ಓದಿಕೋ ಎಂದಿದ್ದೇ ತಪ್ಪಾಯಿತೇ ? ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!!!

ವಿದ್ಯಾರ್ಥಿಗಳು ತಮ್ಮ ಜೀವನವನ್ನು ಲೆಕ್ಕಿಸದೆ ಇಲ್ಲಸಲ್ಲದ ಸಣ್ಣ ಪುಟ್ಟ ವಿಷಯಗಳಿಗೆ ಬೇಸರ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಕೊನೆಗಾಲದಲ್ಲಿ ಹೆತ್ತವರಿಗೆ ಆಸರೆಯಾಗಬೇಕಿದ್ದ ಮಕ್ಕಳು ತಮ್ಮ ಭವಿಷ್ಯವನ್ನು ತಾವೇ  ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ ತಾಯಿಯಂದಿರು ಹೇಳಿದ ಬುದ್ಧಿಮಾತಿಗೆ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.


Ad Widget

ಪವಿತ್ರ (18ವ) ಎಂಬ ವಿದ್ಯಾರ್ಥಿನಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ. ಈ ಘಟನೆಯು ತುಮಕೂರು ಜಿಲ್ಲೆಯ ಬೆಳ್ಳಾವಿ ಎಂಬ ತಾಲೂಕಿನಲ್ಲಿ ನಡೆದಿದೆ.

ತಂದೆ ತಾಯಿಯು ತೋರಿದ ಪ್ರೀತಿ, ಕಾಳಜಿಯ ಮಾತು ಗಳೇ  ಮಗಳ ಪಾಲಿಗೆ ಮುಳುವಾಯಿತೇ ಎಂದು ಈಗ ಯೋಚಿಸುವಂತಾಗಿದೆ. ʻಆಟವಾಡೋದ್ರಲ್ಲಿಯೇ ಸಮಯ ವ್ಯರ್ಥ ಮಾಡುತ್ತಿಯಾ, ಓದಿಕೋʼʼ ಎಂದು ಬುದ್ಧಿಮಾತಿನ ವಿಷಯಕ್ಕೆ ಮನನೊಂದು ಪ್ರಥಮ ವರ್ಷ ಬಿಕಾಂ ಓದುತ್ತಿದ್ದ ಪವಿತ್ರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ಬೆಳ್ಳಾವಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top
%d bloggers like this: