Jio 5G : ಜಿಯೋ 5G ಯ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಎಷ್ಟು ಗೊತ್ತಾ ? ಪ್ಲ್ಯಾನ್ ಬೆಲೆ ಬಹಿರಂಗ!!!

ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು ಸಜ್ಜಾಗುತ್ತಿದೆ .

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದ್ದು, 2022 ರ ವಿಜಯದಶಮಿ ಹಬ್ಬದ ಶುಭ ದಿನದಂದೇ ಜಿಯೋ ತನ್ನ ‘ವೆಲ್ಕಮ್ ಆಫರ್’ ಘೋಷಣೆ ಮಾಡಿದೆ. ದೇಶದಲ್ಲಿ ಮೊದಲು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಾಲ್ಕು ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಪ್ರಸ್ತುತಪಡಿಸಿದೆ.

ಇದೀಗ ಈ ಸೇವೆಯು ಕನಿಷ್ಠ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಜಿಯೋ 5G ಸೇವೆ ಪಡೆಯಲು ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಬಹಿರಂಗವಾಗಿದ್ದು, Jio 5G ವೆಲ್ಕಮ್ ಆಫರ್ ಅಡಿಯಲ್ಲಿ, ಟೆಲಿಕಾಂ ಆಪರೇಟರ್ 1GBps+ ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ನೀಡಿ ಗ್ರಾಹಕರಿಗೆ ನೆರವಾಗುತ್ತವೆ.

ರಿಲಯನ್ಸ್ ಜಿಯೋ ಗ್ರಾಹಕರು 1 Gbps ವೇಗದಲ್ಲಿ 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಬೇಕಾಗಿದೆ. ಜಿಯೋವಿನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು 5G ವೆಲ್‌ಕಮ್ ಆಫರ್ ಪಡೆಯಲು ಕನಿಷ್ಠ 239 ಅಥವಾ ಹೆಚ್ಚಿನ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿಸಿರಬೇಕಾಗಿದೆ.

5G ಸಾಮರ್ಥ್ಯದ ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ 4G ಗ್ರಾಹಕರು 5G ಸೇವೆ ಪಡೆಯಲು ಕಂಪೆನಿಯಿಂದ ಆಹ್ವಾನವನ್ನು ಸ್ವೀಕರಿಸುತ್ತಾರೆ. ಈ ವೇಳೆ ಅವರು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗೆ ಗ್ರಾಹಕರಾಗಿದ್ದರೆ ಮಾತ್ರ ಜಿಯೋ 5G ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ.

ಜಿಯೋ ಆರಂಭಿಸಿರುವ ಈ ಪ್ರಾಯೋಗಿಕ 5ಜಿ ಸೇವೆಯಲ್ಲಿ ತನ್ನ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅಥವಾ ಮೊಬೈಲ್ ಬದಲಿಸದೆಯೇ ಈ 5ಜಿ ನೆಟ್‌ವರ್ಕ್ ಬಳಸಬಹುದಾಗಿದ್ದು, ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ.

ಇದಕ್ಕಾಗಿ ಜಿಯೋ MyJio ಅಪ್ಲಿಕೇಶನ್‌ನ್ ಮೂಲಕ ಜಿಯೋದ 5G ಸೇವೆಯನ್ನು ಪಡೆಯುವಂತೆ ಆಹ್ವಾನವನ್ನು ಕಳುಹಿಸುತ್ತಿದೆ. ಇದನ್ನು ಕ್ಲಿಕ್ ಮಾಡುವ ಮೂಲಕ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಬಹುದಾಗಿದೆ. ಗ್ರಾಹಕ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿ 4G ಸೇವೆಯನ್ನು ಬಳಸುತ್ತಿದ್ದರೆ, ಇದೀಗ ಜಿಯೋ 5G ಸೇವೆ ಪಡೆಯಲು ಅರ್ಹರಾಗುತ್ತಾರೆ.

ಈ ಮೂಲಕ ಜಿಯೋವಿನ ಆಹ್ವಾನವನ್ನು ಪಡೆದು 5G ಗೆ ಬದಲಾಯಿಸಿದಾಗ, ಈ ಯೋಜನೆಯು ಅನಿಯಮಿತ 5G ಡೇಟಾವನ್ನು ನೀಡುವ ಯೋಜನೆಯಾಗಿ ಬದಲಾಗುತ್ತದೆ. ಅಂದರೆ, ಪ್ರಸ್ತುತ ಯೋಜನೆಯು ಹೊಂದಿರುವ ವ್ಯಾಲಿಡಿಟಿವರೆಗೂ ಅನ್‌ಲಿಮಿಟೆಡ್ 5G ಡೇಟಾವನ್ನು 1Gbps + ವೇಗದಲ್ಲಿ ಬಳಸಬಹುದಾಗಿದೆ.

ಪ್ರಾಯೋಗಿಕ ಪರೀಕ್ಷೆ ಗಳ ಮೂಲಕ ನಾಲ್ಕು ನಗರಗಳಲ್ಲಿ ಆರಂಭವಾಗಿ, ಮೂಲಸೌಕರ್ಯ ಸಿದ್ಧವಾದ ತಕ್ಷಣ Jio 5G ಯ ​​ಬೀಟಾ ಪ್ರಯೋಗ ಸೇವೆಯು ಇತರ ನಗರಗಳಿಗೆ ಲಭ್ಯವಾಗುತ್ತದೆ. ಇದಲ್ಲದೆ, ನಗರದ ನೆಟ್‌ವರ್ಕ್ ಕವರೇಜ್ ಸಾಕಷ್ಟು ಉತ್ತಮವಾಗುವವರೆಗೆ ಬಳಕೆದಾರರಿಗೆ ಬೀಟಾ ಪ್ರಯೋಗ ಮುಂದುವರಿಯುತ್ತದೆ. ಸದ್ಯ ಪ್ರಾಯೋಗಿಕ ಹಂತದಲ್ಲಿ ಮಾತುಕತೆಗೆ ನಡೆಯುತ್ತಿದ್ದು ದೇಶದ ಎಲ್ಲ ನಗರಗಳಿಗೂ ಜಿಯೋ 5G ಸೇವೆ ನೀಡಲು ಅಣಿಯಾಗುತ್ತಿದೆ.

Leave A Reply

Your email address will not be published.