ಚಿಕ್ಕಮಗಳೂರು:ಜಿಲ್ಲಾ ಮಟ್ಟದ ಕ್ರೀಡಾಕೂಟ!! ಪದವಿ ಪೂರ್ವ ಕಾಲೇಜು ಮೂಡಿಗೆರೆಗೆ ಹಲವು ಪ್ರಶಸ್ತಿ, ರಾಜ್ಯ ಮಟ್ಟಕ್ಕೆ ಆಯ್ಕೆ!!

ಸೆಪ್ಟೆಂಬರ್ 20,21 ರಂದು ಚಿಕ್ಕಮಗಳೂರಿನಲ್ಲಿ ನೆಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಬಾಲಕರ ಪದವಿ ಪೂರ್ವ ಕಾಲೇಜು ಮೂಡಿಗೆರೆ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕರ ಗುಂಪು ಆಟಗಳಲ್ಲಿ ಬಾಲಕರ ಖೋ ಖೋ ತಂಡ ಪ್ರಥಮ ಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ.

ಟೆನ್ನಿಕಾಯಿಟ್ ನಲ್ಲಿ ಮೊಹಮ್ಮದ್ ಆವೇಜ಼್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫುಟ್ಬಾಲ್ ಆಟದಲ್ಲಿ ನಮ್ಮ ಕಾಲೇಜಿನ ರವಿತೇಜ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕಿಯರ ವಿಭಾಗಲ್ಲಿ ಖೋ ಖೋ,
ಕಬಡ್ಡಿ ಆಟಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ನಮ್ಮ ಕಾಲೇಜಿನ ಪ್ರಜ್ವಲ್ H V, 100ಮೀಟರ್ಸ್, 200ಮೀಟರ್ಸ್, 110 ಮೀಟರ್ಸ್ ಹರ್ಡಲ್ಸ್ ನಲ್ಲಿ ಪ್ರಥಮ,
ಪ್ರಶಾಂತ್ 100 ಮೀಟರ್ಸ್ ದ್ವೀತಿಯ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ರಿಲೇ ತಂಡ 4×100 ಮತ್ತು 4×400ನಲ್ಲಿ ಪ್ರಥಮ ಸ್ಥಾನ ಪಡೆದರೆ,ಬಾಲಕಿಯರ ವಿಭಾಗದಲ್ಲಿ ಜೆನಿತಾ ರೊಡ್ರಿಗಸ್ 200, 400 ಮೀಟರ್ಸ್ ನಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಚಂದನ800,1500ಮೀಟರ್ಸ್ ನಲ್ಲಿ ಪ್ರಥಮ.
ಅಪೂರ್ವ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ.
ಬಾಲಕಿಯರ ರಿಲೇ ತಂಡ 4×100 ಮೀಟರ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಈ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ಬಹುಮಾನ ವಿಜೇತರಿಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಅಭಿನಂದನೆಗಗಳನ್ನು ಸಲ್ಲಿಸಿದ್ದು, ಮುಂದಿನ ಹಂತದ ಪಂದ್ಯಕ್ಕೆ ಸಜ್ಜುಗೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸಿ ಪ್ರೋತ್ಸಾಹಿಸಿದ್ದಾರೆ.

Leave A Reply

Your email address will not be published.