ಕೈಯಲ್ಲಿದ್ದ ದುಬಾರಿ ವಾಚ್ ಇದ್ದಕ್ಕಿದ್ದಂತೆ ಸ್ಫೋಟ | ಈ ಅನಾಹುತಕ್ಕೆ ಜವಾಬ್ದಾರರು ಯಾರು?

ಆ್ಯಪಲ್ ವಾಚ್ ಒಂದು ಈಗಿನ ಟ್ರೆಂಡ್ ನ ಫ್ಯಾಶನ್ ಕೂಡ ಹೌದು. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಿದ ಘಟನೆಗಳಿವೆ. ಸಾವಿನ ದವಡೆಗೆ ಸಿಲುಕಿದ ಅನೇಕರ ಜೀವ ಉಳಿಸುವಲ್ಲಿ ಈ ಆ್ಯಪಲ್ ವಾಚ್ ಪ್ರಮುಖ ಪಾತ್ರ ವಹಿಸಿದ್ದು ಸುದ್ದಿಯಾಗಿತ್ತು. ಈ ಜನಪ್ರಿಯ ಸ್ಮಾರ್ಟ್ ವಾಚ್ ಮಾದರಿ ಬಳಕೆದಾರರ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಅಲ್ಲದೇ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅಲರ್ಟ್ ಸಂದೇಶ ನೀಡುತ್ತದೆ.

ಕ್ಯುಪರ್ಟಿನೊ-ಆಧಾರಿತ ಈ ಸ್ಮಾರ್ಟ್ ವಾಚ್ ಅನಿಯಮಿತ ಹೃದಯ ಬಡಿತ, ರಕ್ತಸಂಚಾರ, ಬಿಪಿ-ಶುಗರ್ ಸೇರಿದಂತೆ ಅನೇಕ ಆರೋಗ್ಯದ ಮಾಹಿತಿಯನ್ನು ನಿಖರವಾಗಿ ನೀಡುತ್ತದೆ.ಇದೀಗ ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಿ ಸುದ್ದಿಯಲ್ಲಿರುತ್ತಿದ್ದ ಈ ಆ್ಯಪಲ್ ವಾಚ್ ತುಂಬಾ ಬಿಸಿಯಾಗಿ ಬಾಂಬ್‌ನಂತೆ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕಳುಹಿಸಿದೆ.

ಬಿಸಿಯಾದ ಆ್ಯಪಲ್ ವಾಚ್ ಸರಣಿ 7. ವ್ಯಕ್ತಿಯೊಬ್ಬರು ಕೆಲ ದಿವಸಗಳ ಹಿಂದೆ ಆ್ಯಪಲ್ ವಾಚ್ ಸರಣಿ 7ಅನ್ನು ಖರೀದಿಸಿದ್ದರು. ಅದನ್ನು ಧರಿಸಿದ್ದ ಅವರಿಗೆ ವಾಚ್ ಕೆಲ ದಿನಗಳ ನಂತರ ಇದ್ದಕ್ಕಿದ್ದಂತೆ ಬಿಸಿಯಾದ ಅನುಭವವಾಗಿದೆ. ಈ ಬಗ್ಗೆ ಅವರು ಆ್ಯಪಲ್ ಕಂಪನಿಗೆ ಮಾಹಿತಿ ನೀಡಿದ್ದಾರೆ. ವಾಚ್ ಎಂದಿಗಿಂತಲೂ ಬಿಸಿಯಾಗುತ್ತಿದೆ ಅಂತಾ ಹೇಳಿದ್ದಾರೆ. ನಂತರ ಈ ಸಾಧನದ ಹಿಂಭಾಗವೂ ಬಿರುಕು ಬಿಟ್ಟಿರುವುದನ್ನು ಕಂಪನಿ ಗಮನಕ್ಕೆ ತಂದಿದ್ದಾರೆ. ಇದಲ್ಲದೆ ಹೆಚ್ಚಿನ ತಾಪಮಾನದಿಂದ ವಾಚ್ಯನ ಒಎಸ್ ಅಂದರೆ ಆಪರೇಟಿಂಗ್ ಸಿಸ್ಟಂ ಸ್ಥಗಿತಗೊಳಿಸುವ ಎಚ್ಚರಿಕೆ ಸಂದೇಶ ಬರುತ್ತಿರುವುದನ್ನು ಗಮನಿಸಿದ್ದಾರೆ. ಆದರೆ ಆ್ಯಪಲ್ ಕಂಪನಿಯವರು ಮಾಹಿತಿ ತಿಳಿದ ನಂತರವೂ ಹೆಚ್ಚಿನ ಗಮನ ಹರಿಸಲಿಲ್ಲ.

ಆ್ಯಪಲ್ ವಾಚ್ ಸ್ಫೋಟಕೆಲ ದಿನ ಕಳೆದರೂ ವಾಚ್‌ನ ಸಮಸ್ಯೆ ಸರಿಹೋಗಿರಲಿಲ್ಲ. ಬಳಕೆದಾದರ ಆ್ಯಪಲ್ ವಾಚ್ ಇದ್ದಕ್ಕಿದ್ದಂತೆಯೇ ಬಿಸಿಯಾಗುತ್ತಿದೆ ಅಂತಾ ಬಳಕೆದಾರರು ಚಿಂತಿತರಾದರೂ. ಬಳಕೆದಾರರು ಮತ್ತೆ ಸಂಪರ್ಕಿಸಿ ಕಂಪನಿಗೆ ಮಾಹಿತಿ ನೀಡಿದ್ದು ಈ ವೇಳೆ ಯಾವುದೇ ಕಾರಣಕ್ಕೂ ವಾಚ್ ಬಳಸದಂತೆ ಬಳಕೆದಾರರಿಗೆ ಕಸ್ಟಮರ್ ಕೇರ್ನವರು ಸಲಹೆ ನೀಡಿದ್ದಾರೆ. ಮರುದಿನ ಬೆಳಗ್ಗೆ ಇದ್ದಕ್ಕಿದಂತೆಯೇ ಸಾಧನವು ಹೆಚ್ಚು ಬಿಸಿಯಾಗಿ ಅದರ ಗಾಜು ಒಡೆದಿದೆ. ಈ ವೇಳೆ ಬಳಕೆದಾರ ತನ್ನ ಕೈನಲ್ಲಿದ್ದ ವಾಚ್‌ನ ಫೋಟೋ ತೆಗೆದುಕೊಳ್ಳಲು ಹೋಗಿದ್ದಾರೆ. ಇದ್ದಕ್ಕಿದ್ದಂತೆಯೇ ವಾಚ್‌ನಿಂದ ಕ್ರ್ಯಾಕಿಂಗ್ ಸೌಂಡ್ ಬಂದಿದೆ. ಇದರಿಂದ ಭಯಗೊಂಡು ಆ ವ್ಯಕ್ತಿ ತನ್ನ ಕೈಯಲ್ಲಿದ್ದ ವಾಚ್ ಅನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ. ಆದರೆ ವಾಚ್ ಬಾಂಬ್‌ನಂತೆ ಸ್ಫೋಟಗೊಂಡಿದೆ. ಇದರಿಂದಾಗಿ ಬಳಕೆದಾರರ ಕೈಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆ್ಯಪಲ್ ಕಂಪನಿ, ‘ಈ ಪ್ರಕರಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ಬಳಕೆದಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಅಂತಾ ಹೇಳಿದೆ.

ಕೆಲವೊಂದು ಇಲೆಕ್ಟ್ರಿಕ್ ವಸ್ತುಗಳನ್ನು ಬಳಸುವಾಗ ನಮ್ಮ ಸೇಫ್ಟಿಯಲ್ಲಿ ನಾವಿರಬೇಕು.ಅದು ಎಷ್ಟೇ ದುಬಾರಿಯಾಗಿರಲಿ ಅಥವಾ ಕಡಿಮೆ ಬೆಲೆಯಾಗಿರಲಿ ಅಪಾಯಗಳು ಸಂಭವಿಸಿದ ನಂತರ ಆಗುವ ಅನಾಹುತಗಳಿಗೆ ಹೊಣೆಗಾರರಾಗಲು ಕಂಪನಿಗಳು ಕೆಲವೊಮ್ಮೆ ಸಿದ್ದರಿರುವುದಿಲ್ಲ ಅನ್ನುವ ಉದಾಹರಣೆಗಳನ್ನು ಈಗಾಗಲೇ ಕೇಳಿರಬಹುದು. ಇನ್ನಾದರೂ ಜನತೆ ಎಚ್ಚತ್ತು ಕೊಳ್ಳಬೇಕಾಗಿದೆ.

Leave A Reply

Your email address will not be published.