Health Tips : ನಿಮ್ಮ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದೆಯೇ ? ಇದು ಆರೋಗ್ಯಕ್ಕೆ ಹಾನಿಕಾರಕವೇ?

ನಮ್ಮ ಕೈಗಳ ಅಂದವನ್ನು ಹೆಚ್ಚಿಸೋದೇ ನಮ್ಮ ಉಗುರುಗಳು ಅಲ್ಲವೇ. ಉಗುರನ್ನು ಕೆಲವರಿಗೆ ಪ್ಯಾಶನ್ ಆಗಿ ಬೆಳೆಸುವ ಹವ್ಯಾಸ ಇದೆ. ಮತ್ತು ಆರೋಗ್ಯ ಅನ್ನೋದು ಮನುಷ್ಯನಿಗೆ ಅಗತ್ಯ ಆದುದು. ಆರೋಗ್ಯ ಇಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ ತಾನೇ. ಸಾಮಾನ್ಯವಾಗಿ ನಾವು ಅನಾರೋಗ್ಯಕ್ಕೆ ಒಳಗಾದರೆ ನಮ್ಮ ದೇಹವು ಅನೇಕ ಸೂಚನೆಗಳನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಉಗುರುಗಳು ಹಳದಿಯಾಗಿ ಕಾಣಿಸಿಕೊಂಡರೆ ಅಥವಾ ಉಗುರುಗಳು (nail) ಬಿರುಕು ಬಿಟ್ಟಿದ್ದರೆ ಅಥವಾ ಒರಟಾಗಿದ್ದರೆ ಎಚ್ಚರಿಕೆ ವಹಿಸುವಂತೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುವ ಮುನ್ಸೂಚನೆ ಆಗಿರಬಹುದು ಎಂದಿದ್ದಾರೆ.

ಕೆಟ್ಟ ಕೊಲೆಸ್ಟ್ರಾಲ್‌ (Cholesterol) ಮಟ್ಟ ಹೆಚ್ಚಾಗಲು ಕಾರಣಗಳು: ಕೊಲೆಸ್ಟ್ರಾಲ್‌ ಎನ್ನುವುದು ದೇಹದಲ್ಲಿ ಇದ್ದೇ ಇರುತ್ತದೆ. ಆದ್ರೆ ಎಲ್ಲದಕ್ಕೂ ಒಂದು ಮಿತಿ ಅನ್ನೋದು ಇರುತ್ತದೆ. ಹಾಗೂ ಈ ಕೆಟ್ಟ ಕೊಲೆಸ್ಟ್ರಾಲ್‌ ಉತ್ಪತ್ತಿ ಆಗಲು ಕೆಲವು ಕಾರಣಗಳಿರಬಹುದು. ಅಂದರೆ ದೇಹದಲ್ಲಿನ ಆರೋಗ್ಯಕರ ಕೋಶಗಳ ರಚನೆಯಲ್ಲಿ ಕೊಲೆಸ್ಟ್ರಾಲ್‌ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೆಚ್ಚಿನ ಕೋಶ ರಚನೆಗಳು ಆದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ನ ಪ್ರಭಾವ ಹೆಚ್ಚಾದಾಗ, ನಮ್ಮ ದೇಹವು ಮೊದಲು ಹಲವಾರು ಸೂಚನೆ ನೀಡುತ್ತದೆ. ಈ ಲಕ್ಷಣಗಳನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಈ ಅಪಾಯದಿಂದ ಪಾರಾಗಬಹುದು.

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು : ಕೊಲೆಸ್ಟ್ರಾಲ್‌ ಎಲ್ಲರನ್ನು ಕಾಡುವ ಒಂದು ವ್ಯಾಧಿ ಎನ್ನಬಹುದು. ನಾವು ಸೇವಿಸುವ ಪ್ರತಿಯೊಂದು ಆಹಾರಗಳಲ್ಲಿ ಹೆಚ್ಚಿನದು ಕೊಲೆಸ್ಟ್ರಾಲ್‌ ಸಹಿತ ಆಹಾರ ಆಗಿದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು ದೇಹ, ಕಾಲುಗಳು, ತೊಡೆಗಳು, ಸೊಂಟ, ದವಡೆಗಳು ಮತ್ತು ಕಾಲುಗಳಲ್ಲಿ ಸೆಳೆತವನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ವಿಶ್ರಾಂತಿಯ ನಂತರ ಈ ಸೆಳೆತಗಳು ತನ್ನಿಂದ ತಾನೇ ಗುಣವಾಗುತ್ತವೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಚರ್ಮದ ಬಣ್ಣ ಹಳದಿ ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತದೆ. ಬೆರಳಿನ ಉಗುರುಗಳು ಮತ್ತು ಕಾಲಿನ ಬೆರಳ ಉಗುರುಗಳು ಸಹ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸುತ್ತವೆ. ಆದ್ದರಿಂದ, ಸಮಯಕ್ಕೆ ಸರಿಯಾಗಿ ಗಮನಿಸಿ ಎಚ್ಚತ್ತುಕೊಳ್ಳುವುದು ಸೂಕ್ತ.

ಪಾದಗಳಲ್ಲಿ ಸೆಳೆತ: ನಾವು ಆಕ್ಟಿವ್ ಆಗಿ ಇರಲು ಪಾದದ ಅಗತ್ಯ ಸಹ ಇದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ತುಂಬಾ ಹೆಚ್ಚಾದಾಗ ಪಾದಗಳಿಗೆ ಸರಿಯಾಗಿ ರಕ್ತ ಸಂಚಾರಕ್ಕೆ ತೊಂದರೆ ಆಗುತ್ತದೆ. ಈ ಕಾರಣದಿಂದಾಗಿ, ಕೆಲವೊಮ್ಮೆ ನಿಮ್ಮ ಪಾದಗಳ ಮರಗಟ್ಟುವಿಕೆ ಅನುಭವಿಸಲು ಪ್ರಾರಂಭಿಸುತ್ತವೆ. ಇದು ಸಂಭವಿಸಿದಾಗ, ಜುಮ್ಮೆನಿಸುವಿಕೆ ಮತ್ತು ನಡುಕ ಕೂಡ ಪಾದಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಈ ರೀತಿ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ದೇಹದ ತಪಮಾನದಲ್ಲಿ ತಾಪಮಾನ:

ದೇಹದ ತಾಪಮಾನವು ಸಹ ನಮ್ಮ ಆರೋಗ್ಯದ ಸ್ಥಿತಿ ಗತಿ ಬಗ್ಗೆ ತಿಳಿಸುತ್ತದೆ.ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗಲೆಲ್ಲಾ ಒಂದು ಕಾಲಿನ ಉಷ್ಣತೆಯು ಇನ್ನೊಂದು ಕಾಲಿಗಿಂತ ಹೆಚ್ಚಿರಬಹುದು. ಅಥವಾ ಕಡಿಮೆಯಾಗಿರಬಹುದು. ಇದಲ್ಲದೆ, ಕೊಲೆಸ್ಟ್ರಾಲ್‌ನಿಂದ ರಕ್ತನಾಳಗಳಲ್ಲಿ ಪ್ಲೇಕ್ ನ್ನು ನಿರ್ಮಿಸಿದಾಗ, ರಕ್ತದ ಹರಿವು ನಿಧಾನಗೊಳ್ಳುತ್ತದೆ. ಇದು ಕಾಲುಗಳಿಗೆ ರಕ್ತ ಪೂರೈಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಅನೇಕ ಬಾರಿ ಪಾದಗಳ ಉಷ್ಣತೆಯು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಮತ್ತು ಅದು ತಣ್ಣಗಾಗಲು ಪ್ರಾರಂಭಿಸುತ್ತದೆ.

ನಮ್ಮ ದೇಹದಲ್ಲಿ ಪ್ರತಿಯೊಂದು ಭಾಗಗಳ ಪಾತ್ರ ಬಹಳ ಮುಖ್ಯ. ಆದುದರಿಂದ ನಮ್ಮ ದೇಹದ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯವೇ ಭಾಗ್ಯ ಅನ್ನೋ ಮಾತು ಯಾವತ್ತೂ ಸುಳ್ಳಾಗದು. ಹಣ ಎಷ್ಟು ಬೇಕಾದರೂ ಸಂಪಾದಿಸಬಹುದು. ಆದರೆ ಕೆಲವೊಮ್ಮೆ ಕಳೆದು ಹೋದ ನಮ್ಮ ಆರೋಗ್ಯ ವನ್ನು ಸರಿಪಡಿಸಿಕೊಳ್ಳಲು ಸಾಧ್ಯ ಆಗೋದಿಲ್ಲ. ಆದ್ದರಿಂದ ಆರೋಗ್ಯ ಕಳೆದುಕೊಳ್ಳುವ ಮುನ್ನ ಎಚ್ಚತ್ತುಕೊಳ್ಳುವುದು ಉತ್ತಮ.

Leave A Reply

Your email address will not be published.