iPhone 12: ರೂ.25000 ರೊಳಗೆ ಖರೀದಿಸಿ ಐಫೋನ್ |ಅಮೆಜಾನ್​ ನೀಡುತ್ತಿದೆ ಹೀಗೊಂದು ಬಂಪರ್ ಆಫರ್!!!

ಮೊಬೈಲ್ ದೈತ್ಯ ಕಂಪನಿ ಜನರನ್ನು ಸೆಳೆಯಲು ಆಫರ್ ಗಳನ್ನು ನೀಡುತ್ತಿದ್ದು, ಉತ್ತಮ ಕೊಡುಗೆ, ಕ್ರೆಡಿಟ್ ಕಾರ್ಡ್ ಆಫರ್,ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್, ಟಿವಿಗಳ ಮಹಾ ಸೇಲ್ ನಡೆಯುತ್ತಿದೆ. ಗ್ರಾಹಕರಿಗೆ ರಿಯಾಯತಿ ದರದಲ್ಲಿ ವಸ್ತುಗಳನ್ನು ಪಡೆಯಲು ಸುವರ್ಣವಕಾಶವಿದೆ.


ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022 (Amazon Great Indian Festival Sale) ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ಸೇಲ್ ಅಡಿಯಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ (Amazon Extra Happiness Days Sale) ನಡೆಯುತ್ತಿದೆ.

Amazon Extra Happiness Days Sale: ಅಮೆಜಾನ್​ನಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ ನಡೆಯುತ್ತಿದ್ದು ಕೆಲ ಪ್ರಾಡಕ್ಟ್​ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದೆ. ಮುಖ್ಯವಾಗಿ ಐಫೋನ್ 12 (iPhone 12) ಅತ್ಯುತ್ತಮ ಆಫರ್ ಪಡೆದುಕೊಂಡಿದೆ.

ಕೆಲ ಪ್ರಾಡಕ್ಟ್​ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದ್ದು, ಆರ್​​ಬಿಎಲ್ ಬ್ಯಾಂಕ್, ಸಿಟಿ ಬ್ಯಾಂಕ್, ಒನ್​ಕಾರ್ಡ್ ಬ್ಯಾಂಕ್ ಮತ್ತು ರೂಪೆ ಬಳಕೆದಾರರಿಗೆ ಈ ಸೇಲ್​ನಲ್ಲಿ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಟೆಕ್ನೋ, ಆ್ಯಪಲ್, ಐಕ್ಯೂ ಮತ್ತು ಶವೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಕೂಡ ಡಿಸ್ಕೌಂಟ್‌ ಪಡೆದುಕೊಂಡಿದೆ.

ಇದರ ಜೊತೆಗೆ ಲ್ಯಾಪ್‌ಟಾಪ್‌ಗಳು, ಟಿವಿಗಳು ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಮುಖ್ಯವಾಗಿ ಐಫೋನ್ 12 (iPhone 12) ಅತ್ಯುತ್ತಮ ಆಫರ್ ಪಡೆದುಕೊಂಡಿದೆ.

ಐಫೋನ್ 14 ಸರಣಿ ಬಿಡುಗಡೆಗೊಂಡ ಬಳಿಕ, ಉಳಿದ ಐಫೋನ್ ಸರಣಿಗಳು ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದೀಗ ಅಮೆಜಾನ್ ಹ್ಯಾಪಿನೆಸ್ ಅಪ್​ಗ್ರೇಡ್ ಡೇಸ್​ನಲ್ಲಿ ಐಫೋನ್ 12 ಅನ್ನು 25 ಸಾವಿರ ರೂ. ಒಳಗಡೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದರ 64GB ಸ್ಟೋರೇಜ್ ಸಾಮರ್ಥ್ಯದ ಮೂಲಬೆಲೆ 65,900 ರೂ. ಆಗಿದ್ದು, ಆದರೀಗ ಆಫರ್​ನಲ್ಲಿ ಶೇ. 27 ರಷ್ಟು ಡಿಸ್ಕೌಂಟ್ ಪಡೆದು ಕೇವಲ 47,999 ರೂ. ಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ, ಗ್ರಾಹಕರು ಹೆಚ್ಚಿನ ಲಾಭ ಗಳಿಸಬಹುದು.

ಐಫೋನ್ 12 ಮೊಬೈಲ್ 128GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 54,490 ರೂ. ಗೆ ಮಾರಾಟ ವಾಗುತ್ತಿದೆ. ಇದರ ಜೊತೆಗೆ ಬಂಪರ್ ಆಫರ್ ಆಗಿ, 25,000 ರೂ. ವರೆಗೆ ಎಕ್ಸ್​ಚೇಂಜ್ ಮಾಡುವ ಕೊಡುಗೆ ಕೂಡ ನೀಡಲಾಗಿದೆ. ಹೀಗಾಗಿ ಐಫೋನ್ 12 ಅನ್ನು 25,000 ರೂ. ಒಳಗೆ ಖರೀದಿ ಮಾಡಿದರೆ ನಿಶ್ಚಿತ ಲಾಭ ಪಡೆಯುವುದು ಖಚಿತವಾಗಿದೆ.


ಹಳೆಯ ಮೊಬೈಲ್ ಎಕ್ಸ್ ಚೇಂಜ್ ಮಾಡುವ ಯೋಜನೆ ಇದ್ದರೆ, ಈ ಅಮೇಜಾನ್ ಆಫರ್ ನಲ್ಲಿ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ ಗ್ರಾಹಕರು 12,400 ರೂ. ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಇದರ ಜೊತೆಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್​ಫೋನ್ ಕೇವಲ 16,999 ರೂ. ಗೆ ಲಭ್ಯವಿದೆ. ಇದು 6.6-ಇಂಚಿನ ಪೂರ್ಣ HD+ ಇನ್ಫಿನಿಟಿ V ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದ್ದು, ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ಕೂಡ ನೀಡಲಾಗಿದೆ.
ಹೊಸ ಮೊಬೈಲ್ ಕೊಳ್ಳುವ ಯೋಜನೆಯಲ್ಲಿದ್ದರೆ , ಈ ಆಫರ್ ನಲ್ಲಿ ಖರೀದಿಸಿ ,ಕೊಡುಗೆಯ ಜೊತೆಗೆ ಹೆಚ್ಚಿನ ರಿಯಾಯಿತಿ ನಿಮ್ಮದಾಗಿಸಿಕೊಳ್ಳಬಹುದು.

ಲ್ಯಾಪ್​ಟಾಪ್ ವಿಚಾರದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಮೂಲದರ 83,990 ರೂ. ಗಳಾಗಿದ್ದರೆ, ಅಮೆಜಾನ್‌ನ ಈ ಸೇಲ್‌ನಲ್ಲಿ ಖರೀದಿ ಮಾಡಿದರೆ, 59,990 ರೂ. ಗಳಿಗೆ ಪಡೆಯಬಹುದು. ಇದು 15.6 ಇಂಚಿನ FHD LED ಡಿಸ್‌ಪ್ಲೇ ಹೊಂದಿದ್ದು, 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್ ಮತ್ತು ಇಂಟೆಲ್‌ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ತಯಾರಾಗಿದೆ. ಇದರ ವಿಶೇಷತೆ ಗಮನಿಸಿದರೆ, 8GBRAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಇದರ ಜೊತೆಗೆ ಲೆನೊವೊ ಯೋಗ ಸ್ಲಿಮ್ 7 ಪ್ರೊ ಲ್ಯಾಪ್‌ಟಾಪ್‌ನ ಮೂಲ ಬೆಲೆ 1,06,290 ರೂ. ಆಗಿದ್ದು, ಈ ಅಮೇಜಾನ್ ಸೇಲ್‌ನಲ್ಲಿ 72,990 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಉತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ಬೆಲೆಯಲ್ಲಿ , ಆಫರ್ ಗಳ ಜೊತೆಗೆ ಸಿಗುವಾಗ ಈ ಸುವರ್ಣಾವಕಾಶ ವನ್ನೂ ಬಳಸಿಕೊಂಡು ಮನೆಯ ಅವಶ್ಯಕತೆಯ ಪೂರೈಕೆಯ ಜೊತೆಗೆ ಬಯಸಿದ ವಸ್ತುವನ್ನು ಕೂಡ ನಿಮ್ಮದಾಗಿಸಿಕೊಳ್ಳಬಹುದು.

Leave A Reply

Your email address will not be published.