ಏನಿದು ಹೊಸ ನಕಲು ಮಾಡೋ ತಂತ್ರ ? ಬೆಚ್ಚಿ ಬೀಳಿಸಿದೆ ವಿದ್ಯಾರ್ಥಿ ಮಾಡಿದ ಈ ಕೆಲಸ!!!

ಸುಂದರ ಜೀವನ ರೂಪಿಸಲು ಶಿಕ್ಷಣ ಅನಿವಾರ್ಯವಾಗಿದ್ದು, ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಕ್ಷರದ ಅರಿವು ತಿಳಿವಳಿಕೆ ಅತ್ಯಗತ್ಯವಾಗಿದೆ.

ಸಮಾಜದ ಆಗುಹೋಗುಗಳ ಬಗ್ಗೆ ವಿಮರ್ಶೆ ಹಾಗೂ ಸತ್ಯಾಸತ್ಯೆಯ ಬಗ್ಗೆ ಮಾಹಿತಿಯನ್ನು ಮೌಲ್ಯಮಾಪನ ಮಾಡಲು ಜ್ಞಾನ ಅವಕಾಶ ಮಾಡಿಕೊಡುತ್ತದೆ.
ಪರೀಕ್ಷೆ ಎಂದರೆ ಸಾಕು ಮಕ್ಕಳು ನಾನಾ ರೀತಿಯ ನಾಟಕಗಳನ್ನು ಮಾಡುವುದು ಸಾಮಾನ್ಯ.

ಈ ನಡುವೆ ಸರಿಯಾಗಿ ಪರೀಕ್ಷೆಗೆ ತಯಾರಿ ನಡೆಸದೇ ಇದ್ದಾಗ ಕಾಪಿ ಪೇಪರ್ ಹಿಡಿದುಕೊಂಡು ಹೋಗುವ ಪ್ರವೃತ್ತಿ ಹೆಚ್ಚಿನ ಮಕ್ಕಳಿಗಿದೆ. ಅದರಲ್ಲೂ ನಕಲಿ ಮಾಡಲು ಬಳಸುವ ತಂತ್ರಗಳನ್ನು ಓದುವ ವಿಷಯದಲ್ಲಿ ಅಳವಡಿಸಿದ್ದರೆ ಬಹುಶಃ. ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಬಹುದೇನೋ??


ನಕಲಿ ಮಾಡಲು ಪೇಪರ್ ಅನ್ನು ಬಟ್ಟೆಯಲ್ಲಿ, ವಾಚ್, ಯೂನಿಫಾರಂ ನ ಕಾಲರ್, ಚಪ್ಪಲಿ ಪೆನ್, ಸ್ಕೇಲ್ ಹೀಗೆ ವಿಭಿನ್ನ ವಸ್ತುಗಳಲ್ಲಿ ಇಟ್ಟು ಉಳಿದವರನ್ನು ಮಂಗ ಮಾಡಿ ಪಾಸ್ ಆಗಲು ಪ್ರಯತ್ನಿಸುವುದು ಹೆಚ್ಚಿನವರಿಗೆ ಅಭ್ಯಾಸವಾಗಿದೆ .


‘ಮುನ್ನಾಬಾಯ್ ಎಂಬಿಬಿಎಸ್’ ಚಿತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಮಾಡುವ ದೃಶ್ಯವನ್ನು ನೈಜ ಜೀವನದಲ್ಲಿ ಅನುಕರಣೆ ಮಾಡಿ ಅನುಸರಿಸುವ ವಿದ್ಯಾರ್ಥಿಗಳು ಕೂಡಾ ಇದ್ದಾರೆ ಎಂದರೆ ಅಚ್ಚರಿಯಾಗಬಹುದು.


ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ನಕಲು ಮಾಡಲು ವಿಭಿನ್ನ ತಂತ್ರಗಾರಿಕೆಯನ್ನು ಬಳಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅದು ವೈರಲ್ ಆಗಿದೆ.

ಕಾನೂನು ಪರೀಕ್ಷೆಗೆ ಸಂಬಂಧಪಟ್ಟ ಇಡೀ ಪಠ್ಯವನ್ನೇ ವಿದ್ಯಾರ್ಥಿಯೊಬ್ಬ 11 ಪೆನ್ನುಗಳ ಮೇಲೆ ಕೆತ್ತಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾನೆ. ಪರೀಕ್ಷೆಯಲ್ಲಿ ಪೆನ್ನುಗಳು ಅವಶ್ಯಕವಾಗಿರುವ ಕಾರಣ ಆತ ಈ ತಂತ್ರಕ್ಕೆ ಮೊರೆ ಹೋಗಿದ್ದು, ಅವನ ಈ ಬುದ್ದಿವಂತಿಕೆಯನ್ನು ಮೆಚ್ಚಲೇಬೇಕು.


ಆದರೆ ಈ ತಂತ್ರ ವನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ಆತನಿಂದ ಪೆನ್ನುಗಳನ್ನು ಕಸಿದುಕೊಂಡಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ಪ್ರೊಫೆಸರ್ ಒಬ್ಬರು ಕಾಲೇಜು ಸಂಗ್ರಹದಲ್ಲಿ ಸಿಕ್ಕಿದ್ದ ಈ ಪೆನ್ನುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಈ ರೀತಿಯ ತಂತ್ರಗಳನ್ನು ಬಳಸಿ, ಮತ್ತೊಬ್ಬರಿಗೆ ಮೋಸ ಮಾಡುವ ಪ್ರವೃತ್ತಿಯಿಂದ ವ್ಯಕ್ತಿ ತನ್ನ ಆತ್ಮಸಾಕ್ಷಿಗೆ ಮೋಸ ಮಾಡುವುದಲ್ಲದೆ, ತನ್ನ ಭವಿಷ್ಯಕ್ಕೆ ಈ ಅಭ್ಯಾಸ ಮಾರಕವಾಗಬಹುದು ಎಂಬ ಸಣ್ಣ ಕಲ್ಪನೆಯನ್ನು ಕೂಡ ಮಾಡುವುದಿಲ್ಲ. ನಕಲಿ ಮಾಡಿ ಸಿಕ್ಕಿ ಬಿದ್ದರೆ ಜೀವನಪರ್ಯಂತ ಆ ವ್ಯಕ್ತಿಯ ಹೆಸರಿನ ಮೇಲೆ ಕಪ್ಪು ಚುಕ್ಕೆ ಯಂತೆ ಪರಿಣಮಿಸಬಹುದು.

Leave A Reply

Your email address will not be published.