BREAKING NEWS : ದೀಪಾವಳಿಗೆ ‘ಪಟಾಕಿ’ ನಿಷೇಧ ಮುಂದುವರಿಕೆ – ಸುಪ್ರೀಂಕೋರ್ಟ್ |

BREAKING NEWS : ದೀಪಾವಳಿಗೆ ‘ಪಟಾಕಿ’ ನಿಷೇಧ ಮುಂದುವರಿಕೆ – ಸುಪ್ರೀಂಕೋರ್ಟ್ | Ban on Crackers

ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮುಂದುವರೆದಿದೆ. ದೆಹಲಿಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪಟಾಕಿ ನಿಷೇಧ ಹಿಂಪಡೆಯಲು ಆಗುವುದಿಲ್ಲ ಎಂದು ಕೋರ್ಟು ಸ್ಪಷ್ಟಪಡಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಟಾಕಿ ನಿಷೇಧ ಮುಂದುವರೆಯಲಿದೆ. ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ..

ದೆಹಲಿಯಲ್ಲಿ ಪಟಾಕಿ ಬಳಸಲು ಕಳೆದ ವರ್ಷ ನಿಷೇಧ ಇತ್ತು. ಈ ಬಾರಿಯೂ ಮಾಲಿನ್ಯದ ಅಪಾಯದಿಂದ ರಕ್ಷಿಸಲು, ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಇದರಿಂದ ಜನರ ಜೀವಗಳನ್ನು ಉಳಿಸಬಹುದು. ಈ ಬಾರಿ ದೆಹಲಿಯಲ್ಲಿ ಆನ್ಲೈನ್ ಮಾರಾಟ ಮತ್ತು ಪಟಾಕಿಗಳ ವಿತರಣೆಯನ್ನು ಸಹ ನಿಷೇಧಿಸಲಾಗಿದೆ. ಈ ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ.

ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದರು. ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟಕ್ಕೂ ನಿಷೇಧವಿದೆ ಎಂದು ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಅದರಂತೆ ಇವಾಗ ಸುಪ್ರೀಂಕೋರ್ಟಿನಿಂದಲೂ ಪಟಾಕಿ ಬಳಸಲು ಅನುಮತಿ ಸಿಕ್ಕಿಲ್ಲ. ದೆಹಲಿಯ ಜನತೆಯ ಪಟಾಕಿ ರಹಿತವಾಗಿ ದೀಪಾವಳಿ ಆಚರಿಸಲಾಗಿದೆ.

Leave A Reply

Your email address will not be published.