Viral Video – Audio | ಗಲ್ಲಿ ಕ್ರಿಕೆಟ್ ಗೆ ಸಂಸ್ಕೃತದಲ್ಲಿ ಸುಮಧುರ ಕಾಮೆಂಟರಿ ; ಪ್ರಧಾನಿ ಮೋದಿ ಹರ್ಷ

ಗಲ್ಲಿ ಗಲ್ಲಿಗಳಲ್ಲಿ ಆಡುವ ಗಲ್ಲಿ ಕ್ರಿಕೆಟ್ ದಿಲ್ಲಿಯಲ್ಲಿ ಕೂಡಾ ಆಡ್ತಾರೆ. ನಗರ ಯಾವುದೇ ಇರಲಿ ಪ್ರತಿ ನಗರಗಳಲ್ಲೂ ಗಲ್ಲಿಗಳಿವೆ ಅಲ್ಲಿ ಕೂಡ ಮಕ್ಕಳು ದೊಡ್ಡವರು ಉತ್ಸಾಹಿಗಳು ಸೇರಿಕೊಂಡು ಕ್ರಿಕೆಟ್ ಆಟವನ್ನು ಆಡುತ್ತಾ ಎಂಜಾಯ್ ಮಾಡ್ತಾರೆ. ಕೆಲವರು ತಾ ಆಟದ ಸಂದರ್ಭ ತಮ್ಮದೇ ಆದ ರೀತಿಯಲ್ಲಿ ತಮ್ಮದೇ ಆದ ಭಾಷೆಯಲ್ಲಿ, ತಮಗಿಷ್ಟ ಬಂದ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಸಂಭ್ರಮಿಸುತ್ತಾರೆ. ಆದರೆ ಬೆಂಗಳೂರಿನ ಈ ಮಕ್ಕಳು ಆಡಿದ ಗಲ್ಲಿ ಕ್ರಿಕೆಟ್ ಮಾತ್ರ ದೇಶಾದ್ಯಂತ ಸದ್ದು ಮಾಡಿದೆ. ಇದರ ಸುದ್ದಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನೂ ತಲುಪಿ, ಈ ವಿಶಿಷ್ಟ ಕ್ರಿಕೆಟ್ ಅವರನ್ನೂ ಅಚ್ಚರಿಗೊಳಿಸಿದ್ದು, ಅವರು ಈ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಏನಪ್ಪಾ ಈ ಗಲ್ಲಿ ಕ್ರಿಕೆಟ್ ನ ಸ್ಪೆಷಾಲಿಟಿ ಅಂತ ನೋಡಿದ್ರೆ, ಈ ಕ್ರಿಕೆಟ್‌ನಲ್ಲಿ ಕೇಳಿ ಬಂದ ಸುಮಧುರ ಕಾಮೆಂಟರಿ. ಇಲ್ಲೇ, ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಆವರಣದಲ್ಲಿ ನಡೆದ ಈ ಕ್ರಿಕೆಟ್‌ನ ವಿಶೇಷತೆ ಎಂದರೆ  ಸಂಸ್ಕೃತದಲ್ಲಿಯೇ ಕಾಮೆಂಟರಿ ಹೇಳಿದ್ದು.


Ad Widget

ಸಂಸ್ಕೃತ ಓದಿ ಕೇಳಿ ಬಲ್ಲ, ಆ ಭಾಷೆಯ ಪದಪುಂಜಗಳು ಕೊಡಮಾಡುವ ಆನಂದ, ಪದಗಳ ಪ್ರಾಸ ಲಾಲಿತ್ಯ ಬೇರೆಯದೇ ಲೆವೆಲ್ ನಲ್ಲಿ ನಿಲ್ಲುವಂತದ್ದು. ಅಂತಹಾ ಪವರ್ ಫುಲ್ ಭಾಷೆಯನ್ನು ಬಳಸಿಕೊಂಡು ಮತ್ತೊಂದು ಪವರ್ ಪ್ಯಾಕ್ಡ್ ಆಟದ ಕಾಮೆಂಟರಿ ಮಾಡಿದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ ?!

ಇತ್ತೀಚೆಗೆ ಇಲ್ಲಿನ ಸಂಸ್ಕೃತ ಭಾರತಿ ಆವರಣದ ಸಮೀಪ ಮಕ್ಕಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ ಅವರು ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ದರು. ಅವರೇನೋ ಸಹಜವಾಗಿ ತಮ್ಮ ಸಂಸ್ಕೃತ ಪ್ರೀತಿ ಮತ್ತು ಜ್ಞಾನದಿಂದ ಕಾಮೆಂಟರಿ ಮಾಡಿದ್ದರು. ಸಂಸ್ಕೃತದಲ್ಲಿ ಕಮೆಂಟ್ ಮಾಡಿರುವ ಈ ವಿಡಿಯೋವನ್ನು, ‘ಸಂಸ್ಕೃತ ಮತ್ತು ಕ್ರಿಕೆಟ್’ ಎಂದು ಶೀರ್ಷಿಕೆ ಕೊಟ್ಟು ಟ್ವೀಟ್ ಮಾಡಿದ್ದರು. ಈ ಸಂಸ್ಕೃತ ಕಾಮೆಂಟರಿಗೆ ಸಾಗರಿಗಳ ಮಹಾಪೂರವೇ ಹರಿದು ಬಂದಿದೆ ಖುದ್ದು ಪ್ರಧಾನಿಯವರು ಅದಕ್ಕೆ ಸ್ಪಂದಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ನಾರಾಯಣ ಅವರು, ‘ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿಯ ಗಲ್ಲಿಯಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಅಂದುಕೊಂಡು ಮಾಡಿದ್ದಷ್ಟೇ. ಆದರೆ ಇದು ಈ ಪರಿಯಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲೇ ಇಲ್ಲ’ ಎಂದಿದ್ದಾರೆ.

error: Content is protected !!
Scroll to Top
%d bloggers like this: