BBK 9 : ರೂಪೇಶ್ ಶೆಟ್ಟಿಯ ಕಾಲೆಳೆದ ಕಿಚ್ಚ ಸುದೀಪ್ | ಬಿದ್ದು ಬಿದ್ದು ನಕ್ಕ ಮನೆಮಂದಿ | ಅಷ್ಟಕ್ಕೂ ಮ್ಯಾಟರ್ ಏನು?

ಬಿಗ್ ಬಾಸ್ ಕನ್ನಡ ಸೀಸನ್ 9 ದಿನ ದಿನ ಹೋಗುತ್ತಿದ್ದಂತೆ ಬಹಳ ರೋಚಕತೆ ಪಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ಪೈಕಿ ನಿನ್ನೆ ಅಂದರೆ ಶನಿವಾರದ ಎಪಿಸೋಡ್ ನಲ್ಲಿ ಮಂಗಳೂರಿನ ಕುವರ ರೂಪೇಶ್ ಶೆಟ್ಟಿ ಬಗ್ಗೆ ಸುದೀಪ್ ಕಾಲೆಳೆದಿದ್ದಾರೆ. ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ಬಗ್ಗೆ ಮಾತನಾಡುವಾಗ ಈ ಘಟನೆ ನಡೆದಿದೆ. ಬಿಗ್ ಬಾಸ್ ಫಾಲೋ ಮಾಡುವವರಿಗೆ ಎಲ್ಲರಿಗೂ ಗೊತ್ತಿರಬಹುದು, ಈ ಮನೆಯಲ್ಲಿ ಸಾನ್ಯಾ ಐಯ್ಯರ್ ಜತೆ ರೂಪೇಶ್ ಶೆಟ್ಟಿ ಕ್ಲೋಸ್ ಆಗಿದ್ದಾರೆ ಎಂದು. ಒಟಿಟಿ ಸೀಸನ್​ನಿಂದ ಇವರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಹಾಗೆನೇ ಈ ಜೋಡಿಗೆ ರಾಜ್ಯಾದ್ಯಂತ ಅಭಿಮಾನಿಗಳು ಕೂಡಾ ಇದ್ದಾರೆ.

ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಮಿಂಗಲ್ ಆಗೋಕೆ ಪ್ರಯತ್ನ ಪಡುವತ್ತ ಹೆಜ್ಜೆ ಇಟ್ಟಿದ್ದಾರೆ. ಮಹಿಳಾ ಸ್ಪರ್ಧಿಗಳ ಜತೆ ಅವರು ಹೆಚ್ಚು ಕ್ಲೋಸ್ ಆಗಿದ್ದಾರೆ. ಈ ವಿಚಾರ ಪ್ರತಿ ಬಾರಿ ವೀಕೆಂಡ್​ನಲ್ಲಿ ಹೈಲೈಟ್ ಆಗುತ್ತದೆ. ಈ ವಿಚಾರ ಕಿಚ್ಚ ಸುದೀಪ್ (Kichcha Sudeep) ಅವರು ಈ ಬಾರಿನೂ ತೆಗೆದಿದ್ದಾರೆ.

‘ರೂಪೇಶ್ ಅವರೇ ನೀವು ಬಿಗ್ ಬಾಸ್ ಮನೆಯ ಯೂನಿವರ್ಸಿಟಿ’ ಎಂದರು ಸುದೀಪ್ ಹೇಳಿದ್ದಾರೆ. ಯಾಕೆ ಎಂದು ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದಾಗ, ಸುದೀಪ್ ನಗುತ್ತಲೇ, ‘ರೂಪೇಶ್ ಅವರು ಈ ಬಾರಿ ಎಲ್ಲರ ಜತೆ ಕ್ಲೋಸ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಯಾರ ಜತೆ ಮಾತನಾಡಬೇಕು, ಬಾತ್​ರೂಂನಲ್ಲಿದ್ದಾಗ ಯಾರ ಜತೆ ಮಾತನಾಡಬೇಕು, ಲೈಟ್ ಆಫ್ ಆದಾಗ ಯಾರ ಜತೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿದ ರೂಪೇಶ್ ಆ ರೀತಿ ಇಲ್ಲ ಎಂದು ಹೇಳಿ ನಕ್ಕಿದ್ದಾರೆ.

“ನಾನು ಎಲ್ಲರ ಜತೆ ಕ್ಲೋಸ್ ಇದ್ದೀನಿ. ಎಲ್ಲರ ಜತೆಯೂ ಫ್ರೆಂಡ್​ಶಿಪ್ ಅಷ್ಟೇ ಇರೋದು. ಆದರೆ ಸಾನ್ಯಾ ಜೊತೆ ಸ್ವಲ್ಪ ಜಾಸ್ತಿ ಫ್ರೆಂಡ್ ಶಿಪ್ ಇದೆ ಎಂದು ರೂಪೇಶ್​ ಹೇಳಿದರು. ‘ನೀವು ಫ್ರೆಂಡ್​ಶಿಪ್​ನೇ ಮಾಡಿಕೊಂಡಿರೋದು’ ಎಂದು ಸುದೀಪ್ ಮತ್ತೆ ಹೇಳುತ್ತಾ ರೂಪೇಶ್ ಕಾಲೆಳೆದಿದ್ದಾರೆ. ಸುದೀಪ್ ರೂಪೇಶ್ ಕಾಲೆಳೆಯುವಾಗ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ ಪ್ರಸಂಗ ಕೂಡಾ ನಡೆಯಿತು.

Leave A Reply

Your email address will not be published.