ಮಹಿಳಾ ಕಾಂಡೋಂ ಬಗ್ಗೆ ನಿಮಗೆ ತಿಳಿದಿದೆಯೇ? ಲೈಂಗಿಕ ರೋಗ ಹರಡದಂತೆ ಯಾರು ಕಾಂಡೋಂ ಬಳಸಿದರೆ ಉತ್ತಮ?

ನಿಮಗ್ಯಾರಿಗಾದರೂ ಮಹಿಳೆಯರು ಬಳಸುವ ಕಾಂಡೋಮ್ ಗಳ ಬಗ್ಗೆ ಗೊತ್ತೇ? ಹಾಗಾದರೆ ಏನಿದು ಫೀಮೇಲ್ ಕಾಂಡೋಂ. ಪುರುಷರು ಬಳಸುವ ಕಾಂಡೋಂನ ಹಾಗೇ, ಮಹಿಳೆಯರಿಗಾಗಿ ಸಹ ಕಾಂಡೋಮ್ ಇದೆ. ಹಾಗಾದರೆ ಗಂಡು ಮತ್ತು ಹೆಣ್ಣು ಕಾಂಡೋಮ್‌ಗಳ ನಡುವಿನ ವ್ಯತ್ಯಾಸವೇನು ಮತ್ತು ಇವೆರಡರಲ್ಲಿ ಯಾವುದು ಸುರಕ್ಷಿತ (Safe)ಎಂಬುದನ್ನು ತಿಳಿಯೋಣ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾಂಡೋಂ ಬಳಕೆ ಅನಗತ್ಯ ಗರ್ಭಧಾರಣೆಯನ್ನು (unwanted pregnancy) ತಪ್ಪಿಸಲು ಇರುವ ಸಾಧನ. ಇದು ಮುಖ್ಯವಾಗಿ ಪುರುಷರು ಬಳಸೋ ಸಾಧನ. ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಾಗಿ ಮಾರುಕಟ್ಟೆಯಲ್ಲಿ ಮಹಿಳಾ ಕಾಂಡೋಮ್‌ಗಳೂ ಸಿಗುತ್ತದೆ.


Ad Widget

ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಈ ಎರಡರ ನಡುವಿನ ವ್ಯತ್ಯಾಸ ಮತ್ತು ಇದೆರಡರಲ್ಲಿ ಯಾವುದು ಉತ್ತಮ ಎಂದು. ಪುರುಷ ಮತ್ತು ಮಹಿಳಾ ಕಾಂಡೋಮ್ ಗಳ ನಡುವಿನ ವ್ಯತ್ಯಾಸವೇನು ? ತಿಳಿಯೋಣ ಬನ್ನಿ (female condom vs male condom)

Ad Widget

Ad Widget

Ad Widget

ಪುರುಷ ಕಾಂಡೋಮ್‌ ; ಇವುಗಳನ್ನು ಲ್ಯಾಟೆಕ್ಸ್, ಪಾಲಿಯುರೆಥೇನ್, ಪಾಲಿಸ್ಪೋರಿನ್ ಗಳಿಂದ ತಯಾರಿಸಲಾಗುತ್ತದೆ. ಹಾಗೆನೇ ಇದು ಅನೇಕ ಫ್ಲೇವರ್ ಮತ್ತು ಗಾತ್ರಗಳಲ್ಲಿ ದೊರೆಯುತ್ತದೆ.

ಸ್ತ್ರೀ ಕಾಂಡೋಮ್ (female condom) : ಪಾಲಿಯುರೆಥೇನ್ ಅಥವಾ ನೈಟ್ರೈಲ್ ನಿಂದ ತಯಾರಿಸಲಾಗುತ್ತದೆ, ಇದು ಮಹಿಳೆಯರ ಯೋನಿಯನ್ನು ರಕ್ಷಿಸುತ್ತದೆ. ಅಷ್ಟು ಮಾತ್ರವಲ್ಲದೇ ಇದು, ಗಂಡಸರು ಧರಿಸುವ ಕಾಂಡೋಮ್‌ಗಳಿಗಿಂತ ಹೆಚ್ಚಾಗಿ ಜನನ ನಿಯಂತ್ರಣದಲ್ಲಿ ತುಂಬಾ ಸಹಕಾರಿಯಾಗಿ ಕೆಲಸ ಮಾಡುತ್ತದೆ.

ಮಹಿಳೆಯರ ಕಾಂಡೋಮ್ ನ ವಿನ್ಯಾಸ ಯಾವ ರೀತಿ ಇದೆ ಎಂದರೆ, ತುದಿಗಳನ್ನು ಹೊಂದಿರುವ ಚೀಲದ ರೀತಿ ಇರುತ್ತದೆ. ಈ ಚೀಲದ ಒಂದು ತುದಿ ಮುಚ್ಚಿರುತ್ತದೆ ಮತ್ತು ಇನ್ನೊಂದು ತುದಿ ತೆರೆದಿರುತ್ತದೆ. ಎರಡೂ ಕಡೆ ದಪ್ಪ ಉಂಗುರ ರೀತಿ ಇದೆ. ಅದನ್ನು ಹಾಕಲು ಮತ್ತು ತೆಗೆದುಹಾಕಲು ಮಹಿಳೆಯರಿಗೆ ಸುಲಭ. ಇದು ಹೆಚ್ಚು ವಿನ್ಯಾಸ ಮತ್ತು ಫ್ಲೇವರ್ ಹೊಂದಿಲ್ಲ.

ಮಹಿಳೆಯ ಖಾಸಗಿ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತೆ ಈ ಕಾಂಡೋಂ. ಪುರುಷರ ಕಾಂಡೋಮ್ (male condom) ಲ್ಯಾಟೆಕ್ಸ್ ನಿಂದ ತಯಾರಿಸುವುದರಿಂದ, ಇದು ಅಲರ್ಜಿಗಳ ಅಪಾಯ ಹೆಚ್ಚು ಮಾಡುತ್ತದೆ. ಹಾಗೆ ನೋಡಿದರೆ ಸ್ತ್ರೀ ಕಾಂಡೋಮ್ ಯೋನಿಯನ್ನು ಸುರಕ್ಷಿತವಾಗಿಡಲು ಹೆಚ್ಚು ಉಪಕಾರಿ.

ಮಹಿಳೆಯರೇ ನೀವು ಕಾಂಡೋಂ ಬಳಸಿದಾಗ ನೆನಪಿಡ ಬೇಕಾದ ಅಂಶಗಳು : ಲೈಂಗಿಕ ಕ್ರಿಯೆ ಮಾಡುವ ಸಂದರ್ಭದಲ್ಲಿ ಪ್ರಾರಂಭದಿಂದ ಕೊನೆಯವರೆಗೆ (Internal) ಕಾಂಡೋಮ್ ಬಳಸಬಹುದು.
ಕಾಂಡೋಮ್ ಇನ್ಸರ್ಟ್ ಮಾಡುವ ಮೊದಲು ಸರಿಯಾಗಿ ಓದಿ ಹಾಗೂ ಮತ್ತು ಎಕ್ಸ್ಪೈರಿ ದಿನಾಂಕ ಗಮನಿಸಿ.

ಮುಖ್ಯವಾಗಿ ಕಾಂಡೋಮ್ ಯಾವುದೇ ಭಾಗದಲ್ಲೂ ಕಟ್ ಇಲ್ಲ ಎಂದು ಖಚಿತಪಡಿಸಿಕೊಂಡರೆ ಉತ್ತಮ.
ಕಾಂಡೋಮ್ ಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ ಇಟ್ಟರೆ ಉತ್ತಮ. ಕಾಂಡೋಮ್ ಜಾರಿ ಬೀಳುತ್ತೆ ಅಥವಾ ಹೊರಗೆ ಬರುತ್ತೆ ಎಂದಾಗ ಇದರಿಂದ ರಕ್ಷೆ ಪಡೆಯಲು ಯೋನಿ ಲ್ಯೂಬ್ರಿಕೆಂಟ್‌ಗಳನ್ನು (lubricant) ಬಳಸಿ.

ಮಹಿಳೆಯರೇ ನೀವು ಕಾಂಡೋಮ್ ಬಳಸುವಾಗ ಈ ಕೆಲಸ ಮಾಡಬೇಡಿ :
ಮಹಿಳಾ ಕಾಂಡೋಮ್ ಮರುಬಳಕೆ ಮಾಡಬೇಡಿ.
ಕಾಂಡೋಮ್ ಗಳನ್ನು ಫ್ಲಶ್ ಮಾಡಬೇಡಿ ಏಕೆಂದರೆ ಅವು ಶೌಚಾಲಯವನ್ನು ಬ್ಲಾಕ್ ಮಾಡಬಹುದು.
ಎಕ್ಸ್ ಟರ್ನಲ್ ಕಾಂಡೋಮ್ (external condom) ಜೊತೆ ಸ್ತ್ರೀ ಕಾಂಡೋಮ್ ಬಳಸಬೇಡಿ, ಏಕೆಂದರೆ ಅದು ಸಿಡಿಯಲು ಕಾರಣವಾಗಬಹುದು.

error: Content is protected !!
Scroll to Top
%d bloggers like this: