ಮಂಗಳೂರು : ದೇವಸ್ಥಾನಕ್ಕೆಂದು ಹೋಗಲು ಬುಕ್ಕಿಂಗ್ ನೆಪದಲ್ಲಿ ಆನ್ಲೈನ್ ಮೂಲಕ ವಂಚನೆ | ಬರೋಬ್ಬರಿ 38,060 ರೂ.ಕಳೆದುಕೊಂಡ ಟೆಕ್ಕಿ

ಮಂಗಳೂರು: ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ನೆಪದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ, ಮಂಗಳೂರಿನಲ್ಲಿ ವಂಚಿಸಿರುವ ಪ್ರಕರಣವೊಂದು ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಟೆಕ್ಕಿಯೊಬ್ಬರು ನಗರ ಸುತ್ತಾಡಿದ ನಂತರ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ಹೆಲಿಕಾಪ್ಟರ್ ಇರುವ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬುಕ್ಕಿಂಗ್ ಮಾಡುವ ನೆಪದಲ್ಲಿ 38,060ರೂ ಪಡೆದು ವಂಚಿಸಿದ್ದಾನೆ.


Ad Widget

ಮಾ. 3 ರಂದು ಘಟನೆ ನಡೆದಿದೆ. ಮಂಗಳೂರಿನಲ್ಲಿ ಸುತ್ತಾಡಿದ ಈ ವ್ಯಕ್ತಿ ನಂತರ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಈ ವೇಳೆ, ವಿಮಾನ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಖಾಸಗಿ ಹೆಲಿಕಾಪ್ಟರ್ ಉಂಟಾ ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಒಂದು ವೆಬ್‌ಸೈಟ್ ದೊರಕಿದೆ ಅದನ್ನು ಸಂಪರ್ಕಿಸಿದಾಗ, ನಿತಿನ್ ಎಂಬ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದಾನೆ.

Ad Widget

Ad Widget

Ad Widget

ಆತ ತನ್ನನ್ನು ತಾನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿ ಎಂದು ಹೇಳಿದ್ದಾನೆ. ನಂತರ ಮಾತನಾಡುತ್ತಾ, ಬುಕ್ಕಿಂಗ್​ಗೆ ಅಡ್ವಾನ್ಸ್ ಎಂದು 38,060 ರೂ.ಯನ್ನು ಆತ ಕಳುಹಿಸಿದ ಕ್ಯೂಆರ್ ಕೋಡ್‌ಗೆ ಕಳಿಸಿದ್ದಾರೆ. ಅನಂತರ ನಡೆದದ್ದೇ ಟ್ವಿಸ್ಟ್. ಆ ವ್ಯಕ್ತಿ ಅನಂತರ ಅದೇ ನಂಬರ್ ಗೆ ಪೋನ್ ಮಾಡಿದಾಗ ಆತನ ಫೋನ್ ಸ್ವಿಚ್ಡ್​​ ಆಫ್ ಆಗಿದೆ. ದೇವಸ್ಥಾನಕ್ಕೆ ಕರೆ ಮಾಡಿದಾಗ ನಮ್ಮಲ್ಲಿ ಅಂತಹ ಯಾವುದೇ ಪ್ರತಿನಿಧಿ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ತಾನು ವಂಚನೆಗೊಳಗಾಗಿರುವುದು ಅರಿವಿಗೆ ಬಂದು, ಆ ವ್ಯಕ್ತಿ ಮಂಗಳೂರಿಗೆ ಬಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!
Scroll to Top
%d bloggers like this: