಿಸಲು ಶೇಕಡಾ 75 ರಷ್ಟು ಸಬ್ಸಿಡಿ ಪಡೆಯುತ್ತಿವೆ. ಕೃಷಿ ಪದವೀಧರ ಯುವಕರು, ಎಸ್‌ಸಿ/ಎಸ್‌ಟಿ ವರ್ಗ ಮತ್ತು ಮಹಿಳಾ ರೈತರು ಡ್ರೋನ್‌ಗಳನ್ನು ಖರೀದಿಸಿದರೆ, ಅವರು ಶೇಕಡಾ 50 ರಷ್ಟು ಸಹಾಯಧನ ಪಡೆಯಬಹುದು. ಅಂದರೆ ಅವರಿಗೆ 5 ಲಕ್ಷ ರೂ.ಗಳ ಸಹಾಯಧನ ಸಿಗಲಿದೆ. ಐದು ಲಕ್ಷದಲ್ಲಿ ಡ್ರೋನ್ ಪಡೆದು ಕೃಷಿ ಕಾರ್ಯಗಳಲ್ಲಿ ತೊಡಗಬಹುದು. ನಮ್ಮ ಸಾಮಾನ್ಯ ರೈತರಿಗೆ ಡ್ರೋನ್ ಖರೀದಿಸಲು ಶೇ.40 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ದ್ರೋಣ್ಗಳ ಬಳಕೆ ಮುಖ್ಯವಾಗಿ ಕೀಟನಾಶಗಳ ಯಶಸ್ವಿ ಸಿಂಪಡಣೆಗೆ ಅತ್ಯಂತ ಸೂಕ್ತ  ಯಾವುದೇ ಬೆಳೆಯನ್ನು ರೋಗದಿಂದ ರಕ್ಷಿಸಲು ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಹೀಗಾಗಿ ರೈತರು ಕೈಯಲ್ಲಿ ಸಿಂಪರಣೆ ಮಾಡುತ್ತಿದ್ದು, ಸಾಕಷ್ಟು ಸಮಯ ಹಿಡಿಯುತ್ತಿದೆ. ಅಲ್ಲದೆ ಸಿಂಪಡಣೆ ನಡೆಸುವ ವ್ಯಕ್ತಿಗೆ ಕೀಟನಾಶಕಗಳು ಆರೋಗ್ಯ ಹಾನಿಗೆ ಕಾರಣವಾಗಬಲ್ಲವು. ಆದರೆ ಈಗ ಡ್ರೋನ್‌ಗಳು ಈ ಕೆಲಸವನ್ನು ಸುಲಭಗೊಳಿಸಿವೆ. ವಿಶೇಷವೆಂದರೆ ಡ್ರೋನ್ ತಂತ್ರಜ್ಞಾನದ ಸಹಾಯದಿಂದ ದೊಡ್ಡ ಪ್ರದೇಶಗಳಿಗೆ ಒಂದೇ ಬಾರಿಗೆ ಸಿಂಪಡಿಸಬಹುದಾಗಿದೆ. ಅಲ್ಲದೆ ಸಿಂಪಡಣೆ ಎಲ್ಲಾ ಗಿಡಗಳಿಗೂ ಸಿಕ್ಕಿ ಒಂದೇ ರೀತಿಯಲ್ಲಿ ಕೀಟ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ. ಇದು ಔಷಧಿ ಮತ್ತು ಸಮಯ ಎರಡನ್ನೂ ಉಳಿಸುತ್ತದೆ. ರೈತರ ಆರೋಗ್ಯವನ್ನೂ ಕಾಪಾಡುತ್ತದೆ.

Leave A Reply

Your email address will not be published.