Shocking | ಇನ್ಫೋಸಿಸ್ ಸಂಸ್ಥೆ ಭಾರತೀಯ ತಾಯಂದಿರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳದಂತೆ ಸೂಚಿಸಿತ್ತಾ ?!

Infosys : ಭಾರತೀಯ ಮೂಲದ ಟೆಕ್ ದೈತ್ಯ ಇನ್ಫೋಸಿಸ್ ಭಾರತೀಯ ಮೂಲದವರನ್ನು, ತಾಯಂದಿರನ್ನು ನೇಮಿಸಿಕೊಳ್ಳದಂತೆ ಸೂಚಿಸಿದೆ ಎಂದು ಇನ್ಫಿ ( Former Infosys Human Resource) ಮಹಿಳಾ ವೈಸ್​ ಪ್ರೆಸಿಡೆಂಟ್ ಆರೋಪಿಸಿದ್ದಾರೆ.

ಭಾರತ ಮೂಲದ ಐಟಿ ಸಂಸ್ಥೆಯು ಭಾರತೀಯ ಮೂಲದವರನ್ನು, ಮಕ್ಕಳಿರುವ ಮಹಿಳೆಯರನ್ನು ಮತ್ತು 50 ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ನೇಮಿಸಿಕೊಳ್ಳದಂತೆ ಕೇಳಿಕೊಂಡಿದೆ ಎಂದು ಮಾಜಿ ಇನ್ಫೋಸಿಸ್ ಮಾನವ ಸಂಪನ್ಮೂಲ ಮಹಿಳಾ ವೈಸ್​ ಪ್ರೆಸಿಡೆಂಟ್ ಹೇಳಿದ್ದಾರೆ.

ಇನ್ಫೋಸಿಸ್‌ನ ಮಾನವ ಸಂಪನ್ಮೂಲದ ಮಾಜಿ ಉಪಾಧ್ಯಕ್ಷರು ಆಗಿರುವ ಆಕೆ ಭಾರತೀಯ ಐಟಿ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿರುವ ಇನ್ಫೋಸಿಸ್ ಕಂಪನಿಯ ಇತರೆ ಕೆಲವು ಹಿರಿಯ ಅಧಿಕಾರಿಗಳು ಸಹ ಕಂಪನಿಯ ಕಾನೂನುಬಾಹಿರ ಮತ್ತು ತಾರತಮ್ಯದ ನೇಮಕಾತಿ ನೀತಿ ಬಗ್ಗೆ ಆರೋಪಿಸಿದ್ದಾರೆ.

ಈ ಸಂಬಂಧ, ಇನ್ಫೋಸಿಸ್‌ನಲ್ಲಿ ಪ್ರತಿಭಾ ಉದ್ಯೋಗಿಗಳ ನೇಮಕಾತಿ ವಿಭಾಗದ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೀಜೀನ್ (Jill Prejean) ಅಮರಿಕ ಕೋರ್ಟ್​ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಭಾರತೀಯ ಮೂಲದ ಜನರು, ಮಕ್ಕಳಿರುವ ಮಹಿಳೆಯರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ತಪ್ಪಿಸುವಂತೆ ಇನ್ಫೋಸಿಸ್ ತನ್ನನ್ನು ಕೇಳಿಕೊಂಡಿತ್ತು ಎಂದು US ನ್ಯಾಯಾಲಯದಲ್ಲಿ ಅವರು ಸಾಕ್ಷ್ಯ ನುಡಿದಿದ್ದಾರೆ.

ಅಮೆರಿಕಾದಲ್ಲಿ ಇನ್ಫೋಸಿಸ್ ತಾರತಮ್ಯದ ನೇಮಕಾತಿ ನೀತಿ (discriminatory hiring practices) ಆರೋಪಗಳನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿಗೆ.

2013 ರಲ್ಲಿ, ಅಮೇರಿಕಾದ ಇನ್ಫಿ ಉದ್ಯೋಗಿ, ಅರ್ಜಿದಾರ ಬ್ರೆಂಡಾ ಕೊಹ್ಲರ್ ತಮ್ಮ ರಾಷ್ಟ್ರೀಯತೆಯ ಕಾರಣದಿಂದ ಇನ್ಫೋಸಿಸ್ ತನ್ನನ್ನು ತಿರಸ್ಕರಿಸಿತು ಎಂದು ಆರೋಪಿಸಿದ್ದರು. ಯುಎಸ್‌ನಲ್ಲಿ ಇನ್ಫೋಸಿಸ್ ಉದ್ಯೋಗಿಗಳು ದಕ್ಷಿಣ ಏಷ್ಯಾ ಮೂಲದ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅವರು ನೀಡಿದ್ದ ದೂರಿನಲ್ಲಿ ಆಗ ಆರೋಪಿಸಲಾಗಿತ್ತು.

ಇತ್ತೀಚೆಗೆ ಕೋರ್ಟ್​​ನಲ್ಲಿ ದೂರು ಕೊಟ್ಟ ನಂತರ ಕಂಪನಿಯ ಅಧಿಕಾರಿಗಳು ಪ್ರೀಜೀನ್ ಅವರ ದೂರನ್ನು ವಜಾಗೊಳಿಸುವಂತೆ ಯುಎಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಈ ಮಾಜಿ ಉದ್ಯೋಗಿ ನಿರ್ದಿಷ್ಟ ಕಾಮೆಂಟ್‌ಗಳನ್ನು ಪುರಾವೆಯಾಗಿ ಒದಗಿಸಿಲ್ಲ ಮತ್ತು ಇನ್ನಿತರೆ ಕಾರಣಗಳ ಜೊತೆಗೆ ನ್ಯಾಯವ್ಯಾಪ್ತಿಯ ಕೊರತೆಯಿದೆ ಎಂಬ ಆಧಾರದ ಮೇಲೆ ಕೇಸು ವಜಾಗೊಳಿಸುವಂತೆ ಇನ್ಫೋಸಿಸ್ ಕೋರಿದೆ.

ಆದರೆ, ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್‌ನ US ಜಿಲ್ಲಾ ನ್ಯಾಯಾಲಯವು (US District Court for Southern District of New York) ಇನ್ಫೋಸಿಸ್‌ ಮನವಿಯನ್ನು ತಿರಸ್ಕರಿಸಿತು.

2018 ರಲ್ಲಿ ಇನ್ಫೋಸಿಸ್‌ನಿಂದ ನೇಮಕಗೊಂಡಾಗ ತನಗೆ 59 ವರ್ಷ ವಯಸ್ಸಾಗಿತ್ತು ಎಂದು ಪ್ರೀಜೀನ್ ಹೇಳಿದರು. ಉಪಾಧ್ಯಕ್ಷರು ಮತ್ತು ಪಾಲುದಾರರ ಹಂತಗಳಲ್ಲಿ ಕಾರ್ಯನಿರ್ವಾಹಕರನ್ನು ನೇಮಕ ಮಾಡುವಲ್ಲಿ ಪರಿಣಿತಳಾಗಿ ತಾನು ಕೆಲಸ ಮಾಡುತ್ತಿದ್ದೆ. ತಮ್ಮ ಉದ್ಯೋಗದ ಸಮಯದಲ್ಲಿ “ವಯಸ್ಸು, ಲಿಂಗ ಮತ್ತು ಪಾಲನೆ ಮಾಡುವವರ ಸ್ಥಿತಿಯ ಆಧಾರದ ಮೇಲೆ ಪಾಲುದಾರ ಮಟ್ಟದ ಕಾರ್ಯನಿರ್ವಾಹಕರಲ್ಲಿ ಅಕ್ರಮ ತಾರತಮ್ಯದ ದ್ವೇಷ ಅತಿರೇಕದ ಸಂಸ್ಕೃತಿಯನ್ನು ಕಂಡು ಆಘಾತಕ್ಕೊಳಗಾಗಿದ್ದೆ” ಎಂದು ಪ್ರೀಜೀನ್ ಕೋರ್ಟ್​​ಗೆ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Leave A Reply

Your email address will not be published.