M.S.Dhoni : ಕೂಲ್ ಕ್ಯಾಪ್ಟನ್ ಧೋನಿ ಇಷ್ಟೊಂದು ಫನ್ನಿನಾ ? ಟಿಕ್ ಟಾಕ್ ಶೋ ನಲ್ಲಿ ಕೇಳಿದ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ನೀವೇ ಕೇಳಿ!!!
ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ನಾಯಕ ಇತ್ತೀಚೆಗೆ ಒಂದು ಟಾಕ್ ಶೋ ನಲ್ಲಿ ಕೇಳಿದ ಒಂದು ಪ್ರಶ್ನೆಗೆ ಕೊಟ್ಟ ಉತ್ತರ ನಿಜಕ್ಕೂ ಆಶ್ಚರ್ಯ ಪಡುವಂತೆ ಮಾಡಿದೆ. ಹೌದು…ನಮ್ಮ ಸೀರಿಯಸ್ , ಕೂಲ್ ಕ್ಯಾಪ್ಟನ್ ಗೂ ಈ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಅನಿಸುತ್ತದೆ. ನಿಜಕ್ಕೂ ಜನ ಧೋನಿಯ ಈ ಉತ್ತರಕ್ಕೆ ಬಿದ್ದು ಬಿದ್ದು ನಕ್ಕಿದ್ದಾರೆ. ಅಂಥದ್ದೇನು ಉತ್ತರ ಕೊಟ್ಟಿದ್ದಾರೆ ಈ ಕ್ರಿಕೆಟಿಗ ? ಬನ್ನಿ ಇಲ್ಲಿದೆ ಉತ್ತರ.
ಟಿಕ್ ಮತ್ತು ಟಾಕ್ ಶೋ ಹೋಸ್ಟ್ ಮಂದಿರಾ ಬೇಡಿ ಅವರೊಂದಿಗೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸಂದರ್ಶನವನ್ನು ಒಳಗೊಂಡ ಹಳೆಯ ವೀಡಿಯೊ ಮತ್ತೆ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಬೇಡಿ ಕೇಳಿದ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ಜನರಿಗೆ ನಿಜಕ್ಕೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇದು ಕ್ಯಾಪ್ಟನ್ ಕೂಲ್ ಅವರ ಹಾಸ್ಯದ ಮನೋಭಾವವನ್ನು ತೋರಿಸುತ್ತದೆ.
2016 ರ ಈ ವೀಡಿಯೋ ಸಂದರ್ಶನ ಇದಾಗಿದೆ. ಮಂದಿರಾ ಬೇಡಿ ಅವರು ಧೋನಿಗೆ ತಮ್ಮ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯವಾದ ಉಡುಗೊರೆಯ ಬಗ್ಗೆ ಕೇಳುತ್ತಾರೆ. ಉತ್ತರವನ್ನು ಹೇಳಲು ಧೋನಿ ಸ್ವಲ್ಪ ವಿರಾಮ ತೆಗೆದುಕೊಂಡಾಗ, ಬೇಡಿ ಅವರು ಪಡೆದ ದೊಡ್ಡ ಉಡುಗೊರೆ ತನ್ನ ಮಗಳು ಎಂದು ಹೇಳಲು ಪ್ರೇರೇಪಿಸುತ್ತಾರೆ. ಇದಕ್ಕೆ ಧೋನಿ ತಲೆ ಅಲ್ಲಾಡಿಸುತ್ತಾ, ಅದು ಸಾಕಷ್ಟು ಶ್ರಮವಹಿಸಿದ್ದು, ಉಡುಗೊರೆಯಲ್ಲ ಎಂದು ಉತ್ತರಿಸಿದ್ದಾರೆ.
ಅವರ ಈ ಉತ್ತರವನ್ನು ಕೇಳಿದ ಬೇಡಿ ಮತ್ತು ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ಧೋನಿಯವರ ಈ ಉತ್ತರಕ್ಕೆ ಕೆಲವರು ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ತೀಕ್ಷ್ಣವಾದ ಬುದ್ಧಿವಂತಿಕೆ ಎಂದು ಹೇಳಿದ್ದಾರೆ.