ಭಾರತ ರಾಷ್ಟ್ರ ಸಮಿತಿ ಪಕ್ಷ ಅಸ್ತಿತ್ವಕ್ಕೆ | ಇವರೇ ನೋಡಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯ ಎದುರಾಳಿಗಳು !

2024ರಲ್ಲಿ ನಡೆಯುವ ಸಂಸತ್ ಚುನಾವಣೆಯ ಮೇಲೆ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿವೆ. ಅದರಲ್ಲಿಯೂ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿಯವರನ್ನು ಇಳಿಸಬೇಕೆಂದು ನಾನು ತಂಡಗಳು ರೂಪರೇಷೆ ಸಿದ್ದಗೊಳಿಸುತ್ತಿವೆ. ಇವುಗಳ ಮಧ್ಯೆ ನರೇಂದ್ರಮೋದ್ಯವನ್ನು ಇಳಿಸಿದರೆ ಮುಂದಿನ ಪ್ರಧಾನಿಯಾಗಿ ಕಣಕ್ಕೆ ಇಳಿಯಲು ನಾಯಕರುಗಳು ತಯಾರಾಗುತ್ತಿದ್ದಾರೆ. ಪ್ರಧಾನಿ ಪೋಸ್ಟ್ ಆಕಾಂಕ್ಷಿಗಳಾಗುವವರ ಪಟ್ಟಿ ದಿನೇ ದಿನೇ ಏರುತ್ತಲೇ ಇದೆ.

ಪ್ರಧಾನಿ ಪಟ್ಟಕ್ಕೆ ಕಾದು ಕುಳಿತವಾದ ಪಟ್ಟಿಯಲ್ಲಿ ಕಂಡುಬರುವ ಹೆಸರುಗಳಲ್ಲಿ ಪ್ರಾಮುಖ್ಯವಾದುದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದಾಗಲೇ ಈ ಹುದ್ದೆಯ ಮೇಲೆ ತಮಗಿರುವ ಆಕಾಂಕ್ಷೆಯ ಬಗ್ಗೆ ಅಲ್ಲಿಲ್ಲ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಕೂಡ ಸಂಭವನೀಯ ಅಭ್ಯರ್ಥಿ. ಇದೀಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಹೊಸ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅಲಿಯಾಸ್ ಕೆಸಿಆರ್ !

ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿರುವ ಮಹತ್ವಾಕಾಂಕ್ಷಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಎಂದಿದ್ದ ತಮ್ಮ ಪ್ರಾದೇಶಿಕ ಪಕ್ಷಕ್ಕೆ ಈಗ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಎಂದು ಮರುನಾಮಕರಣ ಮಾಡಿದ್ದು,ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಅಂತಿಮಗೊಳಿಸಿದ ಪಕ್ಷದ ಹೆಸರಿನ ನಿರ್ಣಯಕ್ಕೆ ಅನುಮೋದನೆ ಪಡೆಯಲು ನಾಳೆ ಟಿಆ‌ಎಸ್ ನಿಯೋಗ ದೆಹಲಿಗೆ ತೆರಳಲಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಲಾಗುತ್ತದೆ. ಬಳಿಕ ಆಯೋಗ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಪಕ್ಷದ ಹೆಸರಿನ ಮೇಲೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

ಈ ಹೊಸ ಹೆಸರಿನ ಕುರಿತು ಹೇಳಿಕೆ ನೀಡಿರುವ ಕೆಸಿಆರ್, ತೆಲುಗು, ಹಿಂದಿಯಲ್ಲಿ ಸರಳವಾಗಿ ಹೇಳಬಹುದಾದ ಪದ ಇದಾಗಿದ್ದು, ಹಾಗಾಗಿ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ ಎಂದು ಹೆಸರಿಸಲಾಗಿದೆ. ಈ ಹೆಸರು ಈಗಾಗಲೇ ದೇಶಾದ್ಯಂತ ಜನರಿಗೆ ಮುಟ್ಟಿದೆ ಎಂದಿದ್ದಾರೆ.

ಕುತೂಹಲದ ಸಂಗತಿ ಏನೆಂದರೆ ನಿನ್ನೆ ಮಂಗಳವಾರ ಕರ್ನಾಟಕದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಯವರು ತಮ್ಮ 20 ಜನ ಶಾಸಕರನ್ನು ಕಟ್ಟಿಕೊಂಡು ತೆಲಂಗಾಣಕ್ಕೆ ಧಾವಿಸಿದ್ದರು. ಇಂದು ಕೆಸಿಆರ್ ಅವರ ಹೊಸ ಪಕ್ಷದ ಘೋಷಣೆ ಸಂದರ್ಭದ ಅವರು ಕೂಡ ಹಾಜರು ಇದ್ದುದು ರಾಜಕೀಯ ವಲಯದಲ್ಲಿ ಹಲವಾರು ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಅಲ್ಲದೆ ಇಂದಿನ ಅನುಮೋದನೆ ಈ ಸಭೆಯಲ್ಲಿ ಕೂಡ ಎಚ್.ಡಿ. ಕುಮಾರಸ್ವಾಮಿ, ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷ, ಸಂಸದ ತಿರುಮಾವಲವನ್ ಮತ್ತಿತರರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆಕೆಸಿಆರ್ ನೇತೃತ್ವದ ಹೊಸ ಭಾರತ್ ರಾಷ್ಟ್ರ ಸಮಿತಿ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಅಲ್ಲದೆ ಹಲೋ ಕಡೆಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಒಟ್ಟಾರೆ ವಿರೋಧ ಪಕ್ಷಗಳಿಂದ ಕನಿಷ್ಠ ಐದು ಮಂದಿ ಪ್ರಧಾನಿ ಆಕಾಂಕ್ಷಿಗಳು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿ

Leave A Reply