Hijab Split Verdict : ಹಿಜಾಬ್ ತೀರ್ಪಿನ ಬಗ್ಗೆ ಯು ಟಿ ಖಾದರ್ ಏನು ಹೇಳಿದ್ರು ಗೊತ್ತೇ?

ರಾಜ್ಯದಲ್ಲಿ ಶಾಲೆಯಲ್ಲಿ ಮಾತ್ರವಲ್ಲದೇ ಹೊರಗೆ ಕಾಲಿಡುವಾಗ ಹಿಜಾಬ್ ಧರಿಸಿಯೇ ಓಡಾಡಬೇಕು ಎಂಬ ವಿಚಾರ ರಾಜ್ಯದಲ್ಲಿ ದೊಡ್ದ ಮಟ್ಟದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟು, ಅದರಿಂದ ಹಿಂದೂ – ಮುಸ್ಲಿಂ ವಿರೋಧಿ ಬಣಕ್ಕೆ ನಾಂದಿಯಾಗಿ ಗಲಾಟೆಗಳು, ಪ್ರತಿಭಟನೆಗಳು ನಡೆದದ್ದು ಎಲ್ಲರಿಗೂ ನೆನಪಿರಬಹುದು..ಸದ್ಯ ಶಾಲೆಗಳಲ್ಲಿ ಸಮವಸ್ತ್ರದ ಹೊರತು ಬೇರೆ ಉಡುಪು ಧರಿಸಲು ಕೋರ್ಟ್ ಅವಕಾಶ ಕಲ್ಪಿಸಿಲ್ಲ.

ಇತ್ತೀಚಿನ ದಿನಗಳಲ್ಲಿ ಹಿಜಾಬ್ ವಿಚಾರ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಸಂಚಲನ ಸೃಷ್ಟಿಸಿದೆ. ವಿದೇಶದಲ್ಲಿ ಅದರಲ್ಲೂ ಪ್ರಸ್ತುತ ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.

ಗಲಭೆಕೋರರ ಮೇಲೆ ಅಶ್ರುವಾಯು ಪ್ರಯೋಗಿಸುವ ಜೊತೆಗೆ ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿರುತ್ತಿರುವ ಘಟನೆಯೂ ನಡೆಯುತ್ತಿದೆ.


ಹಿಜಾಬ್‌ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠ ವಿಭಿನ್ನ ಆದೇಶ ನೀಡಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿರುವ ಯು.ಟಿ. ಖಾದರ್‌, ಸುಪ್ರೀಂ ಕೋರ್ಟ್ ಹಿಜಾಬ್ ಸಂಬಂಧಿಸಿದಂತೆ ಎರಡು ರೀತಿಯ ತೀರ್ಪು ನೀಡಿದ್ದಾರೆ.


ದ್ವಿಸದಸ್ಯ ಪೀಠದ ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವುದರಿಂದ ಪ್ರಕರಣ ಮುಖ್ಯ ನ್ಯಾಯಮೂರ್ತಿಗೆ ವರ್ಗಾವಣೆಯಾಗಿದ್ದು ಅಲ್ಲಿನ ಘನವೆತ್ತ ನ್ಯಾಯಾಧೀಶರು ಹಿಜಾಬ್ ಪರ ಸಕಾರಾತ್ಮಕ ತೀರ್ಪು ನೀಡುವ ಆಶಾಭಾವನೆಯಿದೆ ಎಂದು ಖಾದರ್ ತಿಳಿಸಿದ್ದಾರೆ.

ಹಿಜಾಬ್ ಪರ ಸಮರ್ಪಕವಾದ ವಾದ ಮಂಡಿಸಿ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರಿಗೆ ಮನವರಿಕೆಯಾಗಿಸುವಲ್ಲಿ ಯಶಸ್ವಿಯಾದ ನ್ಯಾಯವಾದಿ ದೇವದತ್ ಕಾಮತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ದೇಶದ ಏಕತೆ, ಸಮಗ್ರತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ವ್ಯವಸ್ಥೆ ವಂಚಿತವಾಗದಂತೆ ವಿದ್ಯಾರ್ಥಿಗಳು ಪರ ತೀರ್ಪು ಬರಲಿದೆ ಎಂಬ ವಿಶ್ವಾಸವನ್ನು ಖಾದರ್ ವ್ಯಕ್ತಪಡಿಸಿದ್ದಾರೆ.


ಹಿಜಾಬ್ ವಿವಾದಕ್ಕೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಹೆಚ್ಚಿನ ಖುಷಿಯಾಗದಿದ್ದರೂ ಕೂಡ ತೀರ್ಪು ಸಮಾಧಾನ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.