SBI Credit Card ಹೊಂದಿರುವ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಏನಿದೆ ಆಫರ್?

ಈ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.

ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ದೈತ್ಯ ಕಂಪನಿಗಳು ಆಫರ್ ನೀಡುತ್ತಿರುವ ಬೆನ್ನಲ್ಲೇ, ಎಸ್‌ಬಿಐ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. SBI ಡಿಜಿಟಲ್ ಸೇವೆಗಳನ್ನು ನೀಡುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಆರ್ಥಿಕ ನೆರವನ್ನು ನೀಡುತ್ತದೆ.

ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಕೊಳ್ಳುವಿಕೆ ಸಂಭ್ರಮವನ್ನು ದುಪ್ಪಟ್ಟು ಮಾಡಲು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ಗ್ರಾಹಕರಿಗೆ ಆಫರ್ ನೀಡಲು ತಯಾರಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭ್ರಮದಿಂದ ಶಾಪಿಂಗ್ ಮಾಡಲು ಮುಂದಾದಾಗ ಹಣದ ಕೊರತೆ ಕಾಡಬಹುದು ಹಾಗಾಗಿ, ಆನಂದವನ್ನು ತಡೆ ಹಿಡಿಯದೆ, ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಲು ನೆರವಾಗುತ್ತದೆ.

ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಕ್ರೆಡಿಟ್ ಕಾರ್ಡ್ ಕೊಡುಗೆಗಳನ್ನು ನೀಡಲಿದ್ದು, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಿದೆ.

SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕೊಡುಗೆಗಳ ಬಗ್ಗೆ ಗಮನ ಹರಿಸಿದರೆ:

ವಿವೋ ಮತ್ತು ಒಪ್ಪೋ ಎರಡೂ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಇಎಂಐ ವಹಿವಾಟುಗಳಲ್ಲಿ ಕ್ರಮವಾಗಿ 8,000 ಮತ್ತು 10% ಕ್ಯಾಶ್‌ಬ್ಯಾಕ್ ಅನ್ನು ನೀಡುವುದರಿಂದ ಗ್ರಾಹಕರು ನೆಚ್ಚಿನ ಮೊಬೈಲ್ ಖರೀದಿಸಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. SBI ಕ್ರೆಡಿಟ್ ಕಾರ್ಡ್ ದೀಪಾವಳಿ ಕೊಡುಗೆಯ ಭಾಗವಾಗಿ 2,500 ರೂ ಅಥವಾ 5,000 ರೂ ಫ್ಲಾಟ್ ಕ್ಯಾಶ್‌ಬ್ಯಾಕ್‌ನೊಂದಿಗೆ TBZ ನಿಂದ ಆಭರಣಗಳನ್ನು ಪಡೆಯಬಹುದಾಗಿದೆ.

ಮ್ಯಾಕ್ಸ್ ಮತ್ತು ಪ್ಯಾಂಟಲೂನ್ ಸ್ಟೋರ್‌ಗಳಲ್ಲಿ ಕ್ರಮವಾಗಿ 10% ಮತ್ತು 5% ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ಈ ಮಧ್ಯೆ ರಿಲಯನ್ಸ್ ಟ್ರೆಂಡ್ಸ್ ನಲ್ಲಿ 5% ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. .

ಮನೆಯ ನಿತ್ಯ ಉಪಯೋಗಿ ಸಾಧನಗಳಾದ, ರೆಫ್ರಿಜರೇಟರ್, ಎಸಿ ಅಥವಾ ಟಿವಿ ಮೇಲೆ ಕ್ಯಾಶ್ ಬ್ಯಾಕ್ ಗಳಿಸಿ. ಬಾಷ್ ಉತ್ಪನ್ನಗಳ ಮೇಲೆ 15% ಕ್ಯಾಶ್‌ಬ್ಯಾಕ್‌ಗೆ ಹೋಲಿಸಿದರೆ ಎಲ್‌ಜಿ ಉತ್ಪನ್ನಗಳ ಮೇಲೆ 22.5% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ವರ್ಲ್‌ಪೂಲ್ 12% ವರೆಗೆ ಕ್ಯಾಶ್‌ಬ್ಯಾಕ್ ಹಾಗೂ ಲಾಯ್ಡ್ 17.5% ವರೆಗೆ ಕ್ಯಾಶ್‌ಬ್ಯಾಕ್ ದೊರೆಯುವುದರಿಂದ ಗ್ರಾಹಕರಿಗೆ ವಿಶೇಷ ಅಫರ್ ಖಂಡಿತ ಪ್ರಯೋಜನ ನೀಡುವುದರಲ್ಲಿ ಸಂಶಯವಿಲ್ಲ.

ಹೀರೋ ಮೋಟೋಕಾರ್ಪ್‌ನಲ್ಲಿ 5% ಕ್ಯಾಶ್‌ಬ್ಯಾಕ್‌ನೊಂದಿಗೆ ದೀಪಾವಳಿಯನ್ನು ಆಚರಿಸಲು ಕನಿಷ್ಠ 9 ತಿಂಗಳ ಅವಧಿ ಇಎಎಂಗೆ ಮಾನ್ಯ ವಾಗಿದ್ದು, ನೀವು ಬಯಸಿದ ವಾಹನವನ್ನು ಮನೆಗೆ ತರುವ ಅವಕಾಶ ಕಲ್ಪಿಸಲಾಗಿದೆ. VLCC ಯೊಂದಿಗೆ, ಆಯ್ದ ಐಟಂಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಕನಿಷ್ಠ ಆರು ತಿಂಗಳ ಅವಧಿಯ ಇಎಂಐ ವಹಿವಾಟುಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ಫ್ಲಿಪ್‌ಕಾರ್ಟ್, ಅಮೆಜಾನ್, ಲೈಫ್‌ಸ್ಟೈಲ್, ಮೈಂತ್ರಾ, ಕಲ್ಯಾಣ್ ಜ್ಯುವೆಲರ್ಸ್, ಟೈಟಾನ್, ಪ್ರೆಸ್ಟೀಜ್, ಬಾಟಾ, ಡೊಮಿನೋಸ್, ಹ್ಯಾಮ್ಲೀಸ್ ಮತ್ತು ಹೆಚ್ಚಿನವುಗಳಿಂದ ಇ-ಉಡುಗೊರೆ ಕಾರ್ಡ್‌ಗಳ ಮೇಲೆ 25% ವರೆಗಿನ ರಿಯಾಯಿತಿಯ ಲಾಭವನ್ನು ಪಡೆಯಬಹುದಾಗಿದೆ .

ಐಎಫ್‌ಬಿ, ಪ್ಯಾನಾಸೋನಿಕ್ ಮತ್ತು ವೋಲ್ಟಾಸ್ ಪ್ರತಿಯೊಂದೂ 10% ವರೆಗೆ ಕ್ಯಾಶ್ ಬ್ಯಾಕ್ ನೀಡುತ್ತವೆ, ಆದರೆ ಗೋದ್ರೇಜ್ ಉಪಕರಣಗಳು, ಹೈಯರ್ ಮತ್ತು ಸೋನಿ 20% ವರೆಗೆ ನೀಡುತ್ತಿವೆ. ಬ್ಲೂ ಸ್ಟಾರ್ ಮನೆಗಳ ಮೇಲೆ 5% ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆಯೂ ಲಭ್ಯವಿದೆ.

ಹೆಚ್ಚುವರಿಯಾಗಿ, ನೀವು ಸ್ನೇಹಿತರು ಮತ್ತು ಕುಟುಂಬಕ್ಕೆ ನೀಡಲು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕೊಡುಗೆಗಳೊಂದಿಗೆ ಇ-ವೋಚರ್‌ಗಳನ್ನು ಕೂಡ ಖರೀದಿಸಬಹುದಾಗಿದೆ. ಮನೆಯವರು ಮಾತ್ರವಲ್ಲದೆ, ಸ್ನೇಹಿತರಿಗೂ ಕೂಡ ಆಫರ್ ಪ್ರಯೋಜನ ಒದಗಿಸಬಹುದಾಗಿದೆ.

ದಸರಾ ಹಬ್ಬದ ಪ್ರಯುಕ್ತ SBI ಗ್ರಾಹಕರಿಗೆ ಪ್ರತಿ ವಸ್ತುಗಳ ಖರೀದಿಗೂ ವಿಶೇಷ ಆಫರ್ ನೀಡುತ್ತಿದ್ದು, ಮೊಬೈಲ್, ಲ್ಯಾಪ್ ಟಾಪ್ ಅಷ್ಟೆ ಅಲ್ಲದೆ ಮನೆಯ ನಿತ್ಯಉಪಯೋಗಿ ಸಾಧನಗಳ ಖರೀದಿಯ ಜೊತೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡ ಇದ್ದು, ಗ್ರಾಹಕರಿಗೆ ಇದರಿಂದ ಅನೇಕ ಪ್ರಯೋಜನ ವಾಗುವುದರಲ್ಲಿ ಸಂಶಯವಿಲ್ಲ.

Leave A Reply

Your email address will not be published.