ಪರೇಶ್ ಮೇಸ್ತನ ಸಾವನ್ನು ಬಿಜೆಪಿಯವರು ರಾಜಕೀಯ ಮಾಡಿದ್ದಾರೆ – ಯು ಟಿ ಖಾದರ್

2017ರಲ್ಲಿ ಕೊಲೆಯಾದ ಹೊನ್ನಾವರದ ಮೀನುಗಾರ ರಾಗಿದ್ದ ಪರೇಶ್ ಮೇಸ್ತ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಈ ಕುರಿತು ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ವಿಚಾರದ ಕುರಿತಾಗಿ ಕಾಂಗ್ರೆಸ್‌ ಶಾಸಕ ಯು.ಟಿ ಖಾದರ್‌ ತೀವ್ರ ಆಕ್ರೋಶ ಹೊರಹಾಕಿದ್ದು, “ಸಾವಿನ ಮನೆಯಲ್ಲಿ ರಾಜಕೀಯ ಮಾಡಿದ್ದಾರೆ” ಎಂದು ಬಿಜೆಪಿಯ ಮೇಲೆ ಕಿಡಿಕಾರಿದ್ದಾರೆ.
ಪರೇಶ್ ಮೇಸ್ತ ಹತ್ಯೆ ಪ್ರಕರಣವನ್ನು ಕೋಮುವಾದಕ್ಕೆ ಬಳಕೆ ಮಾಡಲಾಗಿದ್ದು, ಈ ಸಾವಿನ ಸಮಯದಲ್ಲಿ ʻಸಾವಿನ ಮನೆಯನ್ನು ಪ್ರವಾಸಿ ಕೇಂದ್ರವನ್ನಾಗಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು, ಹಿಂದೂಗಳ ಹತ್ಯೆಯನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಈ ಕೊಲೆ ಘಟನೆಯು 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದಿದ್ದು, ಮೀನುಗಾರ ಪರಮೇಶ್ ಮೇಸ್ತ ನಾಪತ್ತೆಯಾಗಿ, ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಾಸ್ಥಾನದ ಹಿಂಭಾಗದ ಹಟ್ಟಿ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಇದರಿಂದಾಗಿ ಸುತ್ತಮುತ್ತಲ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಯಾಗಿತ್ತು.

2017 ಡಿಸೆಂಬರ್ 11 ರಂದು ಮೇಸ್ತಾ ಅವರನ್ನು ಕೊಲ್ಲಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳು ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಪೊಲೀಸರಿಗೆ ಗಾಯಗಳಾಗಿ ವಾಹನಗಳು ಜಖಂ ಮಾಡಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.


ಈ ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ , ಪರೇಶ್ ಮೇಸ್ತಾ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವ ಭರವಸೆಯನ್ನು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ನೀಡಿದ್ದರು ಆದರೆ, ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದು ಈ ನಿರ್ಧಾರವನ್ನು ಕೈ ಬಿಡಲಾಗಿತ್ತು.


ಕೊನೆಗೆ ಪೋಷಕರ ಒತ್ತಾಯದ ಮೇರೆಗೆ ಸಾವಿನ ತನಿಖೆ ನಡೆಸುವಂತೆ ನಿರ್ಧಾರ ಮಾಡಿ ಈ ಪ್ರಕರಣದ ಆರೋಪದಲ್ಲಿ ಐವರನ್ನು ಬಂಧಿಸಲಾಗಿದೆ. ಸತತ ನಾಲ್ಕೂವರೆ ವರ್ಷಗಳ ಕಾಲ ತನಿಖೆ ನಡೆಸಿ ಸಿಬಿಐ ತನ್ನ ತನಿಖಾ ವರದಿಯನ್ನು ಇದೀಗ ನ್ಯಾಯಾಲಯಕ್ಕೆ ಸಲ್ಲಿಸಿದೆ

Leave A Reply

Your email address will not be published.