Period Panties : ಇದನ್ನು ಧರಿಸಿದರೆ ಮುಟ್ಟಿನ ಸಮಯದಲ್ಲಿ ಆರಾಮ ಖಂಡಿತ | ಸ್ಯಾನಿಟರಿ ಪ್ಯಾಡ್ ಬಿಟ್ಬಿಡಿ, ಪೀರಿಯೆಡ್ಸ್ ಪ್ಯಾಂಟಿ ಬಳಸಿ !!!

Health news Period panties are better than sanitory pads and tampons

Period panties: ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು. ಹಿಂದಿನ ಕಾಲದಲ್ಲಿ ಋತುಮತಿಯಾದಾಗ ಬಟ್ಟೆ ಬಳಸುತ್ತಿದ್ದುದ್ದು ತಿಳಿದ ವಿಚಾರ ಆದರೆ ಈಗ ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತಿದೆ.

ಋತುಚಕ್ರದ ಸಮಯದಲ್ಲಿ ಕೆಲವರಿಗೆ ಅತೀವ ರಕ್ತಸ್ರಾವವಾಗುವ, ರಕ್ತ ಹೆಪ್ಪಗಟ್ಟುವಿಕೆ ಕಂಡುಬಂದರೆ, ಮತ್ತೆ ಕೆಲವರಿಗೆ ತೀವ್ರ ಮೈಕೈ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ರಕ್ತ ಸ್ರಾವವಾಗುವ ಜೊತೆಗೆ ಸ್ಯಾನಿಟರಿ ಪ್ಯಾಡ್ ಬಳಸಿದರೂ ಕೂಡ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತದೆ.

ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್ಸ್ ನ ಸಮಸ್ಯೆ ಇರುವುದು ಸಹಜವಾಗಿದ್ದು, ದಿನಾಂಕ, ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ, ಈ ನೋವು ಯಾತನೆಯ ಅಸಹನೀಯ .

ಆರೋಗ್ಯದ ದೃಷ್ಟಿಯಿಂದ ಋತುಚಕ್ರದ ಸಮಯದಲ್ಲಿ ನೈರ್ಮಲ್ಯವು ಪ್ರಮುಖ ವಿಷಯಗಳಲ್ಲಿ ಒಂದಾಗಿದ್ದು, ಕೆಲವರಲ್ಲಿ ಅವಧಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯೂ ಕಂಡು ಬರುತ್ತದೆ. ಹೀಗಿದ್ದಾಗ ಮುಟ್ಟಿನ ದಿನಗಳಲ್ಲಿ ಸಂಪೂರ್ಣ ಸ್ವಚ್ಛವಾಗಿರಲು ಸರಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಮಹಿಳೆಯರಿಗೆ ನೆರವಾಗಲು, ಪೀರಿಯೆಡ್ಸ್‌ ಸಮಯದಲ್ಲಿ ಬಳಸಲು ಹಲವಾರು ಬಗೆಯ ಉತ್ಪನ್ನಗಳನ್ನು ಹೊರತರಲಾಗುತ್ತಿದ್ದು, ಅದರಲ್ಲಿ ಹೊಸದಾಗಿರುವಂಥದ್ದು ಪೀರಿಯೆಡ್ಸ್ ಪ್ಯಾಂಟಿಗಳು(Period panties). ಹೆಚ್ಚಿನ ಮಹಿಳೆಯರು ಪೀರಿಯೆಡ್ಸ್ ಸಮಯದಲ್ಲಿ ಟ್ಯಾಂಪೂನ್‌ಗಳು, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಪೀರಿಯೆಡ್ಸ್ ಸಮಯದಲ್ಲಿ ಬಳಸಬಹುದಾದ ಹೊಸ ಉತ್ಪನ್ನ ಹೆಚ್ಚು ಪ್ರಯೋಜನಕಾರಿಯಾಗಿದೆ .

ಸಾಮಾನ್ಯ ಒಳ ಉಡುಪುಗಳಂತೆ ಇದ್ದು, ಪೀರಿಯೆಡ್ಸ್ ಸಮಯದಲ್ಲಿ ರಕ್ತವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿಯಾಗಿದ್ದು, ಈ ಪ್ಯಾಂಟಿಗಳು ಸ್ಯಾನಿಟರಿ ಪ್ಯಾಡ್‌ನಂತೆ ಕಾರ್ಯನಿರ್ವಹಿಸುತ್ತವೆ. ಎರಡು ಟ್ಯಾಂಪೂನ್‌ಗಳಿಗೆ ಸಮಾನವಾದ ರಕ್ತವನ್ನು ಹಿಡಿದಿಡುವಂತೆ ಇದನ್ನು ತಯಾರಿಸಲಾಗಿದ್ದು, ಅವುಗಳನ್ನು ತೊಳೆದು ಮರುಬಳಕೆ ಕೂಡ ಮಾಡಬಹುದಾಗಿದೆ.

ತುಂಬಾ ರಕ್ತಸ್ರಾವ ಇರುವವರು, ಅನಿಯಮಿತ ಮುಟ್ಟಿನ ಸಮಸ್ಯೆ, ರಕ್ತಸ್ರಾವ ಸರಿಯಾಗಿ ಆಗದಿದ್ದಾಗ, ಪೀರಿಯಡ್ ನ ಸಮಯ ಹತ್ತಿರವಾಗಿದೆ ಎಂಬ ಅನುಮಾನವಿದ್ದಾಗ ಬಳಸಬಹುದು. ಇದನ್ನು ಧರಿಸಿದರೆ ಯಾವುದೇ ಕಲೆ ಬಟ್ಟೆಗೆ ಆಗುವುದಿಲ್ಲ. ಇದರ ಮುಖ್ಯ ಉದ್ದೇಶ ರಕ್ತವನ್ನು ಹೀರಿಕೊಂಡು, ಲೀಕ್‌ ಆಗದಂತೆ ತಡೆಗಟ್ಟಿ, ಒದ್ದೆಯ ಅನುಭವವೂ ಆಗದಂತೆ ತಡೆಗಟ್ಟುತ್ತದೆ.

ಈ ಪ್ಯಾಂಟಿಗಳು ಉತ್ತಮ ಹೀರಿಕೊಳ್ಳುವಿಕೆಗಾಗಿ ಮೂರು ಪದರಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಅವಧಿಯ ಪ್ಯಾಂಟಿಯು ಮುಟ್ಟಿನ ರಕ್ತವನ್ನು ಹೀರಿಕೊಳ್ಳುತ್ತದೆ. ಯೋನಿ ಡಿಸ್ಚಾರ್ಜ್, ಬೆವರು, ಮುಟ್ಟಿನ ರಕ್ತ ಮತ್ತು ಸಣ್ಣ ಮೂತ್ರದ ಸೋರಿಕೆಯ ರೂಪದಲ್ಲಿ ತೇವಾಂಶವು ಆವಿಯಾಗುತ್ತದೆ..

ದಿನಕ್ಕೆ 12 ಗಂಟೆಗಳ ಕಾಲ ಸಾಮಾನ್ಯ ಒಳ ಉಡುಪುಗಳಂತೆ ಪೀರಿಯಡ್ ಪ್ಯಾಂಟಿಯನ್ನು ಧರಿಸಬಹುದಾಗಿದೆ. ಪರಿಸರ ಸ್ನೇಹಿಯಾಗಿದ್ದು, ಈ ನವೀನ ಉತ್ಪನ್ನವು ಬಳಕೆಗೆ ಸುರಕ್ಷಿತವಾಗಿದೆ ಆದರೆ, ಬಳಕೆಯ ನಂತರ ಅದನ್ನು ಸರಿಯಾಗಿ ತೊಳೆಯುವುದು ಮುಖ್ಯವಾಗಿದ್ದು, ಅದನ್ನು ಮರುಬಳಕೆ ಮಾಡುವ ಮೊದಲು ಅದು ಸಂಪೂರ್ಣವಾಗಿ ಒಣಗಿದೆಯೇ? ಎಂದು ಖಚಿತಪಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ಬೇರೆ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.

ಸ್ಯಾನಿಟರಿ ಪ್ಯಾಡ್ ಗಳಿಗೆ ಹೋಲಿಸಿದರೆ ಅವಧಿಯ ಪ್ಯಾಂಟಿಗಳು ಹಗುರವಾಗಿದೆ. ಸ್ಯಾನಿಟರಿ ಪ್ಯಾಡ್ ನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಬಳಸುವುದು ಒಳ್ಳೆಯದಲ್ಲ. ಆದರೆ ಅವಧಿಯ ಪ್ಯಾಂಟಿಯನ್ನು ಎಷ್ಟು ಸಮಯ ಬೇಕಾದರೂ ಧರಿಸಬಹುದು. ಆದರೆ, ದೂರ ಪ್ರಯಾಣ ಮಾಡುವಾಗ ಇಲ್ಲವೇ ಅಧಿಕ ರಕ್ತಸ್ರಾವ ಕಾಣಿಸಿಕೊಂಡರೆ ಬದಲಿಸಲು ಬೇರೆ ವ್ಯವಸ್ಥೆ ಇಲ್ಲದೆ ಹೋದಾಗ ವಾಸನೆ ಬರುವ ಸಾಧ್ಯತೆ ಇದೆ. ಇದೆಲ್ಲವನ್ನೂ ಹೊರತು ಪಡಿಸಿದರೆ, ಮುಟ್ಟಿನ ಸೆಳೆತಕ್ಕೆ ಪೀರಿಯಡ್ ಪ್ಯಾಂಟಿಯ ಬಳಕೆ ಸಹಕಾರಿಯಾಗಿದ್ದು, ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ: ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ? 

Comments are closed.