Bank Services : ಗ್ರಾಹಕರೇ ಗಮನಿಸಿ | ಈ ನಂಬರ್ ಸೇವ್ ಮಾಡಿ, ಬ್ಯಾಂಕಿನ ಎಲ್ಲಾ ಸೇವೆ ಕುಳಿತಲ್ಲೇ ಸಿಗುತ್ತೆ!!!

ಮುಂಚಿನಂತೆ ಬ್ಯಾಂಕ್ ವಹಿವಾಟು ನಡೆಸಲು ಅಲೆದಾಡುವ, ಸಾಲು ಸರತಿಯಲ್ಲಿ ನಿಲ್ಲುವ ಪ್ರಮೇಯ ಈಗ ಎದುರಾಗುವುದಿಲ್ಲ. ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಮನೆಯಲ್ಲಿಯೇ ಕುಳಿತು ಬ್ಯಾಂಕ್ ಸಂಬಂಧಿತ ಸೇವೆಗಳನ್ನ ಪಡೆಯಲು ಡಿಜಿಟಲ್ ಬ್ಯಾಂಕಿಂಗ್ ನೆರವಾಗುತ್ತಿದೆ.

ಗ್ರಾಹಕನಿಗೆ ಬ್ಯಾಂಕಿಂಗ್ ವಹಿವಾಟು ನಡೆಸಲು ಮತ್ತಷ್ಟು ಸರಳವಾಗಿಸುವ ಉದ್ದೇಶದಿಂದ ಅನೇಕ ಬ್ಯಾಂಕುಗಳು ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಜಾರಿಗೆ ತಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು,ತನ್ನ ಗ್ರಾಹಕರಿಗೆ ಹಲವಾರು ರೀತಿಯ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದು, ಡಿಜಿಟಲ್ ಜಗತ್ತಿನಲ್ಲಿ ಬ್ಯಾಂಕಿಂಗ್ ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಮನೆ ಬಾಗಿಲಿಗೆ ಎಲ್ಲ ಸೇವೆಗಳು ದೊರೆಯುತ್ತಿರುವ ಈ ಸಮಯದಲ್ಲಿ, ಗ್ರಾಹಕರು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯದಿಂದ ಗ್ರಾಹಕರು ತಮ್ಮ ಬ್ಯಾಲೆನ್ಸ್ ವಿಚಾರಣೆ, ಸ್ಟಾಪ್ ಚೆಕ್ ಮತ್ತು ಖಾತೆದಾರರಿಗೆ ವಿನಂತಿ ಮಾಡುವ , ಬ್ಯಾಂಕಿಂಗ್ ಕೊನೆಯ 5 ವಹಿವಾಟುಗಳ ವಿವರಗಳು, ಸೇವೆಗಳನ್ನ ಪಡೆಯಬಹುದಾಗಿದೆ. ಗ್ರಾಹಕರು ಈ ಸೇವೆಯ ಲಾಭವನ್ನು ಪಡೆಯಲು ನೀಡಲಾದ ಪಟ್ಟಿಯಿಂದ ಫೋನ್’ನಲ್ಲಿ ಬ್ಯಾಂಕ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.

ಇಂಟರ್ನೆಟ್ ಬ್ಯಾಂಕಿಂಗ್ ಎನ್ನುವುದು ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯ ವ್ಯಾಪಾರದ ಹೆಸರು, ಖಾತೆಯ ಮಾಹಿತಿ, ಉತ್ಪನ್ನಗಳು ಮತ್ತು ಇತರ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಜೊತೆಗೆ ಕಾಲಕಾಲಕ್ಕೆ ಬ್ಯಾಂಕ್ ಗ್ರಾಹಕರಿಗೆ ಇಂಟರ್ನೆಟ್ ಮೂಲಕ ಸಲಹೆ ನೀಡುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್, ಎಲೆಕ್ಟ್ರಾನಿಕ್ ಬ್ಯಾಂಕಿಂಗ್, ಇ-ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು / ಸೌಲಭ್ಯವನ್ನು ಪರಸ್ಪರ ಬದಲಾಯಿಸಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಚ್ಡಿಎಫ್ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ (BOI), ಆಕ್ಸಿಸ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಂತಹ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ತನ್ನ ಗ್ರಾಹಕರಿಗೆ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ.

ಎಸ್‌ಬಿಐ ತನ್ನ ಮೊಬೈಲ್ ಬ್ಯಾಂಕಿಂಗ್ ವೈಶಿಷ್ಟ್ಯದ ಅಡಿಯಲ್ಲಿ ಬಹಳಷ್ಟು ಆಯ್ಕೆಗಳನ್ನು ನೀಡುತ್ತಿದ್ದು, ಮೊಬೈಲ್ ಬ್ಯಾಂಕಿಂಗ್‌ಗಾಗಿ ಹಲವಾರು ಅಪ್ಲಿಕೇಶನ್‌ಗಳನ್ನು ಹೊಂದಿದೆ. ಕಾರ್ಪೊರೇಟ್‌ನಿಂದ ಚಿಲ್ಲರೆ ಬ್ಯಾಂಕಿಂಗ್‌ವರೆಗಿನ ವೇದಿಕೆಗಳನ್ನು ಒದಗಿಸುತ್ತಿದೆ. ಯೋನೋ ಲೈಟ್ ಎಸ್‌ಬಿಐ, ಯೋನೋ ಬ್ಯುಸಿನೆಸ್ ಎಸ್‌ಬಿಐ, ಭೀಮ್ ಎಸ್‌ಬಿಐ ಪೇ, ಎಸ್‌ಬಿಐ ತ್ವರಿತ ಬ್ಯಾಂಕಿಂಗ್, ಯೋನೋ ಹೀಗೆ ನಾನಾ ರೀತಿಯ ಅಪ್ಲಿಕೇಷನ್ ಮೂಲಕ ಗ್ರಾಹಕನಿಗೆ ನೆರವಾಗುತ್ತಿದೆ.

ಎಸ್ಬಿಐ ಇತ್ತೀಚೆಗೆ ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನ ಪ್ರಾರಂಭಿಸಿದ್ದು, ಎಸ್ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಲು, ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WAREG ಬರೆದು ಖಾತೆ ಸಂಖ್ಯೆ (A/C) ಎಂಬ SMS ಬರೆಯಬೇಕು. ಅದನ್ನು 917208933148ಗೆ ಕಳುಹಿಸಬೇಕು. ನೋಂದಣಿ ಪೂರ್ಣಗೊಂಡ ನಂತರ, ಗ್ರಾಹಕ ಎಸ್ಬಿಐನ ವಾಟ್ಸಾಪ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರು ಮತ್ತು ಗ್ರಾಹಕರಲ್ಲದವರಿಗಾಗಿ ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನ ಪ್ರಾರಂಭಿಸಿದೆ . ವಾಟ್ಸಾಪ್‍ನಲ್ಲಿ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಲು, ಗ್ರಾಹಕರು ಅಧಿಕೃತ ಪಿಎನ್ಬಿಯ ವಾಟ್ಸಾಪ್ ಸಂಖ್ಯೆಯ 919264092640 ಬಳಸಿ,ಈ ಸಂಖ್ಯೆಗೆ ಹಾಯ್ / ಹಲೋ ಎಂದು ಸಂದೇಶ ರವಾನಿಸಿ ಬ್ಯಾಂಕ್ ಸೇವೆಯನ್ನು ಆರಂಭಿಸಬಹುದು.

HDFC ಬ್ಯಾಂಕ್ ತನ್ನ ವೆಬ್ ಸೈಟ್ ನ ಮೂಲಕ ಮೊಬೈಲ್‍ನಲ್ಲಿ 70700 22222 ಸಂಖ್ಯೆಯನ್ನು ಪಡೆಯಬಹುದಾಗಿದೆ. ಈ ನಂಬರ್ ಗೆ ವಾಟ್ಸಾಪ್ ಮೂಲಕ ಹಾಯ್ ಎಂದು ಸಂದೇಶ ರವಾನಿಸಿ, ವಾಟ್ಸಾಪ್‍ನಲ್ಲಿ HDFC ಬ್ಯಾಂಕ್ ಚಾಟ್ ಬ್ಯಾಂಕಿಂಗ್ ಮೂಲಕ ಸೌಲಭ್ಯ ಪಡೆಯಬಹುದಾಗಿದೆ. HDFC ಬ್ಯಾಂಕ್ ಚಾಟ್ ಬ್ಯಾಂಕಿಂಗ್ 90ಕ್ಕೂ ಹೆಚ್ಚು ವಹಿವಾಟುಗಳು ಮತ್ತು ಸೇವೆಗಳನ್ನು ಮಾಡಲು ಅನುವು ಮಾಡಿಕೊಟ್ಟಿದೆ.

ಐಸಿಐಸಿಐ ಬ್ಯಾಂಕಿನ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಲು, ಗ್ರಾಹಕರು 8640086400 ಸಂಖ್ಯೆಯನ್ನು ಸೇ ವ್ ಮಾಡಿಕೊಂಡು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8640086400 ಸಂಖ್ಯೆಗೆ ‘ಹಾಯ್’ ಎಂಬ ಸಂದೇಶವನ್ನು ಕಳುಹಿಸಿ, ವಾಟ್ಸಾಪ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಮೂಲಕ ನಿಮ್ಮ ಮೊಬೈಲ್ ಪರದೆಯಲ್ಲಿ ಸುರಕ್ಷಿತ ಮತ್ತು ಸಂವಾದಾತ್ಮಕ ಮೆನುವನ್ನು ಪಡೆಯುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸಬಹುದಾಗಿದೆ.

9542000030 ಈ ನಂಬರ್ ಗೆ ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಅನ್ನು ಸಹ ಮಾಡಬಹುದಾಗಿದೆ. ಗ್ರಾಹಕನಿಗೆ ನೆರವಾಗುವ ಉದ್ದೇಶ ಹೊಂದಿರುವ ಬ್ಯಾಂಕ್ ಎಲ್ಲಾ ಗ್ರಾಹಕನಿಗೆ ನೆರವಾಗುವ ರೀತಿಯಲ್ಲಿ ದಿನದಿಂದ ದಿನಕ್ಕೆ ಅನೇಕ ಮಾರ್ಪಾಡು ಮಾಡಿ ನೆರವಾಗುತ್ತಿದೆ. ಇದೀಗ ವಾಟ್ಸಪ್ ಮೂಲಕ ಸಂದೇಶ ಇಲ್ಲವೇ ಮಿಸ್ ಕಾಲ್ ನೀಡಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

Leave A Reply

Your email address will not be published.