ರಾಜ್ಯದ ಜನರಿಗೆ ಸಿಹಿ ಸುದ್ದಿ | ವಿದ್ಯುತ್ ದರ ಏರಿಕೆಯ ಕುರಿತು ಮಹತ್ವದ ಮಾಹಿತಿ

ಈಗಾಗಲೇ ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಹಲವಾರು ಗೊಂದಲಗಳು ಇವೆ. ಆದರೆ ಜನರ ಈ ಗೊಂದಲಗಳಿಗೆ ಸರ್ಕಾರವು ಕೆಲವೊಂದು ಅಧಿಕೃತ ನಿರ್ಧಾರವನ್ನು ಕೈಗೊಳ್ಳಲು ಸಮಯ ಬೇಕಾಗಬಹುದು. ಮತ್ತು ಜನರಿಗೆ ಅದರಿಂದ ಅನುಕೂಲ ಆಗುವಂತಿದ್ದರೆ ಮಾತ್ರ ನಿಯಮಗಳನ್ನು ಜಾರಿಗೊಳಿಸುತ್ತದೆ. ಹಾಗೆಯೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ದರವನ್ನು ಏರಿಕೆ ಮಾಡಿದ್ದ ಸರ್ಕಾರ, ಪರಿಷ್ಕೃತ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ಚಿಂತನೆ ನಡೆಸಿದೆ. ವಿದ್ಯುತ್ ದರ ಏರಿಕೆ ನಿಯಮ ವಾಪಸ್ ಪಡೆಯುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಗತ್ಯವಾದರೆ ವಿದ್ಯುತ್ ದರ ಏರಿಕೆ ನಿಯಾಮಾವಳಿ ಹಿಂಪಡೆಯಲಾಗುವುದು ಎಂದು ಸಂಬಂಧಪಟ್ಟ ಸಚಿವರು ತಿಳಿಸಿರುತ್ತಾರೆ.

ಇಂಧನ ಸಚಿವ ಸುನೀಲ್ ಕುಮಾರ್ ಅವರ ಪ್ರಕಾರ, ವಿದ್ಯುತ್ ದರ ಏರಿಕೆಗೆ ಪ್ರಸ್ತುತ ಸರ್ಕಾರ ಹೊಸ ನಿಯಮಾವಳಿ ರೂಪಿಸಿಲ್ಲ. ಹಾಗೂ 2014 ರಲ್ಲಿ ಕಲ್ಲಿದ್ದಲು ಬೆಲೆ ಹೊಂದಾಣಿಕೆಗೆ ರೂಪಿಸಲಾಗಿದ್ದ ನಿಯಮಾವಳಿಯೇ ಮುಂದುವರೆಯುತ್ತಿದೆ ಎಂದು ಮಾಹಿತಿ ನೀಡಿರುತ್ತಾರೆ.

ಅಲ್ಲದೆ ಕಾಂಗ್ರೆಸ್ ಆಡಳಿತ ತಂದ ಈ ಹೊಸ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಜನರು ವಿದ್ಯುತ್ ದರ ಪರಿಷ್ಕರಣೆ ನೀತಿಯಿಂದ ಆಕ್ರೋಶಗೊಳ್ಳುತ್ತಿದ್ದಾರೆ. ಮತ್ತು ಸಾಧಕ-ಬಾಧಕಗಳ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಈ ಬಗೆಗಿನ ನಿರ್ಧಾರ ಕೈಗೊಳ್ಳುವುದಾಗಿ ಅಥವಾ ಅಗತ್ಯವಾದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರಸ್ತುತ ಜನರಿಗೆ ಇರುವ ಗೊಂದಲಗಳಿಗೆ ಇಂಧನ ಸಚಿವರು ಉತ್ತರ ನೀಡಿರುತ್ತಾರೆ.

Leave A Reply

Your email address will not be published.