ಪುರುಷರ ಆ ಸಮಸ್ಯೆಗೆ ಎಳನೀರಿನಲ್ಲಿದೆ ಪರಿಹಾರ

ನಿಮಗೆ ಗೊತ್ತೇ ? ಪುರುಷರು ಉತ್ತಮ ಲೈಂಗಿಕ ಆರೋಗ್ಯ ಹೊಂದಲು ಎಳನೀರು ಉತ್ತಮ‌. ಹಾಗಾಗಿ ಇಲ್ಲಿ ನಾವು ಇದಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಮಾಹಿತಿ ನೀಡುತ್ತಿದ್ದೇವೆ.

ಆರೋಗ್ಯಕರ ಪಾನೀಯಗಳು ಎಂದು ಬಂದಾಗ ಅದರಲ್ಲಿ ಎಳನೀರು ಪ್ರಮುಖ ಪಾತ್ರ ವಹಿಸುತ್ತದೆ. ನಮಗೆ ನೈಸರ್ಗಿಕ ರೂಪದಲ್ಲಿ ಸಿಗುವ ಏಕೈಕ ಆರೋಗ್ಯಕರ ಪಾನೀಯವೆಂದರೆ ಅದು ಎಳನೀರು. ನಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೆ ಏಳನೀರು ಪರಿಹಾರ ಕೊಡುತ್ತದೆ. ಪುರುಷರಿಗೆ ಲೈಂಗಿಕ ಸಮಸ್ಯೆಗಳಿಗೆ ಎಳನೀರು ಪರಿಹಾರ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಪುರುಷರಿಗೆ ಹೆಚ್ಚಿನ ಲೈಂಗಿಕ ತೃಪ್ತಿ ಕಂಡುಕೊಳ್ಳಲು ಅನುಕೂಲಕರವಾಗಿ ಮತ್ತು ದೀರ್ಘಕಾಲ ಉದ್ರೇಕದಿಂದ ಉಳಿಯಲು ಎಳನೀರು ಸಹಾಯ ಮಾಡುತ್ತದೆ.

ಎಳನೀರು ಅತ್ಯದ್ಭುತ ಎಲೆಕ್ಟ್ರೋಲೈಟ್ ಅಂಶವನ್ನು ಹೊಂದಿದೆ. ವಿಶೇಷವಾಗಿ ವ್ಯಾಯಾಮ ಮಾಡುವವರು, ಸ್ಪೋರ್ಟ್ಸ್ ಚಟುವಟಿಕೆಯಲ್ಲಿ ಭಾಗವಹಿಸುವವರು ಎಳನೀರನ್ನು ಕುಡಿಯುತ್ತಾರೆ. ಆರೋಗ್ಯಕರ ಜನರ ಉತ್ತಮ ಆರೋಗ್ಯಕ್ಕಾಗಿ ಇದು ಹೇಳಿ ಮಾಡಿಸಿದ ಪಾನೀಯವಾಗಿದೆ.

ಎಳನೀರು ದೈಹಿಕ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೇ, ಲೈಂಗಿಕ ಶಕ್ತಿಗೆ ಕೂಡ ಉತ್ತಮ ಎಂದು ಹೇಳಲಾಗುತ್ತದೆ. ಏಕೆಂದರೆ ಎಲೆಕ್ಟ್ರೋಲೈಟ್ ಅಂಶಗಳು ಮಾಂಸಖಂಡಗಳಲ್ಲಿ ಬದಲಾವಣೆಗಳನ್ನು ಉಂಟು ಮಾಡುತ್ತವೆ. ಎಳನೀರು ದೇಹದ ತುಂಬಾ ಅತ್ಯುತ್ತಮ ರಕ್ತಸಂಚಾರವನ್ನು ಉಂಟುಮಾಡುತ್ತದೆ. ಹಾಗೆನೇ ಶಿಶ್ನದ ಭಾಗದಲ್ಲಿ ನರ ಮಂಡಲಗಳನ್ನು ಉತ್ತೇಜಿಸಿ ದೀರ್ಘಕಾಲ ಲೈಂಗಿಕ ಉದ್ರೇಕ ಹೆಚ್ಚಿಸುವಂತೆ ಮಾಡುತ್ತದೆ. ಇದು ನಿಮಿರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಅಂಶಗಳು ಹೆಚ್ಚಾಗಿದೆ. ಹೀಗಾಗಿ ಆರೋಗ್ಯಕರವಾದ ಪಾನೀಯವನ್ನು ಸೇವನೆ ಮಾಡುವುದು ಬಹಳ ಉತ್ತಮ. ಅದರಲ್ಲೂ ಪುರುಷರಿಗೆ ಕಡಿಮೆ ಕ್ಯಾಲೋರಿಗಳು ಇರುವ ಇಂತಹ ಆರೋಗ್ಯಕರ ಪಾನೀಯ ತುಂಬಾ ಅಗತ್ಯವಾಗಿರುತ್ತದೆ.

ಸಕ್ಕರೆ ಪ್ರಮಾಣ ಮತ್ತು ಕ್ಯಾಲೋರಿಗಳು ಎಳನೀರಿನಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಒಂದು ಲೋಟ ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಎಲೆಕ್ಟ್ರೋಲೈಟ್ ಅಂಶ ಸಮೃದ್ಧವಾಗಿರುತ್ತದೆ. ಈ ಅಂಶಗಳು ದೇಹಕ್ಕೆ ಸೇರಿದರೆ ಉತ್ತಮ. ಯಾರಿಗಾದರೂ ರಾತ್ರಿ ಮಲಗುವಾಗ ಒಂದು ಲೋಟ ಹಾಲು ಕುಡಿದು ಮಲಗುವ ಅಭ್ಯಾಸವಿದ್ದರೆ ಅದರ ಜೊತೆಗೆ ದಿನದಲ್ಲಿ ಆಗಾಗ ಎಳನೀರು ಕುಡಿಯುವುದು ಉತ್ತಮ.

ಎಳನೀರು ಸೇವನೆ ಮಾಡುವುದರಿಂದ ದೇಹಕ್ಕೆ ಎಲೆಕ್ಟ್ರೋಲೈಟ್ ಅಂಶಗಳು ಸೇರುತ್ತದೆ ಅಂದರೆ ಸೋಡಿಯಂ, ಪೊಟ್ಯಾಶಿಯಂ, ಮ್ಯಾಗ್ನಿಷಿಯಂ ಹೆಚ್ಚಿರುತ್ತದೆ ಎಂದು ಕೆಲವೊಂದು ಇತ್ತೀಚಿನ ಅಧ್ಯಯನಗಳು ಹೇಳುತ್ತದೆ.

ಹಾಗೆನೇ ಇನ್ನೊಂದು ಸಂಶೋಧನೆಯ ಪ್ರಕಾರ ಇವೆಲ್ಲವೂ ಸಹ ಪುರುಷರ ಶಿಶ್ನದ ಭಾಗದಲ್ಲಿ ಅತ್ಯುತ್ತಮ ರಕ್ತ ಸಂಚಾರ ಉಂಟು ಮಾಡುತ್ತದೆ ಮತ್ತು ಅಲ್ಲಿನ ಮಾಂಸ ಖಂಡಗಳಿಗೆ ಶಕ್ತಿ ಮತ್ತು ಸಾಮರ್ಥ್ಯವನ್ನು ತುಂಬುತ್ತವೆ. ಪುರುಷರ ರಕ್ತದ ಒತ್ತಡವನ್ನು ಕೂಡಾ ಎಳನೀರು ಕಡಿಮೆ ಮಾಡುತ್ತದೆ. ಹಾಗೆ ನೋಡಿದರೆ ಬೇರೆ ವಿಧವಿಧವಾದ ಪಾನೀಯಗಳಿಗಿಂತ ಎಳನೀರು ಆರೋಗ್ಯಕರ ವಿಚಾರ ಹೊಂದಿದೆ.

ಜನರು ಕುಡಿಯುವ ಸ್ಪೋರ್ಟ್ಸ್ ಪಾನೀಯಗಳಿಗೆ ಹೋಲಿಸಿದರೆ ಎಳನೀರು ಸಾಕಷ್ಟು ಉತ್ತಮ. ಇದು ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ನೀಡುವುದರಿಂದ ಮೆದುಳು ಮತ್ತು ಹೃದಯದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ. ಅಷ್ಟು ಮಾತ್ರವಲ್ಲದೇ, ದೇಹದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಹಾಗೂ ಪುರುಷರ ಲೈಂಗಿಕ ಸಮಸ್ಯೆಗಳನ್ನು ಸಹ ಪರಿಹಾರ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಎಳನೀರಿನಲ್ಲಿ ಇದೆ.

Leave A Reply

Your email address will not be published.