ಪತಿಯ ಸಂಬಳ ಎಷ್ಟೆಂದು ತಿಳಿಯಲು ಪತ್ನಿ ಮಾಡಿದಳು ಖತರ್ನಾಕ್ ಐಡಿಯಾ | ಅದೇನೆಂದು ಗೊತ್ತೇ?

ಗಂಡ ಹೆಂಡತಿಯ ಮಧ್ಯೆ ಎಷ್ಟೇ ಹೊಂದಾಣಿಕೆಗಳು ಇದ್ದರೂ ಸಹ ಒಂದಲ್ಲ ಒಂದು ವಿಷಯದಲ್ಲಿ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಹಾಗೆಯೇ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಬಾರದು ಎಂಬ ಭಾವನೆಗಳು ಇರುತ್ತೆ. ಅದಕ್ಕೂ ಮೀರಿ ಕೆಲವೊಂದು ವಿಷಯಗಳನ್ನು ಕೇಳಬಾರದು, ಹೇಳಬಾರದು, ಮಾಡಬಾರದು ಎಂಬ ನುಡಿಗಳಿವೆ. ಅದರಲ್ಲೂ ಗಂಡನ ದುಡಿಮೆ ಏನು, ಆದಾಯ ಎಷ್ಟು ಅನ್ನೋ ಪ್ರಶ್ನೆ ಮಾಡಿದಾಗ ಅವರ ಈಗೋ ಟಚ್ ಮಾಡಿದಂತೆ ಮತ್ತು ಯಾರು ಕೇಳಿದರೂ ಸಹ ಹೆಚ್ಚಿನವರು ಎಲ್ಲರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ.

ಕೆಲವರಂತೂ ತಮ್ಮ ಅರ್ಧಾಂಗಿ ಹೆಂಡತಿಯೊಂದಿಗೂ ಈ ಬಗ್ಗೆ ಶೇರ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಿರುವಾಗ ಇಲ್ಲೊಬ್ಬಳು ಸಂಜು ಗುಪ್ತ ಎಂಬ ಮಹಿಳೆ ತನ್ನ ಗಂಡನ ಆದಾಯದ ಬಗ್ಗೆ ಪ್ರಶ್ನೆ ಮಾಡಿರುತ್ತಾಳೆ. ಆದರೆ ಸಂಜು ಗುಪ್ತಳಿಗೆ ಆಕೆಯ ಗಂಡ ತನ್ನ ಸಂಬಳ ಎಷ್ಟು ಎಂದು ಹೇಳಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಸಂಜು ಗುಪ್ತ ನೇರವಾಗಿ RTI (ಮಾಹಿತಿ ಹಕ್ಕು) ಮೂಲಕ ಗಂಡನ ಆದಾಯದ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾಳೆ. ಈ ಪ್ರಕರಣ ಇತ್ತೀಚೆಗೆಷ್ಟೇ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು ತನ್ನ ವಿಚ್ಛೇದನ ಪಡೆಯಲು ನಿರ್ಧರಿಸಿದ ಸಮಯದಲ್ಲಿ ಆತನ ಸಂಬಳದ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದಾಳೆ. ಆದರೆ , ಪತಿ ತನ್ನ ಸಂಬಳದ ಬಗ್ಗೆ ಹೇಳಲು ನಿರಾಕರಿಸಿದ್ದಾನೆ. ಇದರಿಂದ ಕುತೂಹಲಕ್ಕೊಳಗಾದ ಮಹಿಳೆ RTI ಮೊರೆ ಹೋಗಿದ್ದು ತನ್ನ ಗಂಡನ ಸಂಬಳದ ಬಗ್ಗೆ ಮಾಹಿತಿ ಪಡೆದಿದ್ದಾಳೆ.

ವಿಚ್ಛೇದನವು ಪರಸ್ಪರ ಒಪ್ಪಿಗೆಯಿಲ್ಲದಿದ್ದಾಗ ಕೆಲವು ಸಂದರ್ಭಗಳಲ್ಲಿ ಪತ್ನಿಯು ಪತಿಯ ಆದಾಯದ ಬಗ್ಗೆ ಮಾಹಿತಿ ಹಾಗೂ ಜೀವನಾಂಶವನ್ನು ಕೇಳಬಹುದು. ಪತಿ ಆದಾಯದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರೆ, ಹೆಂಡತಿಯು ಆದಾಯವನ್ನು ಬೇರೆ ರೀತಿಯಲ್ಲಿ ಕಂಡುಹಿಡಿಯಬಹುದು ಎಂಬ ಕಾನೂನು ಸಹ ಇದೆ.ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ), ಇತ್ತೀಚಿನ ಆದೇಶದಲ್ಲಿ, ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ. ಸಂಜು ಗುಪ್ತಾ ಎಂಬ ಮಹಿಳೆ ತನ್ನ ಸಂಗಾತಿಯ ಆದಾಯದ ವಿವರಗಳನ್ನು ಕೋರಿ ಆರ್‌ಟಿಐ ಸಲ್ಲಿಸಿದ ನಂತರ ಈ ಆದೇಶ ಬಂದಿದೆ.

ಆರಂಭದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO), ಬರೇಲಿ ಕಚೇರಿಯ ಆದಾಯ ತೆರಿಗೆ ಅಧಿಕಾರಿ ಐಟಿಐ ಅಡಿಯಲ್ಲಿ ಈ ಮಾಹಿತಿಯನ್ನು ನೀಡಲು ಪತಿ ನಿರಾಕರಿಸಿದ್ದರು. ಮಹಿಳೆ ಮೇಲ್ಮನವಿ ಸಲ್ಲಿಸುವ ಮೂಲಕ ಮೊದಲ ಮೇಲ್ಮನವಿ ಪ್ರಾಧಿಕಾರದಿಂದ (ಎಫ್‌ಎ) ಸಹಾಯವನ್ನು ಕೋರಿದರು. ಆದಾಗ್ಯೂ, FAA CPIO ನ ಆದೇಶವನ್ನು ಎತ್ತಿಹಿಡಿದಿದೆ. CIC ಗೆ ಎರಡನೇ ಮೇಲ್ಮನವಿ ಸಲ್ಲಿಸಿ ಮಾಹಿತಿ ಪಡೆಯಬೇಕಾಯಿತು. ಕೇಂದ್ರ ಮಾಹಿತಿ ಆಯೋಗವು ತನ್ನ ಹಿಂದಿನ ಕೆಲವು ಆದೇಶಗಳು ಮತ್ತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿತು. ಮತ್ತು ಸೆಪ್ಟೆಂಬರ್ 19, 2022 ರಂದು ತನ್ನ ಆದೇಶವನ್ನು ನೀಡಿತು.

ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಅದು CPIO ಗೆ ನಿರ್ದೇಶಿಸಿದೆ.ಕೊನೆಗೂ ಸಂಜು ಗುಪ್ತ ಎಂಬಾಕೆ ತನ್ನ ಗಂಡನ ಆದಾಯವನ್ನು ಪತ್ತೆ ಹಚ್ಚಿ ಸಾಧನೆ ಮಾಡಿದಂತೆ ಆಗಿದೆ.

Leave A Reply

Your email address will not be published.