ಅನಂತಪುರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ !

ಬಬಿಯಾ ಇನ್ನು ಕೇವಲ ಒಂದು ನೆನಪು. ತನ್ನ ವಿಚಿತ್ರ ಮತ್ತು ವಿಶಿಷ್ಟ ಸ್ವಭಾವದಿಂದ ಜನಮನ ಗೆದ್ದಿದ್ದ ಬಬಿಯಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ದೈವ ಸ್ವರೂಪಿ ಬಬಿಯಾ ಇನ್ನಿಲ್ಲ. ಹಾಗಾದ್ರೆ, ಯಾರೀ ಬಬಿಯಾ?

ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪ ಅನಂತಪುರ ಎಂಬ ದೇವಾಲಯವಿದೆ. ಅನಂತಪುರ ದೇವಾಲಯದ ಭಕ್ತರ ಆಕರ್ಷಣಾ ಬಿಂದುವಾಗಿತ್ತು ಅಲ್ಲಿನ ಕೊಳದಲ್ಲಿದ್ದ ಬಬಿಯಾ ಎಂಬ ಮೊಸಳೆ.

ಸ್ವಭಾವದಲ್ಲಿ ಎಲ್ಲ ಮೊಸಳೆಗಳಿಗಿಂತ ಈ ಮೊಸಳೆ ವಿಭಿನ್ನವಾಗಿತ್ತು. ಇದು ತನ್ನ ಜೀವಮಾನವಿಡಿ ಸಸ್ಯಾಹಾರವನ್ನೇ ತಿಂದು ಬದುಕಿತ್ತು. ಆ ದೇವಳದ ನೈವೇದ್ಯವನ್ನಷ್ಟೇ ಸೇವಿಸಿ, ಜೀವಿಸುತ್ತಿದ್ದ ಮೊಸಳೆಯನ್ನು ಕಣ್ಣಿಗೆ ಕಾಣುವ ದೇವರೆಂದೇ ಹೇಳಲಾಗುತ್ತಿತ್ತು. ಅಷ್ಟರಮಟ್ಟಿಗೆ ಭಕ್ತರಿಗೆ ಈ ಮೊಸಳೆ ಮೋಡಿ ಮಾಡಿತ್ತು.

ನಿನ್ನೆ ಆದಿತ್ಯವಾರ ರಾತ್ರಿ, ತನ್ನ ವಾಸಸ್ಥಾನದಲ್ಲಿ ಅಂದರೆ ಕ್ಷೇತ್ರದ ಸರೋವರದಲ್ಲಿ ಅದು ಮೃತಪಟ್ಟು ತೇಲಿತು. ಊರಿನ ಹಿರಿಯ ತಲೆಗಳ ಪ್ರಕಾರ ಅದಕ್ಕೆ 80 ಕ್ಕೂ ಅಧಿಕ ವಯಸ್ಸು ಆಗಿತ್ತು ಎಂದು ಅಂದಾಜಿಸಲಾಗಿದೆ. ಬಬಿಯಾಳ ಸಾವಿಗೆ ಅಲ್ಲಿನ ಭಕ್ತಜನ ಮೌನವಾಗಿ ರೋಧಿಸಿದೆ.

Leave A Reply

Your email address will not be published.