ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ EPFO ನಿಂದ ಗುಡ್ ನ್ಯೂಸ್!

ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ) ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಪ್ರಮಾಣಪತ್ರ ಸಲ್ಲಿಸುವ ದಿನಾಂಕದಲ್ಲಿ ಯಾವುದೇ ಗಡುವು ಇರುವುದಿಲ್ಲ. ಹೀಗಾಗಿ, ಯಾವಾಗ ಬೇಕಾದರೂ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ.

ನೌಕರರ ಪಿಂಚಣಿ ಯೋಜನೆ, 1995ರ ಅಡಿಯಲ್ಲಿ 2021 ಡಿಸೆಂಬರ್ ನಲ್ಲಿ ಅಥವಾ ನಂತರ ಜೀವನ ಪ್ರಮಾಣಪತ್ರವನ್ನ ಸಲ್ಲಿಸಿದ್ದರೇ, ಅವರು ಮತ್ತೆ ಸಲ್ಲಿಸುವ ಆಗತ್ಯವಿಲ್ಲ. ಯಾಕಂದ್ರೆ ಅದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತೆ. ಜೀವನ ಮಟ್ಟವು 12 ತಿಂಗಳು ಆಗಿರುತ್ತೆ. ಹೀಗಾಗಿ, ವರ್ಷದಲ್ಲಿ ಒಮ್ಮೆ ಯಾವಾಗ ಬೇಕಾದ್ರು ಜೀವನ ಪ್ರಮಾಣಪತ್ರ ಸಲ್ಲಿಸಬಹುದು.

ಸಾಮಾನ್ಯ ಸೇವಾ ಕೇಂದ್ರ, ಐಪಿಪಿಬಿ, ಅಂಚೆ ಕಚೇರಿ, ಪೋಸ್ಟ್ಮ್ಯಾನ್, ಉಮಂಗ್ ಅಪ್ಲಿಕೇಶನ್ ಇತ್ಯಾದಿಗಳ ಮೂಲಕ ಸಲ್ಲಿಸಬಹುದು. ಆದ್ದರಿಂದ ಜೀವನ ಪ್ರಮಾಣಪತ್ರವನ್ನ ಸಲ್ಲಿಸುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಇಪಿಫ್ ಓ ಟ್ವೀಟ್ ಮಾಡಿದೆ.

ಈ ಮೊದಲು ಪಿಂಚಣಿದಾರರು ಪ್ರತಿ ತಿಂಗಳು ಹಣ ಪಡೆಯಲು ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕಾಗಿತ್ತು. ಇಪಿಎಫ್‍ಒ ನೀಡಿದ ಗಡುವು ನವೆಂಬರ್ 30, 2022 ಆಗಿದ್ದು, ಪ್ರಾಮಾಣಪತ್ರ ಸಲ್ಲಿಸಿದರೆ ಮಾತ್ರ ಪಿಂಚಣಿ ಬರುತ್ತದೆ ಎಂಬ ನಿಯಮವಿತ್ತು. ಇದೀಗ ಈ ನಿಯಮ ಬದಲಿಸುವ ಮೂಲಕ ಸಿಹಿಸುದ್ದಿ ದೊರಕಿದೆ.

Leave A Reply

Your email address will not be published.