ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಪುತ್ತೂರು: ರಬ್ಬರ್ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯ ಧನಕ್ಕಾಗಿ ರಬ್ಬರ್ ಮಂಡಳಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018, 2020 ಮತ್ತು 2021ರಲ್ಲಿ ನಾಟಿ ಮಾಡಿರುವ ರಬ್ಬರ್ ಕೃಷಿಕರು ಸಹಾಯಧನ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಅ.31 ಕೊನೆಯ ದಿನವಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ
ಅರ್ಜಿಗಳನ್ನು ರಬ್ಬರ್ ಮಂಡಳಿಯ website (www.rubberboard.org.in) ಸರ್ವಿಸ್ ಪ್ಲಸ್ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ, ಜಾಗದ ಬೌಂಡರಿಯ ವಿವರಗಳನ್ನು ಒಳಗೊಂಡ ಅಂದಾಜು ನಕ್ಷೆ ಕೃಷಿಕರ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಜೆರಾಕ್ಸ್ ಪ್ರತಿ, ಆಧಾರ್ ಪ್ರತಿ, ಹಿಡುವಳಿ ಪತ್ರ (Nontraditional area) ಮತ್ತು ನಾಮಿನೇಷನ್ ಪ್ರತಿ (ಅಗತ್ಯವಿದ್ದಲ್ಲಿ) ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಅಪ್ಲೋಡ್ ಮಾಡಿದ ನಂತರ ಸ್ಥಳೀಯ ಪ್ರಾದೇಶಿಕ ಕಚೇರಿಗಳಿಗೆ ಸಲ್ಲಿಸಬೇಕು.

ಸಹಾಯಧನ ಪಡೆಯಲು ಅರ್ಹತೆ 0.10 ಹೆಕ್ಟರ್ (25 ಸೆಂಟ್ಸ್ ಅಥವಾ 10 ಗುಂಟೆಯಿಂದ 5ಹೆಕ್ಟರ್ (12.05 ಎಕರೆ) ಪ್ರದೇಶದವರೆಗೆ ಕೃಷಿ ಮಾಡಿರುವ ಕೃಷಿಕರು ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ರಾಜ್ಯವು ಸೇರಿದಂತೆ ಅಸಾಂಪ್ರದಾಯಕ ರಬ್ಬರ್ ಪ್ರದೇಶ (Nontradtonal area) ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಟ್ಟಾರೆಯಾಗಿ 5 ಹೆಕ್ಟರ್‌ವರೆಗೆ ಹೊಸ ನಾಟಿ ಅಥವಾ ಮರುನಾಟಿ ಅಥವಾ ಮರುನಾಟಿ ಮಾಡಿರುವ ಕೃಷಿಕರು ಗರಿಷ್ಠ 2 ಹೇಕ್ಟರ್ ರಬ್ಬರ್ ಕೃಷಿಗೆ, ಪ್ರತಿ ಹೇಕ್ಟರಿಗೆ ರೂ.40,000ದಂತೆ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸಹಾಯಧನವನ್ನು ಒಂದೇ ಕಂತಿನಲ್ಲಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೃಷಿಕರು ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿಗಳಾದ ಪುತ್ತೂರು (08251-295021). ಮಂಗಳೂರು (0824-2951329), ಶಿವಮೊಗ್ಗ(08182-296228) ಮತ್ತು ಕುಂದಾಪುರ (08254-200254) ಕಛೇರಿಗಳಿಗೆ ಸಂಪರ್ಕಿಸಬಹುದು.

Leave A Reply

Your email address will not be published.